ಹಲವು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

0
113

ಕಲಬುರಗಿ: ಈ ಬರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಭರ್ಜರಿ ಜಯ ಸಾಧಿಸಿದರೆ ಅದು ದೇಶದ ಗೆಲುವು ಮೋದಿಯವರನ್ನು ಸೋಲಿಸಿದರೆ ದೇವರು ಕೂಡ ಕ್ಷಮಿಸಲಾರರು ಎಂದು ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್ ಹೇಳಿದರು.

ಸೇಡಂ ಮಂಡಲದ ಅಡಕಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿ ನಾನು ವಿಧಾನಸಭಾ ಚುನಾವಣೆಯಲ್ಲಿ ಕುತಂತ್ರ ರಾಜಕಾರಣದಿಂದ ಸೋತಿರಬಹುದು ಆದರೆ ಈ ಬಾರಿ ಮೋದಿಯವರನ್ನು ಸೋಲಿಸಿದರೆ ದೇವರು ಕ್ಷಮಿಸುವುದಿಲ್ಲ ಮೂರನೇ ಬಾರಿಗೆ ಮೋದಿಯವರ ಪ್ರಧಾನಿಯಾಗಬೇಕು ಮಂತ್ರಿ ಆಗಬೇಕು ನಿಮ್ಮೆಲ್ಲರ ಆಶೀರ್ವಾದ ಬಿಜೆಪಿ ಪಕ್ಷದ ಮೇಲಿರಲಿ ನಿಮ್ಮ ಪಾದಮಟ್ಟಿ ನಮಸ್ಕಾರ ಮಾಡಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

Contact Your\'s Advertisement; 9902492681

ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಭಾರತವನ್ನು ಪ್ರಬಲ ಆರ್ಥಿಕ ರಾಷ್ಟ್ರವಾಗಿ ಬೆಳೆಸಿದರು. ಭಾರತೀಯರಿಗೆ ಉಚಿತ ರೇಶನ್ ವಿತರಿಸಿದರು. ಕರೋನಾ ಲಸಿಕೆ ತಯಾರು ಮಾಡಿ ಜೀವವನ್ನು ಉಳಿಸಿದರು. ರೈತಾಪಿ ವರ್ಗಕ್ಕೆ ಹಲವು ನೆರವು ಯೋಜನೆ ನೀಡಿದರು. ಅಡಕಿ ಗ್ರಾಮಕ್ಕೆ ಬಿಜೆಪಿಯ ಆಡಳಿತವಿದ್ದಾಗ ಕಂದಾಯ ಸಚಿವರನ್ನು ಕರೆಸಿ ಜನರಿಗೆ ವಿವಿಧ ಯೋಜನೆಗಳ ಫಲಾನುಭವಿಗಳಾಗಿಸುವಂತೆ ಮಾಡಿ ಹಕ್ಕುಪತ್ರ ವಿತರಿಸಲಾಯಿತು.

ಇಲ್ಲಿನ ಸಹಕಾರಿ ಬ್ಯಾಂಕಿಗೆ ಹತ್ತಾರು ಕೋಟಿ ರೂಪಾಯಿಗಳನ್ನು ನೀಡಿ ರೈತರಿಗೆ ಬಡ್ಡಿ ರಹಿತ ಸಾಲ ವಿತರಿಸಲು ಅನುವು ಮಾಡಿಕೊಡಲಾಗಿದೆ. ಇದಕ್ಕೆಲ್ಲ ಬೆಂಬಲವಾಗಿ ನಿಂತಿದ್ದರು. ಅಡಕಿಯಲ್ಲಿ ಕಸ್ತೂರಿ ರಂಗನಾಥ ದೇವಸ್ಥಾನ ನಿರ್ಮಾಣ ಮಾಡಲು ಹೊರಟಾಗ ಸೇಡಂನ ಈಗಿನ ಶಾಸಕರು ಮತ್ತು ಸಚಿವರು ಲಾಠಿಚಾರ್ಜ್ ಮಾಡಿಸಿ ಭಕ್ತರನ್ನು ಬಳ್ಳಾರಿ ಜೈಲಿಗೆ ಅಟ್ಟಿದ್ದರು. ಆದರೆ ಬಿಜೆಪಿ ಸರಕಾರವು ಒಂದುವರೆ ಕೋಟಿ ರೂಪಾಯಿಯನ್ನು ನೀಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೊಂಡಿತು. ಧರ್ಮ ವಿರೋಧಿಗಳಿಗೆ ಈ ಬಾರಿ ಸೇಡಂ ಮಂಡಲದ ಜನತೆ ತಕ್ಕ ಶಿಕ್ಷೆಯನ್ನು ನೀಡಲಿದ್ದಾರೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತಕ್ಕೆ ಮನಸ್ಸು ಸೇಡಂ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇತರ ಪಕ್ಷಗಳನ್ನು ತೊರೆದು ಸಾಲು ಸಾಲಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಉತ್ತಮ ಲಕ್ಷಣವಾಗಿದ್ದು ಈ ಬಾರಿ ಸೇಡಂ ಮಂಡಲದಿಂದ ಅತ್ಯಧಿಕ ಬಹುಮತವನ್ನು ಬಿಜೆಪಿ ಪಡೆಯಲಿದೆ ಅಡಕಿ ಗ್ರಾಮದ ಯುವಕರಾದ ವಿನೋದ್ ಯಾದವ್ ರಮೇಶ್ ರೆಡ್ಡಿ ಷರತ್ತು ಯಾದವ್ ಶರಣು ಯಾದವ್ ಸಂತೋಷ ಯಾದವ್ ನಾಗರಾಜ್ ಟಿ ಸಚಿನ್ ಅಶೋಕ್ ರೆಡ್ಡಿ ಸುನಿಲ್ ಪುನೀತ್ ಹಾಗೂ ಅನಂತ ರೆಡ್ಡಿ ಪಾಟೀಲ್ ಹಾಸನಪಲ್ಲಿ ಮತ್ತು ನಾಗಭೂಷಣ ರೆಡ್ಡಿ ನೇತೃತ್ವದಲ್ಲಿ ಸೇಡಂನ ಪ್ರಮುಖರಾದ ಶ್ರೀಕಾಂತ ರೆಡ್ಡಿ ವೆಂಕಟೇಶ್ ಪಾಟೀಲ್, ಭೀಮರೆಡ್ಡಿ ಮಲ್ಲಿಪಲ್ಲಿ, ವೆಂಕಟೇಶ ಪಾಟೀಲ್ ಮಾದ್ವಾರ, ಭೀಮಶೆಟ್ಟಿ ಇಮ್ಡಾಪುರ, ರಾಜ್ಯಶೇಖರ್ ಸ್ವಾಮಿ, ಸುಬ್ಬಾರೆಡ್ಡಿ, ಬಸವರಾಜ ಇಮ್ಡಾಪುರ, ಜವಾಹರ್ ನಗರದ ಲಾಲ ಅಹಮದ್, ವೆಂಕಟರೆಡ್ಡಿ ಪಾಟೀಲ್, ಭಗವಂತ ಪಾಟೀಲ್ ಇಮ್ಡಾಪುರ, ರವಿ ಸಿಂಗ್ ಆನಂದ ಸಿಂಗ್ ಭೀಮರೆಡ್ಡಿ ಸೇರಿ ವೆಂಕಟಪ್ಪ ಸೇರಿ ಮತ್ತಿತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here