ರಾವೂರ: ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿಗೆ ನಿರುಣಿಸಿ ಚಾಲನೆ ನೀಡಲಾಯಿತು.
ಇ ವೇಳೆ ಮಾತನಾಡಿದ ಸಿದ್ದಲಿಂಗ ಶ್ರೀಗಳು ಎಲ್ಲಾ ಗ್ರಹಗಳಲ್ಲಿ ಭೂಮಿಯಲ್ಲಿ ಮಾತ್ರ ಜೀವಿಗಳು ವಾಸವಾಗಿವೆ. ಇಂತಹ ಅಮುಲ್ಯವಾದ ಭೂಮಿಯನ್ನು ವಿವಿಧ ಮಾಲಿನ್ಯಗಳ ಮೂಲಕ ಹಾಳುಮಡುತ್ತಿದ್ದೇವೆ. ಜಾಗತಿಕಾರಣ ಮತ್ತು ನಾಗರಿಕರಣದ ಭರಾಟೆಯಲ್ಲಿ ಮಾನವನ ಅತಿಯಾಸೆಗೆ ಸಿಲುಕಿ ಭೂಮಿ ನಲುಗುತ್ತಿದೆ. ಅರಣ್ಯಗಳ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಮಳೆ ಕಡಿಮೆಯಾಗಿ ನೀರಿಗೆ ಆಹಾಕಾರ ಉಂಟಾಗುತ್ತಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿ ಜೀವಿಗಳು ಸಾಯುತ್ತಿವೆ . ಇಂತಹ ದುರ್ಗತಿ ತಪ್ಪಿಸಲು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಜೋಪಾನ ಮಾಡಿದಾಗ ಮಾತ್ರ ಪ್ರಕೃತಿ ಉಳಿಯಲು ಸಾಧ್ಯ ಆದ್ದರಿಂದ ನಾವೆಲ್ಲರೂ ಮರಗಳನ್ನು ಬೆಳೆಸುವ ಸಂಕಲ್ಪ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕಿ ಗೀತಾ ಜಮಾದಾರ ಪರಿಸರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿದ್ದಲಿಂಗ ಬಾಳಿ, ಈಶ್ವರಗೌಡ ಪಾಟೀಲ್, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಶಿವಕುಮಾರ್ ಸರಡಗಿ, ಶರಣು ಸಜ್ಜನ್, ಶಿವಾನಂದ ಡೋಮನಾಳ, ಈರಣ್ಣ ಹಳ್ಳಿ. ರಾಜು ಆಳ್ಳೊಳ್ಳಿ, ಅನುಸೂಯ ಹುಗಾರ್, ರೇಖಾ, ಮಲ್ಲಮ್ಮ ಸೇತಿದಂತೆ ಹಲವರು ಉಪಸ್ಥಿತರಿದ್ದರು.