ಜ್ಞಾನಬಂಧು ಶಾಲೆ : ಕಲ್ಯಾಣ ಕರ್ನಾಟಕ ದಿನಾಚರಣೆ

1
140

ಕೊಪ್ಪಳ: ತಾಲೂಕಿನ ಭಾಗ್ಯನಗರದ ಜ್ಞಾನ ಬಂಧು ಹಿರಿಯ ಪ್ರಾಥಮಿಕ & ಪ್ರೌಢ ಶಾಲೆಯಲ್ಲಿ ಮಂಗಳವಾರದಂದು ಕಲ್ಯಾಣ ಕರ್ನಾಟಕ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಕವಲೂರ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ಶಾಲಾ ಶಿಕ್ಷಕರಾದ ಮಂಜುನಾಥ ಶೆಟ್ಟರ್ ಮಾತನಾಡಿ, ಸರ್ದಾರ್ ಪಟೇಲರು ಹೈದ್ರಾಬಾದ್ ಕರ್ನಾಟಕ ಭಾರತದ ಒಕ್ಕೂಟಕ್ಕೆ ಒಳಪಡಿಸಲು ನಿಜಾಮನ ದಬ್ಬಾಳಿಕೆ ವಿರುದ್ದ ಸಂವಿಧಾನ ಬದ್ಧವಾದ ಮತ್ತು ಮಂತ್ರಿಮಂಡಳದ ಒಪ್ಪಿಗೆ ಮೇರೆಗೆ ಸೆಪ್ಟೆಂಬರ್ 13, 1948 ರಂದು ಪೋಲಿಸ್ ಕಾರ್ಯಚರಣೆಯನ್ನು 5 ಭಾಗಗಳಿಂದ ನಡೆಸಿ ನಿಜಾಮನ ಹುಟ್ಟುಡಗಿಸಿ, ರಜಾಕಾರರನ್ನು ಮಟ್ಟಹಾಕಲಾಗಿ ಕೊನೆಗೆ 17ನೇ ಸೆಪ್ಟೆಂಬರ್ 1948 ರಂದು ನಿಜಾಮನು ರೇಡಿಯೊ ಮೂಲಕ ಭಾರತದ ಒಕ್ಕೂಟಕ್ಕೆ ವಿಲೀನಗೊಳುತ್ತೇನೆ ಎಂದು ನಿರ್ಧಾರ ತಿಳಿಸುತ್ತಾನೆ. ಈ ಕಾರ್ಯ ಯಶಸ್ವಿಗೊಳಿಸಲು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕೆ.ಎಮ್. ಮುನ್ಸಿ ಅವರ ಪಾತ್ರ ಪ್ರಮುಖವಾದದ್ದು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾದ ದಾನಪ್ಪ ಜಿ.ಕವಲೂರು ಕಲ್ಯಾಣ ಕರ್ನಾಟಕ ಬಗ್ಗೆ ಮಾತನಾಡಿ, ನಿಜಾಮನ ದಬ್ಬಾಳಿಕೆಯಿಂದ ನಮ್ಮ ಈ ಭಾಗದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸ್ವಾತಂತ್ಯ ಕ್ಷೀಣಿಸಿತ್ತು. ಸರ್ದಾರ ಪಟೇಲರ್ ದಿಟ್ಟ ನಿಲುವಿನಿಂದ ವಿಮೋಚನೆಗೊಳ್ಳುವಂತಾಯಿತು. ಈ ಕಾರಣದಿಂದಾಗಿ ನಾವು ಇಂದು ಹಿಂದುಳಿದವರು ಎಂಬ ಪಟ್ಟ ತೊಡೆದುಹಾಕಲು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಾಧನೆ ಸಾಧಿಸು ಮಹತ್ತರವಾದ ಜವಾಬ್ದಾರಿ ನಿರ್ವಹಿಸೋಣ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕೆ. ರೋಜ್ ಮೇರಿ, ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಜ್ಯೋತಿ ಎಸ್.ಎಸ್, ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here