ಯಾದಗಿರಿ: ಅನೇಕ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಒಬ್ಬ ಸ್ತ್ರೀ ಪೀಡಕನಾಗಿದ್ದು ಆತನಿಕೆ ತಕ್ಕ ಶಿಕ್ಷೆಯಾಗಬೇಕು ಎಂದು ಮುಖ್ಯಂತ್ರಿ ಸಿದ್ದರಾಮಯ್ಯನವರ ಪುತ್ರ ಮಾಜಿ ಶಾಸಕ ಡಾ:ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.
ಲೋಕಸಭೆ ಚುನಾವಣೆ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಪರ ಮತಯಾಚನೆಗೆ ನಗರಕ್ಕೆ ಆಗಮಿಸಿ,ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ಮಹಿಳೆಯರು ಬಗ್ಗೆ ತುಂಬಾ ಮಾತನಾಡುವ ಬಿಜೆಪಿ ಪಕ್ಷ ಅವರ ಮೈತ್ರಿಕೂಟದ ಜೆಡಿಎಸ್ ಪಕ್ಷದ ಸಂಸದ ಹಾಗೂ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅನೇಕ ಜನ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ಒಂದು ವರ್ಷದ ಹಿಂದೆಯೇ ಬಿಜೆಪಿ ಮತ್ತು ಜೆಡಿಎಸ್‍ನವರಿಗೆ ಗೊತ್ತಿತ್ತು ಎಂದು ಹೇಳಲಾಗುತ್ತದೆ,ಆದರೂ ಟಿಕೆಟ್ ಕೊಟ್ಟು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದು ನೋಡಿದರೆ ಬಿಜೆಪಿಯವರು ಮಹಿಳೆಯರ ಬಗ್ಗೆ ಇರುವ ಗೌರವ ಎಂತದ್ದು,ಮಣಿಪುರ ಘಟನೆ,ಉನ್ನಾವು ಘಟನೆ ಬಗ್ಗೆ ಹೇಗೆ ನಡೆದುಕೊಂಡರು ಎಂದು ತಿಳಿದಿದೆ ಎಂದರು.ಅಲ್ಲದೆ ಈಗ ಸರಕಾರ ಗೊತ್ತಾದ ತಕ್ಷಣ ಸರಕಾರ ಎಸ್‍ಐಟಿ ರಚನೆ ಮಾಡಿದ್ದು,ಈಗ ತನಿಖೆಯನ್ನು ಆರಂಭಿಸಿದ್ದು ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಸುರಪುರ ಉಪ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ ಗೆಲ್ಲಲಿದ್ದಾರೆ,ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ,ಪ್ರಜ್ವಲ್ ರೇವಣ್ಣ ನಡೆಸಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ದೇಶದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದೆ,ಇಂತಹ ಆರೋಪಿ ದೇಶ ಬಿಟ್ಟು ಓಡಿ ಹೋಗಿದ್ದಾನೆ ಅಂದರೆ ಅದಕ್ಕೆ ಬಿಜೆಪಿಯವರ ಬೆಂಬಲವಿದೆ ಅನಿಸುತ್ತದೆ,ಆತನು ಯಾವುದೇ ಅಪರಾಧ ಮಾಡಿಲ್ಲ ಎಂದಾದಲ್ಲಿ ದೇಶಬಿಟ್ಟು ಹೋಗುತ್ತಿರಲಿಲ್ಲ,ಅಲ್ಲದೆ ಬಿಜೆಪಿಯವರು ಹಿಂದು ಮಹಿಳೆಯರಿಗೆ ಅನ್ಯಾಯವಾದಾಗ ಹೋರಾಟ ಮಾಡುತ್ತಾರೆ,ಇಂದು 2900 ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಯಾಕೆ ಸುಮ್ಮನೆ ಕುಳಿತಿದ್ದಾರೆ,ನೇಹಾ ಕೇಸಲ್ಲಿ ಮಾಡಿದ ಪ್ರತಿಭಟನೆ ಈಗ ಯಾಕಿಲ್ಲ ಎಂದು ಪ್ರಶ್ನಿಸಿದರು.
ನಂತರ ನಗರದಲ್ಲಿ ಮಹಾತ್ಮ ಗಾಂಧಿ ಮೂರ್ತಿಗೆ,ಡಾ:ಬಿ.ಆರ್ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ರಾಜಾ ವೇಣುಗೊಪಾಲ ನಾಯಕ ಪರವಾಗಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ,ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ನಾಗವೇಣಿ ಪಾಟೀಲ್,ಸೂಗುರೇಶ ವಾರದ್,ವೆಂಕಟೇಶ ಹೊಸ್ಮನಿ,ಸುವರ್ಣಾ ಸಿದ್ರಾಮ ಎಲಿಗಾರ,ಅಬ್ದುಲಗಫೂರ ನಗನೂರಿ,ಧರ್ಮರಾಜ ಬಾದ್ಯಾಪುರ ಸೇರಿದಂತೆ ನೂರಾರು ಜನರಿದ್ದರು.