ರೂಪಾದೇವಿ ಬಂಗಾರ ಅವರ ಎರಡು ಕೃತಿಗಳ ಲೋಕಾರ್ಪಣೆ 29 ರಂದು

0
28

ಸೇಡಂ : ತಾಲೂಕಿನ ಸಾಹಿತ್ಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಬರೆದ ಕಾದಂಬರಿ ಸೇರಿದಂತೆ ಎರಡು ಕೃತಿಗಳು ಏಕಕಾಲಕ್ಕೆ ಬಿಡುಗಡೆಯಾಗಲಿವೆ.

ರೂಪಾದೇವಿ ಬಂಗಾರ ಅವರು ಬರೆದ ಮುಡಿಪು ಕಾದಂಬರಿ ಮತ್ತು ಬಂಗಾರದ ತೇರು ಕವನ ಸಂಕಲನ ಇದೇ 29 ರಂದು ಬೆಳಗ್ಗೆ10.45ಕ್ಕೆ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪುಸ್ತಕಗಳನ್ನು ಪ್ರಕಟಿಸಿದ ಸಂಸ್ಕೃತಿ ಪ್ರಕಾಶನದ ಅಧ್ಯಕ್ಷ ಪ್ರಭಾಕರ ಜೋಶಿ ತಿಳಿಸಿದ್ದಾರೆ.

Contact Your\'s Advertisement; 9902492681

ಸೇಡಂನ ಶಿವಶಂಕರ ಮಠದ 9 ನೇ ಪೀಠಾಧಪತಿಗಳಾದ ಪೂಜ್ಯ ಶಿವಶಂಕರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮಿಗಳು ಮತ್ತು ಹಾಲಪ್ಪಯ್ಯಮಠದ ಪೂಜ್ಯ ಪಂಚಾಕ್ಷರ ಮಹಾಸ್ವಾಮಿಗಳು ಕೃತಿಗಳನ್ನು ಬಿಡುಗಡೆ ಮಾಡುವರು.

ಲೇಖಕಿ ಆರತಿ ಕಡಗಂಚಿ ಮತ್ತು ಲೇಖಕ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಕೃತಿಗಳ ಪರಿಚಯ ಮಾಡುವರು. ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಅಧ್ಯಕ್ಷತೆ ವಹಿಸುವರು. ಕಾದಂಬರಿಗಾರ್ತಿ ರೂಪಾದೇವಿ ಬಂಗಾರ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here