ಪ್ರಕೃತಿ ನಾಶವಾದರೆ ಮಾನವ ಕುಲಕ್ಕೆ ಪೆಟ್ಟು: ಚಿದ್ರೆ

0
65

ಶಹಾಬಾದ: ಮರಗಳಿಗೆ ಮಾನವ ಬೇಕಿಲ್ಲ ಆದರೆ ಮರಗಳು ನರನಿಗೆ ವರವಿದ್ದ ಹಾಗೆ. ಆದ್ದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ತಹಸೀಲ್ದಾರ ಮಲಶೆಟ್ಟಿ ಚಿದ್ರೆ ಹೇಳಿದರು.

ಅವರು ಬುಧವಾರ ತಾಲೂಕಾಡಳಿತ ,ನಗರಸಭೆ, ನಮ್ಮ ಹಸಿರು ಶಹಾಬಾದ ತಂಡ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮರವಿಲ್ಲದ ನಾಡು ನರಕ ಸದೃಶವಾದುದು. ಪರಿಸರ ನಾಶವಾದರೆ ಅದು ಇಡೀ ಮನುಕುಲಕ್ಕೆ ಅಪಾಯ ತಂದೊಡ್ಡಲಿದೆ ಎಂದು ಹೇಳಿದರು.

Contact Your\'s Advertisement; 9902492681

ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಮಾತನಾಡಿ, ಜಗತ್ತು ಇಂದು ಹೆಚ್ಚಿನ ಉಷ್ಣತೆಗೆ ಒಳಗಾಗಿ ಅಪಾಯದ ಕಡೆಗೆ ವಾಲುತ್ತಿದೆ. ಪಕೃತಿಮಾತೆ ನಮ್ಮನ್ನು ರಕ್ಷಿಸುತ್ತಾಳೆ. ಪ್ರಕೃತಿ ಎಂದರೆ ಪಂಚಭೂತಗಳು. ಮಾನವ ಭೂಮಿಯನ್ನು ಹಾಳು ಮಾಡುತ್ತಿದ್ದಾನೆ. ಅಂತರ್ಜಲಕ್ಕೆ ಕೈಹಾಕುತ್ತಿದ್ದಾನೆ. ಗಿಡ ಮರಗಳು ಇಲ್ಲದೇ ಹೋದರೆ ಮಾನವ ತುಂಬ ಕಷ್ಟವನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ನಗರದ ಎಲ್ಲಾ ಸಾರ್ವಜನಿಕರು ಮನೆಯ ಮುಂದೆ, ಅಂಗಳದಲ್ಲಿ ಅಥವಾ ಖಾಲಿ ಸ್ಥಳಗಳಲ್ಲಿ ಒಂದಾದರೂ ಗಿಡವನ್ನು ನೆಟ್ಟು ಪೋಷಿಸಿದರೇ ಅದುವೇ ಸಾರ್ಥಕ ಜೀವನವಾಗುತ್ತದೆ ಎಂದರು.

ವಲಯ ಅರಣ್ಯಾಧಿಕಾರಿ ಮಂಜುನಾಥ ಹಂದರಾಳ ಮಾತನಾಡಿ,ಅಭಿವದ್ಧಿ ಹೆಸರಿನಲ್ಲಿ ನಗರಗಳ ವಿಸ್ತರಣೆ ಆಗುತ್ತಿದೆ. ಇಂದು ಅತ್ಯಲ್ಪ ಅರಣ್ಯ ಸಂಪತ್ತು ಇದೆ. ವಾತಾವರಣದಲ್ಲಿ ಅತಿಯಾದ ಕಾರ್ಬನ್ ಡೈಆಕ್ಸೈಡ್ ತಾಪಮಾನ ದಿನೇದಿನೇ ಹೆಚ್ಚಾಗುತ್ತಿದೆ. ಇದು ಅಪಾಯಕಾರಿ ಲಕ್ಷಣವಾಗಿದ್ದು ನಾವು ಪ್ರಕೃತಿ ಪ್ರೀತಿಯನ್ನು ತಾಳಬೇಕಿದೆ. ನಮಗೆ ಜಲಸಂಪತ್ತು, ವನಸಂಪತ್ತು ಬೇಕು. ಅದಕ್ಕಾಗಿ ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ತೋರಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಶಂಕರ ಸೋಮ್ಯಾಜಿ, ಉದ್ಯಮಿ ನರೇಂದ್ರ ವರ್ಮಾ, ಅಣವೀರ ಇಂಗಿನಶೆಟ್ಟಿ,ಸೂರ್ಯಕಾಂತ ಕೋಬಾಳ, ಬಸವರಾಜ ಸಾತ್ಯಾಳ, ಪತ್ರಕರ್ತ ಸಂಘದ ಅಧ್ಯಕ್ಷ ರಘುವೀರಸಿಂಗ್ ಠಾಕೂರ,ಕನಕಪ್ಪ ದಂಡಗುಲಕರ್,ಅನೀಲ ಹಿಬಾರೆ,ಶರಣು ಪಗಲಾಪೂರ,ಶಂಕರ ಕುಸಾಳೆ,ಎಇಇ ಶರಣು ಪೂಜಾರಿ, ನಗರಸಭೆಯ ವ್ಯವಸ್ಥಾಪಕ ಶರಣಗೌಡ ಪಾಟೀಲ, ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ, ಆರೋಗ್ಯ ನಿರೀಕ್ಷಕ ಮೈಹಿನೋದ್ದಿನ್ ಸೇರಿದಂತೆ ನಗರಸಭೆಯ ಸಿಬ್ಬಂದಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here