ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಉಸ್ತುವಾರಿ ಸಚಿವರನ್ನಾಗಿ ಗೋವಿಂದ ಕಾರ್ಜೋಳ ಅವರಿಗೆ ನೇಮಿಸಲಾಗಿದ್ದು, ಈ ಕುರಿತು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಉಸ್ತುವಾರಿ ಸಚಿವ ಗೋವಿಂದ ಕಾರ್ಜೋಳ ಅವರಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
Sri. Karjol has been made incharge of Kalaburagi.He is a seasoned politician & his experience will help the district.He will have all the support from our MLAs for development of the district. Wish him all the best. But Kalaburgi is additional charge & hope he gives us more time
— Priyank Kharge (@PriyankKharge) September 16, 2019
ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಅವರಿಗೆ ಹೃತ್ಪೂರ್ವಕ ಶುಭಾಶಯ ಕೋರುತ್ತೇನೆ. ಅವರೊಬ್ಬ ಈ ಕಾಲಮಾನದ ಹಿರಿಯ ರಾಜಕಾರಣಿ ಅವರ ಅನುಭವ ಜಿಲ್ಲೆಯ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಜಿಲ್ಲೆಯ ಅಭಿವೃದ್ದಿಗಾಗಿ ಎಲ್ಲ ಶಾಸಕರು ಅವರನ್ನು ಬೆಂಬಲಿಸಲಿದ್ದಾರೆ. ಕಲಬುರಗಿ ಜಿಲ್ಲೆಯನ್ನು ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದ್ದರೂ ಕೂಡಾ ಅವರು ಜಿಲ್ಲೆಗೆ ಹೆಚ್ಚಿನ ಸಮಯ ನೀಡಲಿದ್ದಾರೆ ಎಂದು ಭಾವಿಸುತ್ತೇನೆ.