ಕಲಬುರಗಿ: ಬೆಳೆ ಪರಿಹಾರ ಹಣ ಬಿಡುಗಡೆ ಆದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಹಣ ಕೊಡುತ್ತಿಲ್ಲ. ರೈತರ ಖಾತೆ ಹೋಲ್ಡ್ ಮಾಡಿದ್ದಾರೆ ಎಂದು ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ರೈತ ರಾಜಪ್ಪ ಚೊಕಾ ಅವರು ಆರೋಪಿಸಿದ್ದಾರೆ.
ತಕ್ಷಣವೇ ಜಿಲ್ಲಾಡಳಿತ ಮಧ್ಯ ಪ್ರದೇಶ ಮಾಡಿ ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಲು ಒತ್ತಾಯಿಸಿದ ಅವರು, ಅನಿವಾರ್ಯ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಹೇಳಿಕೆ ನೀಡಿ, ಬೆಳೆ ಪರಿಹಾರ ಹಣ ಕೊಟ್ಟಿಲ್ಲ ಬ್ಯಾಂಕ್ ಖಾತೆ ಹೊಲ್ಡ್ ಮಾಡಿದ್ದಾರೆ ಸಾಲ ಮರು ಪಾವತಿ ಮಾಡುವರೆಗೂ ಓಪನ್ ಮಾಡೋದಿಲ್ಲ. ಚಿಂಚೋಳಿ ತಾಲ್ಲೂಕು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‍ಬಿಎಚ್ ಬ್ಯಾಂಕ್ ವಿಲೀನಗೊಂಡಿದ್ದು, ಸರಿ ಸುಮಾರು 250 ಜನ ರೈತರ ಖಾತೆಗೆ ಜಮಾ ಆದ ಬೆಳೆ ಪರಿಹಾರ ಹಣ ರೈತರಿಗೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ರೈತರ ಬೆಳೆ ಸಾಲ ಮರುಪಾವತಿ ಮಾಡದೆ ಇರೊದರಿಂದ ರೈತರ ಬೆಳೆ ಸಾಲ ಕಟ್ಟ ಬೆಕು ಇಲ್ಲ ಅಂದರೆ ನಿಮ್ಮ ಪರಿಹಾರ ಹಣ ಕೊಡೋದಿಲ್ಲ ಎಂದು ರೈತರಿಗೆ ಘಂಟಾಘೋಷವಾಗಿ ರಾಷ್ಟ್ರೀಕೃತ ಬ್ಯಾಂಕು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಮುಂಗಾರು ಮಳೆ ದೌಡು ಬಂದರೆ ಮುಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ, ಬುಕ್ಕುದು ಆಳು, ಮುಂಗಾರು ಬಿತ್ತನೆ, ಲಾಗುವಾಡಿ ಖರ್ಚು ಆಗುತ್ತದೆ ಎಂದು ರೈತರು ಕನಸು ಕಾಣುತ್ತಿದ್ದರು. ರೈತರ ಕನಸು ನುಚ್ಚು ನೂರು ಮಾಡಿ ರೈತರಿಗೆ ನಿರಾಶರನ್ನಾಗಿ ಮಾಡಲಾಗುತ್ತಿದೆ. ಇದೊಂದು ರೈತ ಅನ್ಮದಾತ ವಿರೋಧಿ ಎದ್ದು ಕಾಣುತ್ತದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.