ಸಂವಿಧಾನ ರಕ್ಷಣೆಗೆ ಬಿಜೆಪಿಗೆ ಸೋಲಿಸಲು ಕಾಂಗ್ರೆಸ್‍ಗೆ ಬೆಂಬಲ ಅನಿವಾರ್ಯ

0
19

.ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಪರ ಕರಾದಸಂಸ ಪ್ರಚಾರ

ವಾಡಿ: ಸಂವಿಧಾನ ಉಳಿವಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಯವರನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಇದೆ. ಮತ್ತೊಮ್ಮೆ ಕೋಮುವಾದಿಗಳು ಅಧಿಕಾರಕ್ಕೆ ಬಂದರೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನೇ ಬದಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂ.ಸಂಚಾಲಕ ಕೃಷ್ಣಪ್ಪ ಕರಣಿಕ ಹೇಳೀದರು.

Contact Your\'s Advertisement; 9902492681

ಕಲಬುರ್ಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಚಿತ್ತಾಪುರ ಹಾಗೂ ಶಹಾಬಾದ ತಾಲೂಕಿನ ಹಲವು ಹಳ್ಳಿಗಳಲ್ಲಿ ಹಮ್ಮಿಕೊಂಡ ಚುನಾವಣೆ ಪ್ರಚಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಈ ದೇಶದಲ್ಲಿ ಸಂವಿಧಾನ ಜಾರಿಯಾದ ನಂತರ ಸಮಾಜದ ಕಟ್ಟ ಕಡೆಯ ಅಲ್ಪಸ್ವಲ್ಪ ನಾಗರಿಕರಿಗಾದರೂ ಸ್ವಾಭಿಮಾನದ ಜೀವನ ನಡೆಸಲು ಸಾಧ್ಯವಾಗಿದೆ. ಆದರೆ ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನ ಬದಲಾಯಿಸುತ್ತೇವೆ ಎಂದು ರಾಜಾರೋಷವಾಗಿ ಹೇಳುವುದರ ಮೂಲಕ ದೇಶದ್ರೋಹದ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ನಾಲವಾರ, ಕುಂಬಾರಹಳ್ಳಿ, ಲಾಡ್ಲಾಪುರ, ಸನ್ನತಿ, ಹುಳಂಡಗೇರ, ಕುಂದನೂರ, ಕೊಂಚೂರು, ಬಳವಡಗಿ, ಕುಲಕುಂದಿ, ತುನ್ನೂರ, ಮಳಗ, ಮಾರಡಗಿ, ಕೊಲ್ಲೂರು, ಕನಗನಹಳ್ಳಿ, ಸೂಗೂರು (ಎನ್), ಹಣಿಕೇರ, ಹೊನಗುಂಟಿ, ತೊನಸನಹಳ್ಳಿ (ಎನ್), ದೇವನತೆಗನೂರ, ಮರತೂರ, ರಾವೂರು, ಜಿವಣಗಿ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರವಿ ಬಡಿಗೇರ, ಸಂ.ಸಂಚಾಲಕ ನಾಗಪ್ಪ ಪೂಜಾರಿ, ಶಹಾಬಾದ ಸಂಚಾಲಕ ಮಹಾದೇವ ತರನಹಳ್ಳಿ, ಸಂ.ಸಂಚಾಲಕ ತಿಪ್ಪಣ್ಣ ಧನ್ನೇಕಾರ, ಯುವ ಮುಖಂಡ ಪ್ರದಾನಿ ವಾಡಿ, ಸಂತೋಷ ಮರತೂರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here