ಮಾತೃ ಭಾಷಾಭಿಮಾನ ಬೆಳೆಸುವುದು ಅವಶ್ಯ: ಕಸಾಪದಿಂದ ಹತ್ತರ ಕನ್ನಡಕೆ ಗುಣಾಗ್ರಣಿ ಪ್ರಶಸ್ತಿ ಪ್ರದಾನ

0
160

ಕಲಬುರಗಿ: ನಮ್ಮ ಬದುಕು ಕಟ್ಟುವ ಮತ್ತು ನಾಡು-ನುಡಿ ಒಂದುಗೂಡಿಸುವಲ್ಲಿ ನಾವಾಡುವ ಭಾಷೆಯನ್ನು ಪ್ರೀತಿಸಬೇಕು. ಈ ಮೂಲಕ ಮಾತೃಭಾಷಾಭಿಮಾನ ಮಕ್ಕಳಲ್ಲಿ ಬೆಳೆಸುವುದು ತುಂಬಾ ಅವಶ್ಯವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ ಹೇಳಿದರು.

ಹತ್ತನೇ ಪರೀಕ್ಷೆಯ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ ಹತ್ತರ ಕನ್ನಡಕೆ ಗುಣಾಗ್ರಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನದಲ್ಲಿ ನಾವಿದ್ದೇವೆ. ಮಕ್ಕಳ ಭವಿಷ್ಯದ ಜೀವನ ರೂಪಿಸಬೇಕಾದರೆ, ಕೇವಲ ಅಂಕಗಳಿಂದಲ್ಲ. ಸಾಧನೆಯಿಂದ ಮಾತ್ರ ಸಾಧ್ಯ. ದೃಢವಾದ ವಿಶ್ವಾಸ ಹೊಂದಿ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿ ಬಸವ ಧಾಮದ ಪೂಜ್ಯ ಶ್ರೀ ಬಸವೇಶ್ವರಿ ಮಾತಾಜೀ ಮಾತನಾಡಿ, ಯಾವುದೇ ಭಾಷೆ ಮಾತನಾಡಿದರೂ ನಮ್ಮ ಹೃದಯ ಭಾಷೆಯನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. ಇಂದು ಕನ್ನಡ ಎಂದರೆ ಅಸಡ್ಡೆ ತೋರದೆ ಅಭಿಮಾನ ಪಡಬೇಕು. ತಮೀಳು, ಕನ್ನಡ ಸಂಸ್ಕøತಿ ಭಾಷೆಗಳು ಪ್ರಾಚೀನವಾಗಿದ್ದರೂ ಇನ್ನೂ ನಮ್ಮ ಅನ್ನದ ಭಾಷೆಗಳಾಗಿವೆ ಎಂದು ನುಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ನಾಡಿನಲ್ಲಿ ಮಾತೃಭಾಷೆಗೆ ಆದ್ಯತೆ ನೀಡಿ, ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಈ ನೆಲದ ವಾರಸುದಾರರಾದ ನಾವೆಲ್ಲರೂ ಮಾಡಲು ಮುಂದಾಗಬೇಕಿದೆ. ಕನ್ನಡ ಉಳಿದರೆ, ಕನ್ನಡಿಗ ಉಳಿಯುತ್ತಾನೆ. ಕನ್ನಡಿಗ ಉಳಿದರೆ ಮಾತ್ರ ಕರ್ನಾಟಕ ಉಳಿಯಲಿಕ್ಕೆ ಸಾಧ್ಯ. ಆ ಕಾರಣಕ್ಕಾಗಿ ಸರಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ನೇತೃತ್ವದಲ್ಲಿ ಆಂದೋಲನ ಶುರು ಮಾಡಲಾಗುತ್ತಿದೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ತು ನಿತ್ಯ ನೂತನ ಕಾರ್ಯಕ್ರಮಗಳ ಮೂಲಕ ಸಾಂಸ್ಕøತಿಕ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು.

ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಡಾ. ಸುರೇಶ ಶರ್ಮಾ ಸಮಾರಂಭ ಉದ್ಘಾಟಿಸಿದರು. ಗುರೂಜಿ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಎಕೆಆರ್ ದೇವಿ ಪಿಯು ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಜಿ ಬಾಳಿ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ಧರ್ಮರಾಜ ಜವಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳ ಮಾತನಾಡಿದರು.

ಪರಿಷತ್ತಿನ ವತಿಯಿಂದ ಜಿಲ್ಲೆಯ ಸುಮಾರು 230 ಕ್ಕೂ ಹೆಚ್ಚು ಕನ್ನಡ ಅಂಕವೀರರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ವಿಶೇಷವೆನಿಸಿತು. ಪ್ರಮುಖರಾದ ಗುರುಬಸಪ್ಪ ಎಸ್ ಸಜ್ಜನಶೆಟ್ಟಿ, ಸುರೇಶ ದೇಶಪಾಂಡೆ, ಪ್ರಭುಲಿಂಗ ಮೂಲಗೆ, ನಾಗಪ್ಪ ಎಂ ಸಜ್ಜನ್, ಸಂತೋಷ ಕುಡಳ್ಳಿ, ಎಸ್ ಕೆ ಬಿರಾದಾರ, ಎಂ ಎನ್ ಸುಗಂಧಿ, ಎಚ್ ಎಸ್ ಬರಗಾಲಿ, ರವಿಕುಮಾರ ಶಹಾಪುರಕರ್, ಎಸ್ ಪಿ ಸುಳ್ಳದ್, ಶಿವಶರಣ ಹಡಪದ, ಆಶಾ ಹೆಗಡೆ, ಪರ್ವೀನ್ ಸುಲ್ತಾನಾ, ರೇವಣಸಿದ್ಧಯ್ಯಾ ಹಿರೇಮಠ, ಶಿವಾನಂದ ಮಠಪತಿ, ವಿಶ್ವನಾಥ ತೊಟ್ನಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳಿಗಿಂತಲೂ ಹೆಚ್ಚು ಅನುಭಾವ ಹೊಂದಿ ವಚನ ಸಾಹಿತ್ಯ ಇಂದು ಹೆಚ್ಚು ಪರಿಣಾಮಕಾರಿಯಾಗಿದೆ. ಅಂಥ ವಚನ ಸಾಹಿತ್ಯವು ನಮ್ಮ ನೆಲದ ಸತ್ವವಾಗಿದೆ. ಕನ್ನಡ ಪರಭಾಷಾ ವ್ಯಾಮೋಹದಿಮದ ಸೊರಗುತ್ತಿದೆ. ಕನ್ನಡ ಮಾತಾಡುವ ಮೂಲಕ ಮಕ್ಕಳಲ್ಲಿ ಮಾತೃಭಾಷೆಯ ಮೌಲ್ಯ ತಿಳಿಸಿ ಹೇಳಬೇಕಾಗಿದೆ. ಈ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಕನ್ನಡ ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಕಲೆ, ಸಾಹಿತ್ಯ, ಸಂಸ್ಕøತಿ ಬೆಳೆಸುತ್ತಿದೆ. – ಪೂಜ್ಯ ಶ್ರೀ ಬಸವೇಶ್ವರಿ ಮಾತಾಜೀ, ಬಸವಧಾಮ, ಅತ್ತಿವೇರಿ, ಉತ್ತರ ಕನ್ನಡ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here