ಸುರಪುರ:ತಾಲೂಕಿನ ಜಾಲಿಬೆಂಚಿ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರೆ ಅದ್ಧೂರಿಯಾಗಿ ಜರುಗಿತು.ಜಾತ್ರೆ ಅಂಗವಾಗಿ ಮಂಗಳವಾರ ಬೆಳಿಗ್ಗೆ ಮರಡಿಯಲ್ಲಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ವಿಶೇಷವಾಗಿ ದೀಪ ಅಲಂಕಾರಗೊಳಿಸಲಾಗಿತ್ತು,ಅಲ್ಲದೆ ಬೆಳಿಗ್ಗೆ ಮಲ್ಲಿಕಾರ್ಜುನ ದೇವರ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಗ್ರಾಮದ ಜನರು ಮಲ್ಲಿಕಾರ್ಜುನ ದೇವರಿಗೆ ದೀಡ ನಮಸ್ಕಾರ ಹಾಕುವ ಮೂಲಕ ಭಕ್ತಿಯ ಹರಕೆ ಸಲ್ಲಿಸಿದರು.ಅಲ್ಲದೆ ಸೋಮವಾರ ರಾತ್ರಿಯಿಡೀ ಪಲ್ಲಕ್ಕಿಯ ಮೆರವಣೊಗೆಯೊಂದಿಗೆ ಪುರವಂತರ ಮಹಾಸೇವಾ ಕಾರ್ಯಕ್ರಮವು,ನಂತರ ಬೆಳಿಗಿನ ಜಾವದಲ್ಲಿ ಉಚ್ಚಾಯಿ ಎಳೆಯುವ ಉತ್ಸವ ನಡೆಯಿತು.ಮಂಗಳವಾರ ಬೆಳಿಗ್ಗೆ ರಥಕ್ಕೆ ತಳಿರು ತೋರಣಗಳಿಂದ ಸಿಂಗರಿಸಿ ಕಳಸಾರೋಹಣವನ್ನು ನಡೆಸಲಾಯಿತು.
ಪ್ರತಿವರ್ಷದ ದವನದ ಹುಣ್ಣಿಮೆಯ ದಿನದಂದು ರಥೋತ್ಸವ ಜರುಗುವಂತೆ ಈ ವರ್ಷವೂ ಕೂಡ ದವನದ ಹುಣ್ಣಿಮೆಯ ಸಂಜೆ ಮಹಾರಥೋತ್ಸವ ಕಾರ್ಯಕ್ರ ನಡೆಯಿತು.ರಥೋತ್ಸವದ ಅಂಗವಾಗಿ ವೇ.ಮೂ ಅಮರಯ್ಯಸ್ವಾಮಿ ಹಾಗೂ ಬಸ್ಸಯ್ಯಸ್ವಾಮಿ ಇವರುಗಳು ಸಾನಿಧ್ಯದಲ್ಲಿ ಗ್ರಾಮದ ಜಾಗಿರದಾರರು ಸೇರಿದಂತೆ ಎಲ್ಲಾ ವತನದಾರರು ಭಾಗವಹಿಸಿ ರಥಕ್ಕೆ ಪೂಜೆ ಸಲ್ಲಿಸಿ ನಂತರ ರಥೋತ್ಸವ ನಡೆಯಿತು.
ರಥೋತ್ಸವದ ನಂತರ ಭಾಗವಹಿಸಿದ್ದ ಜನರು ಮಕ್ಕಳಿಗೆ ಆಟಿಕೆಗಳ ಖರಿದಿ,ತಿಂಡಿ ತಿನುಸುಗಳ ಖರಿದಿ ಹಾಗೂ ಫಲಹಾರಗಳ ಖರಿದಿಗೆ ಮುಂದಾಗಿದ್ದರು.
ಈ ಸಂದರ್ಭದಲ್ಲಿ ಜಾಲಿಬೆಂಚಿ ಗ್ರಾಮ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.