ಮೇ 18 ರಂದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಅಂಗವಾಗಿ ಚಿತ್ರಕಲಾ ಶಿಬಿರ

0
74

ಕಲಬುರಗಿ: ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಪ್ರಯುಕ್ತ ಮೇ 18ರಂದು ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಹಾಗೂ ಅಹ್ಸಾನ್ ಕ್ಯಾಲಿಯರ್ಟ್ ಫೌಂಡೇಶನ್ ವತಿಯಿಂದ ಒಂದು ದಿನದ ಚಿತ್ರಕಲಾ ಶಿಬಿರವನ್ನು ಇಲ್ಲಿನ ಅಹ್ಸಾನ್ ಡಿಸೈನ್ ಸ್ಟುಡಿಯೋದಲ್ಲಿ ಆಯೋಜಿಸಲಾಗಿದೆ.

2024 ರ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಥೀಮ್ “ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತುಸಂಗ್ರಹಾಲಯಗಳು.” ಇದು ಸಾಂಸ್ಕೃತಿಕ ಸಂಸ್ಥೆಗಳ ಪ್ರಾಮುಖ್ಯತೆ ಮತ್ತು ಸಂಪೂರ್ಣ ಶೈಕ್ಷಣಿಕ ಅನುಭವವನ್ನು ಒದಗಿಸುವಲ್ಲಿ ಅವುಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ.
ಖ್ಯಾತ ಚಿತ್ರಕಲಾವಿದ ಬಸವರಾಜ ಆರ್.ಉಪ್ಪಿನ್ ಕಲಾ ಶಿಬಿರವನ್ನು ಉದ್ಘಾಟಿಸಲಿದ್ದು, ಅಕಾಡೆಮಿ ಅಧ್ಯಕ್ಷ ರೆಹಮಾನ್ ಪಟೇಲ್ ಅಧ್ಯಕ್ಷತೆ ವಹಿಸಲಿದ್ದಾರೆ.

Contact Your\'s Advertisement; 9902492681

ಸಮಾರಂಭದಲ್ಲಿ ಸುಮಾರು 12 ಕಲಾವಿದರು ಭಾಗವಹಿಸಿ ಕಲ್ಯಾಣ ಕರ್ನಾಟಕದ ಸ್ಮಾರಕಗಳನ್ನು ಒಳಗೊಂಡ ಚಿತ್ರಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ರೆಹಮಾನ್ ಪಟೇಲ್ ಮತ್ತು ಫೌಂಡೇಶನ್ ಟ್ರಸ್ಟಿ ಶೇಖ್ ಅಹ್ಸನ್ ಜಂಟಿಯಾಗಿ ಬಿಡುಗಡೆ ಮಾಡಿದರು.

ಚಿತ್ರಕಲಾವಿದ ರಾಜಶೇಖರ್ ಶಾಮಣ್ಣ, ಮಹಮ್ಮದ್ ಅಯಾಜುದ್ದೀನ್ ಪಟೇಲ್, ಸುಬ್ಬಯ್ಯ ನೀಲಾ, ಸೈಯದ್ ಮುಸ್ತಫಾ, ಶೇಖ್ ಅಹಸನ್, ರಾಮಗಿರಿ ಪೊಲೀಸ್ ಪಾಟೀಲ್, ವಿಠಲ ಜಾಧವ್, ಜಾವೀದ್ ಅಹಮದ್, ರಾಜಣ್ಣ ಮುಗಳಿ, ಸೂರ್ಯಕಾಂತ್ ನಂದೂರ, ಕಹಕಶನ್ ನಜನೀನ್, ರಜನಿ ತಳವಾರ ಭಾಗವಹಿಸುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here