ಕಲಬುರಗಿ: ಇವತ್ತಿನ ಜಾಗತೀಕರಣ ಖಾಸಗಿಕರಣ ಉದಾರಿಕರಣ ನೀತಿಗಳ ಯುಗದಲ್ಲಿ ಕಾರ್ಮಿಕರಿಗೆ ಮೊದಲಿನಂತೆ ಸುಮಾರು ಹದಿನೈದು ಗಂಟೆಗಳ ಕೆಲಸ ನಿರ್ವಹಿಸುತ್ತಿರುವುದು ಖಂಡನೀಯವಾಗಿದೆ ಈಗಿನ ಕಾರ್ಮಿಕರು ತಮ್ಮ ಜಾತಿ, ಧರ್ಮ ಬಿಟ್ಟು ತಮ್ಮ ಹಕ್ಕುಗಳಿಗೆ ಹೋರಾಟ ಮಾಡುವ ಅನಿವಾರ್ಯತೆ ಇದೆ ಅದಕ್ಕೆ ಕಾರ್ಮಿಕರು ಎಲ್ಲರೂ ಐಕ್ಯತೆಯಿಂದ ಸಂಘಟಿತರಾಗಿ ಹೋರಾಟ ಮಾಡಿ ತಮ್ಮ ಬದುಕು ಉತ್ತಮ ಮಾಡಿಕೊಳ್ಳಬೇಕೆಂದು ಶರಣ ಸಾಹಿತಿ ಅಮೃತ್ ರಾವ್ ಪಾಟೀಲ್ ಕರೆ ನೀಡಿದರು.
ದೇಶದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರಗಳು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸದೆ ಅವರನ್ನು ಗುಲಾಮರಕ್ಕಿಂತ ಕಡೆ ನೋಡಿಕೊಳ್ಳುತ್ತಿರುವುದು ಅವರ ಹೋರಾಟಕ್ಕೆ ಸ್ಪಂದನೆ ಇಲ್ಲದೆ ನೋಡಿದರೆ ಇದು ಪಕ್ಕಾ ಬಂಡವಾಳಶಾಹಿ ಪರ ಸರ್ಕಾರವಾಗಿದೆ ರೈತ ಕಾರ್ಮಿಕರು ಹಲವಾರು ದಿನಗಳಿಂದ ಹೋರಾಟ ಮಾಡಿದರು ಕೂಡ ಕನಿಷ್ಠ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅವರು ಆಫ್ಜಲ್ಪುರದಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅತಿಥಿ ಯಾಗಿ ಮಾತನಾಡಿದ ಕಾರ್ಮಿಕ ಮತ್ತು ರೈತ ಹೋರಾಟಗಾರ ಶ್ರೀಮಂತ ಬಿರಾದಾರ್ ಕಾರ್ಮಿಕ ಮತ್ತು ರೈತರ ಹೆಸರಿನ ಮೇಲೆ ಪ್ರಮಾಣ ಮಾಡಿ ಬಂದ ಸರಕಾರ ಕಾರ್ಮಿಕರಿಗೆ ಬೆಲೆ ಏರಿಕೆ ಅನುಗುಣವಾಗಿ ಸಂಬಳ ನೀಡದೆ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ಕಾರ್ಪೊರೇಟ್ ಕಂಪನಿಗಳ ಪರವಾಗಿ ನೀತಿ ರೂಪಿಸಿ ಬಂಡವಾಳ ಶಾಹಿಗಳ ಪರವಾಗಿ ಕಾನೂನು ಮಾಡಿ ಜನರ ಮಧ್ಯೆ ಹಿಂದೂ ಮುಸ್ಲಿಂ ಎನ್ನುವ ಕೋಮುವಾದದ ವಿಷಬೀಜ ಬಿತ್ತಿ ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಿಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೋಗಿಯಬೇಕೆಂದು ಕರೆ ನೀಡಿದರು.
ಅತಿಥಿಯಾಗಿ ಮಾತನಾಡಿದ ಬಸಮ್ಮ ಗುತ್ತೇದಾರ ಇವತ್ತಿನ ದಿನಮಾನಗಳಲ್ಲಿ ರೈತ ಕಾರ್ಮಿಕರು ಮತ್ತು ಮಹಿಳೆಯರು ಯಾವುದೇ ಭದ್ರತೆ ಇಲ್ಲದೆ ಕೆಲಸ ನಿರ್ವಹಿಸುತ್ತಿರುವುದು ಮತ್ತು ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ , ನೋಡಿದರೆ ಕೇಂದ್ರದಲ್ಲಿ ಸರಕಾರ ಇದೆಯೋ ಇಲ್ಲವೋ ಎನ್ನುವ ಅನುಮಾನ ಬರುತ್ತಿದೆ ಇಂಥ ಸರ್ಕಾರವನ್ನು ನಾವು ಈ ಸಲ ತಿರಸ್ಕಾರ ಮಾಡಬೇಕಿವೆಂದು ಹೇಳಿದರು. ಅಧ್ಯಕ್ಷತೆಯನ್ನು ಕಲಾವತಿ ಯಳಸಂಗಿ ವಹಿಸಿದರೆ ಧ್ವಜಾರೋಹಣವನ್ನು ಬಿಸ್ಮಿಲ್ಲಾ ಖೇಡಗಿ ಮಾಡಿದರು.
ವೇದಿಕೆಯ ಮೇಲೆ ಶಿವಾನಂದ ವೋಟ್ಕರ್ ಬೋಸರಾಜ್ ಪಾಟೀಲ್ ಕಾಂಚನ ಕಾಂಬಳೆ ಪರಮೇಶ್ವರ್ ಕಾಸರ್ ಬಿಸ್ಮಿಲ್ಲಾ ಸಿಲೆದಾರ್ ಸಿದ್ದರಾಮ ಧಣ್ಣೂರ್ ಹಣಮಂತ ರಜಪುತ್ ಇದ್ದರು ಈ ಕಾರ್ಯಕ್ರಮದಲ್ಲಿ ಗುರು ಪಾಟೀಲ್ ಶಾಂತಾ ಕುಂಬಾರ್ ಶಿವಲೀಲಾ ಪಾಟೀಲ್ ಲಲಿತಾ ನಾವಿ ಶ್ರೀದೇವಿ ತೋಳನೂರ್ ಜಟ್ಟೆಪ್ಪ ಭಜಂತ್ರಿ ಮುಂತಾದವರು ಹಾಜರಿದ್ದರು.