ಕಲಬುರಗಿ ಕೆಬಿಎನ್ ವಿವಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಜಾಗೃತಿ ಕಾರ್ಯಕ್ರಮ

0
89

ಕಲಬುರಗಿ: ಕೆ ಬಿ ಎನ್ ವಿವಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ವತಿಯಿಂದ ಕೆಬಿಎನ್ ಬೌದ್ಧಿಕ ಆಸ್ತಿ ಹಕ್ಕುಗಳ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರೊ. ಸಿದ್ದರಾಜ ಕುಂಬಾರ ಮಾತನಾಡಿ ಬೌದ್ಧಿಕ ಅಸ್ತಿ ಹಕ್ಕು ಬಗ್ಗೆ ಉಪನ್ಯಾಸ ನೀಡಿದರು. ಬೌದ್ಧಿಕ ಅಸ್ತಿ, ಅದರ ಪ್ರಕಾರಗಳು, ಸಂಬಂಧಪಟ್ಟ ಕಾನೂನುಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷ ಕೆಬಿಎನ್ ರಿಸರ್ಚ್ ಡೀನ್ ಡಾ. ರಾಜಶ್ರೀ ಪಾಲಾದಿ ಮಾತನಾಡುತ್ತ, ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಆಯೋಜಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಕೆಬಿಎನ್ ವಿವಿಯಲ್ಲಿ ಸಂಶೋಧನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಂಶೋಧನಾರ್ಥಿಗಳಿಗೆ ಕೃತಿಸ್ವಾಮ್ಯ ಕಾಯಿದೆ ಮತ್ತು ಪೆಟೆಂಟ್ ಗಳ ಬಗ್ಗೆ ಗೊತ್ತಿರಬೇಕು ಎಂದರು.

ಡಾ. ಎನ್. ಎಂ ಮರೂಫ್, ಪ್ರೊ. ಮೊಹಮದ್ ಯೂಸುಫ್ ಅಹ್ಮದ, ಪ್ರೊ. ಮಹಾಜರ ಹುಸೇನ, ಡಾ. ಶೈಖ್ ಅಬ್ದುಲ್ ಮಾಜೀದ, ಡಾ. ಮೊಹಮ್ಮದ ಸಿರಾಜ್ ಅಹ್ಮದ, ಡಾ. ಫಿರೋಜಾ ಮೀರಾಜಕರ, ಪ್ರೊ. ವಿನಯ ವರದ, ನದೀಮ ಪಾಷಾ ಇವರಿಗೆಲ್ಲ ಪೆಟೆಂಟ್ ಹೋಲ್ಡಾರ್ಸ್ ಗೆ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು.

ಡಾ. ಎಸ್. ಎಂ. ಮೋಹಿದ್ದಿನ ಸರ್ಮಸ್ಥ ಪ್ರಾರ್ಥಿಸಿದರೆ, ಡಾ. ಸಿಯಾದ ಅರ್ಫಾತ ಸ್ವಾಗತಿಸಿದರು. ಡಾ. ಮೊಹಮ್ಮದ ನಜರುದ್ದಿನ ಪ್ರಸ್ತಾವಿಕವಾಗಿ ಮಾತನಾಡಿದರು.
ಡಾ. ಶಾಹಿದ ಅಲಿ ವಂದಿಸಿದರೆ ಡಾ. ಮೊಹಮ್ಮದ್ ಸಿರಾಜ್ ಅಹ್ಮದ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಡಾ. ಜಮಾ ಮೂಸ್ವಿ, ಪ್ರೊ ಮೌಲನ ಹಶ್ಮಿ ಮತ್ತು ಇಂಜಿನಿಯರಿಂಗ ನಿಕಾಯದ ಎಲ್ಲ ಪ್ರಾಧ್ಯಾಪಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here