ಸುರಪುರ: ಏಪ್ರಿಲ್ 8 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿದ 12 ದಲಿತ ಸಂಘರ್ಷ ಸಮಿತಿಗಳ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯೂ ರಾಜ್ಯದಲ್ಲಿ ಸಂವಿಧಾನದ ಪರವಾಗಿರುವ ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಸಮಿತಿ ಮುಖಂಡ ಅರ್ಜುನ ಭದ್ರೆ ತಿಳಿಸಿದರು.
ನಗರದಲ್ಲಿ ನಡೆದ ಸಮಿತಿ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ದೇಶದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಪಕ್ಷ ಸಂವಿಧಾನವನ್ನು ಬದಲಾಯಿಸಲು ಹೊರಟಿದೆ,ಜನರಲ್ಲಿ ಕೋಮು ದ್ವೇಷ ಹುಟ್ಟಿಸಿ ದೇಶದಲ್ಲಿ ನೆಮ್ಮದಿಯನ್ನು ಹಾಳು ಮಾಡುತ್ತದೆ,ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಈಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಸೋಲಾಗಲಿದೆ ಎನ್ನುವುದ ತಿಳಿದು ಕೋಮುವಾದದ ಭಾಷಣ ಮಾಡುತ್ತಿದ್ದಾರೆ,ತಮ್ಮ ಭಾಷಣದಲ್ಲಿ ಮಹಿಳೆಯರ ತಾಳಿಯು ಸೇರಿ ಎಲ್ಲಾ ಚಿನ್ನವನ್ನು ಅಲ್ಪಸಂಖ್ಯಾತರರಿಗೆ ಕೊಡುತ್ತಾರೆ ಕಾಂಗ್ರೆಸ್ ಸರಕಾರ ಬಂದರೆ ಎಂದು ಹೇಳಿಕೆಯನ್ನು ನೀಡುವ ಮೂಲಕ ತಮ್ಮೊಳಗಿರುವ ಕೋಮು ಭಾವನೆಯನ್ನು ಹೊರಹಾಕಿದ್ದಾರೆ.
ಈಗ ದೇಶದಲ್ಲಿ ನಡೆಯುತ್ತಿರುವ ಚುನಾವಣೆ ದೇಶದ ಬುಡವನ್ನು ಅಲುಗಾಡಿಸುವ ಚುನಾವಣೆ ನಡೆಸಲು ಬಿಜೆಪಿ ಮುಂದಾಗಿದೆ,ಮತ್ತೆ ಬಿಜೆಪಿ ಸರಕಾರ ಬಂದರೆ ಸಂವಿಧಾನ ಬದಲಿಸಿ ದೇಶದಲ್ಲಿ ಮನುಸ್ಮøತಿ ಜಾರಿಗೆ ತರುವ ಹುನ್ನಾರ ನಡೆಸಿದೆ,ಆದ್ದರಿಂದ ಈಗಲೇ ದೇಶದಲ್ಲಿರುವ ಎಲ್ಲಾ ದಲಿತ,ಹಿಂದುಳಿದ,ಅಲ್ಪಸಂಖ್ಯಾತರರು ಎಚ್ಚೆತ್ತುಕೊಂಡು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕಿದೆ,ಅದಕ್ಕಾಗಿ ನಮ್ಮ ಸಮಿತಿ ಕಾಂಗ್ರೆಸ್ ಬೆಂಬಲಿಸುತ್ತದೆ ಮತ್ತು ಎಲ್ಲರು ಕಾಂಗ್ರೆಸ್ ಗೆಲ್ಲಿಸುವಂತೆ ಕರೆ ನೀಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಅರ್ಜುನ ಗೊಬ್ಬೂರ,ರಾಮಣ್ಣ ಕಲ್ಲದೇವನಹಳ್ಳಿ,ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು.ಸುದ್ದೊಗೋಷ್ಠಿಯಲ್ಲಿ ಮುಖಂಡರಾದ ಮಹಾದೇವಪ್ಪ ಬಿಜಾಸಪುರ,ಮಾನಪ್ಪ ಬಿಜಾಸಪುರ,ಬಸವರಾಜ ದೊಡ್ಮನಿ ಸೇರಿದಂತೆ ಅನೇಕರಿದ್ದರು.