ಎಸ್‍ಯುಸಿಐ ಅಭ್ಯರ್ಥಿಯ ಬಿರುಸಿನ ಪ್ರಚಾರ: ಕೂಲಿ ಕಾರ್ಮಿಕರ ಮತಗಳೇ ನನಗೆ ಶ್ರೀರಕ್ಷೆ

0
96

ವಾಡಿ: ದುಡಿಯುವ ಜನರ ವಿಮೋಚನೆಗಾಗಿ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷ ದೇಶದಾದ್ಯಂತ ಪ್ರಬಲ ಕ್ರಾಂತಿಕಾರಿ ಹೋರಾಟಗಳನ್ನು ಕಟ್ಟುತ್ತಿದೆ. ಚುನಾವಣೆಯನ್ನೂ ಸಹ ನಾವು ಹೋರಾಟದ ಭಾಗವಾಗಿ ಸ್ವೀಕರಿಸಿದ್ದೇವೆ. ಕೂಲಿ ಕಾರ್ಮಿಕರ ಮತಗಳೇ ನನಗೆ ಶ್ರೀರಕ್ಷೆ ಎಂದು ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಎಸ್.ಎಂ.ಶರ್ಮಾ ಹೇಳಿದರು.

ಗುರುವಾರ ಪಕ್ಷದ ನಾಯಕರೊಂದಿಗೆ ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿ ಎಸ್.ಎಂ.ಶರ್ಮಾ, ಉದ್ಯೋಗ ಖಾತ್ರಿ ಕಾರ್ಮಿಕರ ಕೈಗೆ ಕರಪತ್ರಗಳನ್ನು ಇಟ್ಟು ಮತಯಾಚನೆ ಮಾಡಿದರು. ದೇಶದಲ್ಲಿ ಬೆರಳೆಣಿಕೆಯಷ್ಟಿರುವ ದೊಡ್ಡ ಶ್ರೀಮಂತರ ಪರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆಡಳಿತ ನಡೆಸಿವೆ. ಶ್ರಮ ಕೊಳ್ಳೆ ಹೊಡೆಯುವ ಮಾಲೀಕರ ಪರವಾದ ಕಾನೂನುಗಳನ್ನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ದುಡಿಯುವ ಜನರ ಬದುಕು ದುಸ್ಥಿತಿಗೆ ತಳ್ಳಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರ ಪರ ಅಭಿವೃದ್ಧಿ ಮಾಡುವುದಾಗಿ ಮೊಸಳೆ ಕಣ್ಣೀರು ಸುರಿಸುವ ಭ್ರಷ್ಟ ರಾಜಕಾರಣಿಗಳಿಂದ ವ್ಯವಸ್ಥೆ ನರಕಯಾತನೆ ಅನುಭವಿಸುತ್ತಿದೆ. ಜನಸಾಮಾನ್ಯರ ಜೀವನ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಕಾಂಗ್ರೆಸ್-ಬಿಜೆಪಿ ಪಕ್ಷಗಳನ್ನು ಸೋಲಿಸಲು ಕೆಂಪು ಬಾವುಟದ ಎಸ್‍ಯುಸಿಐ ಪಕ್ಷಕ್ಕೆ ಮತ ಕೊಡಿ ಎಂದರು.

Contact Your\'s Advertisement; 9902492681

ಒಳ್ಳೆಯ ದಿನಗಳನ್ನು ತರುತ್ತೇನೆ ಎಂದು ದೇಶದ ಜನರನ್ನು ಮೂರ್ಖರನ್ನಾಗಿಸಿದ ನರೇಂದ್ರ ಮೋದಿ, ಹತ್ತು ವರ್ಷ ಅಧಿಕಾರದಲ್ಲಿದ್ದರೂ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿಲ್ಲ. ಬದಲಿಗೆ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ದುಬಾರಿಯಾಗಿವೆ. ಯುವಕರಿಗೆ ಕೋಟಿ ಕೋಟಿ ಉದ್ಯೋಗ ನೀಡುವ ಭರವಸೆ ಸುಳ್ಳಾಯಿತು.

ಭ್ರಷ್ಟಾಚಾರ ತಡೆಯುವುದಾಗಿ ತುತ್ತೂರಿ ಊದಿದ ಬಿಜೆಪಿ ಸ್ವತಹ ಭ್ರಷ್ಟಾಚಾರದಲ್ಲಿ ಮುಳುಗಿದೆ. ದೇಶದಲ್ಲಿ ಖಾಸಗೀಕರಣ ನೀತಿ ಜಾರಿಗೊಳಿಸಿದ ಮಹಾ ಮೋಸಗಾರ ಪಕ್ಷ ಕಾಂಗ್ರೆಸ್ಸಾದರೆ, ಅದನ್ನೇ ಅಚ್ಚುಕಟ್ಟಾಗಿ ಜಾರಿಗೆ ತಂದ ಬಿಜೆಪಿ ಸರ್ಕಾರ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಕೊಟ್ಟು ಶೋಷಣೆ ಮಾಡುತ್ತಿದೆ. ಜನದ್ರೋಹಿ ಪಕ್ಷಗಳನ್ನು ಅಧಿಕಾರದಿಂದ ದೂರ ಇಡಬೇಕಿದೆ. ಜನಪರ ಹೋರಾಟದ ಪಕ್ಷ ಎಸ್‍ಯುಸಿಐ ಅಭ್ಯರ್ಥಿಗಳನ್ನು ಗೆಲ್ಲಿಸಲು ಜನತೆ ಪಣ ತೊಡಬೇಕು ಎಂದು ಕರೆ ನೀಡಿದರು.

ಎಸ್‍ಯುಸಿಐ ಪಕ್ಷದ ಜಿಲ್ಲಾ ನಾಯಕ ಕಾಮ್ರೇಡ್ ವೀರಭದ್ರಪ್ಪಾ ಆರ್.ಕೆ, ಮುಖಂಡರಾದ ಗೌತಮ ಪರ್ತೂರ, ಶಿವುಕುಮಾರ ಆಂದೋಲಾ, ವೆಂಕಟೇಶ ದೇವದುರ್ಗಾ, ದತ್ತಾತ್ರೇಯ ಹುಡೆಕರ್, ಸಿದ್ದರಾಜ ಮದ್ರಿ, ಸಿದ್ದಾರ್ಥ್ ತಿಪ್ಪನೋರ, ಕಾರ್ಮಿಕರಾದ ವಿರೇಶ ನಾಲವಾರ, ಮಾಂತೇಶ ಉಳಗೋಳ, ಸಾಬಣ್ಣಾ ಬೆಳಗುಂಪಿ, ಕರಣಪ್ಪ ಆಂದೋಲ, ಭಾಗಮ್ಮ ಪರ್ತೂರ, ಮಹಾದೇವಿ ಹುಳಗೋಳ, ಶಿವಮ್ಮ ತಳಕಿ, ರಮಾಬಾಯಿ ತಿಪ್ಪನೊರ, ಲಲಿತಾಬಾಯಿ ಮಾವಿನ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here