ಚಿತ್ತಾಪುರ: ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷರಾದ ರವಿಂದ್ರ ಸಜ್ಜನಶೆಟ್ಟಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿದ್ರೆ ಮಾತ್ರ ತಾಲೂಕಿನಲ್ಲಿ ಬಿಜೆಪಿ ಪಕ್ಷ ಉಳಿಯಲು ಸಾಧ್ಯ ಎಂದು ಮನವಿಯಲ್ಲಿ ಒತ್ತಾಯಿಸಿ ಅಭ್ಯರ್ಥಿ ಪರ ಲೋಕಸಭಾ ಸಾರ್ವತ್ರಿಕ ಚುನಾವಣೆ ಬಹಿರಂಗ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರವರಿಗೆ ಬಿಜೆಪಿ ಮುಖಂಡ ಗುಂಡು ಮತ್ತಿಮುಡು ಹಾಗೂ ಸಂಗಡಿಗರು ಮನವಿ ಸಲ್ಲಿಸಿದರು.
ಬಿಜೆಪಿ ಕಾರ್ಯಕರ್ತರು ಸುಮಾರು 10/15 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಆದ್ರೆ ನೂತನ ತಾಲೂಕಾಧ್ಯಕ್ಷ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಇತ್ತೀಚೆಗೆ ತಾಲೂಕಿನಲ್ಲಿ ಪಕ್ಷದ ಪರವಾದ ಕೆಲಸಗಳು ಆಗುತ್ತಿಲ್ಲಾ. ಅವರು ಕೇವಲ ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಮನೆಗೆ ಸೀಮಿತವಾಗಿದ್ದಾರೆ ಇನ್ನೂಂದು ಕಡೆ ಕಾಂಗ್ರೆಸ್ ಪಕ್ಷದ ನಿಷ್ಠೆ ತೋರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕೂಡಲೇ ತಾಲೂಕು ಅಧ್ಯಕ್ಷರ ಬದಲಾವಣೆ ಮಾಡಿ ಬಿಜೆಪಿ ಪಕ್ಷ ಉಳುವಿಗೆ ಸಹಕಾರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ ಸುಲೇಗಾಂವ್, ಮಹೇಶ ಬಾಳಿ, ಸಿದ್ದು ದಂಡೋತಿ, ಸಾಗರ ಸೀತಾಳೆ, ದೇವರಾಜ ಬೆಣ್ಣೂರ, ಮಂಜುನಾಥ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.