ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏರಿಕೆ ವಿರೋಧಿಸಿ ರೈತರ ಪ್ರತಿಭಟನೆ: ಬೆಳೆ ಹಾನಿಗೆ ಪರಿಹಾರಕ್ಕೆ ಒತ್ತಾಯ

0
44

ಕಲಬುರಗಿ: ಬೀಜ, ರಸಗೊಬ್ಬರ ಬೆಲೆ ಏರಿಕೆ ವಿರೋಧಿಸಿ ಹಾಗೂ ನಕಲಿ ಮೆಕ್ಕೆಜೋಳ ಬೀಜದಿಂದ ಬೆಳೆ ಹಾನಿಯಾಗಿದ್ದು, ಕೂಡಲೇ ಸಂತ್ರಸ್ತ ರೈತನಿಗೆ ನಷ್ಟ ಭರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಬುಧವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ. ಸಾಯಬಣ್ಣಾ ಗುಡುಬಾ, ದಿಲೀಪ್ ನಾಗೂರೆ, ಜಾಫರ್‍ಖಾನ್, ಪರಮೇಶ್ವರ್ ಕಾಂತಾ, ರಾಯಪ್ಪ ಹುರುಮುಂಜೆ, ಸುಭಾಷ್ ಜೇವರ್ಗಿ, ಜಾವೇದ್ ಹುಸೇನ್, ದೇವಿಂದ್ರಪ್ಪ ಪಾಟೀಲ್ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಂಟಿ ಕೃಷಿ ನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ರೈತರು ಬೆಳೆದ ಬೆಳೆಗಳಿಗೆ ಎಂಎಸ್‍ಪಿಯು ಇಲ್ಲ. ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯ ಪ್ರಕಾರ ಸಿ2+50 ಸೇರಿಸಿ ಬೆಂಬಲ ಬೆಲೆ ಕೊಡಬೇಕು. ಸಕ್ಕಾಪಟ್ಟೆ ಲಾಗೋಡಿ ಮಾಡಿದ ರೈತರ ಬೆಳೆಗಳಿಗೆ ಕವುಡಿ ಕಿಮ್ಮತ್ತು ಇಲ್ಲ. ಇದು ಘೋರ ಅನ್ಯಾಯ ಮಾಡಿದಂತಾಗಿದೆ. ಬರಗಾಲದ ಅಬ್ಬರದಲ್ಲಿ ರೈತರು ಕಂಗಾಲಾಗಿದ್ದಾರೆ. ಬಿತ್ತನೆ ಬೀಜಕ್ಕೆ ಸಹಾಯಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಶತಮಾನದಲ್ಲಿಯೇ ಕಂಡರಿಯದ ಭೀಕರ ಬರಗಾಲವನ್ನು ರಾಜ್ಯ ಅನುಭವಿಸಿತ್ತು. ಈ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದೆ. ಮುಂಗಾರು ಮಳೆ ಕೂಡ ಉತ್ತಮವಾಗಿರಲಿದೆ ಎಂಬ ಸೂಚನೆಗಳು ಬರುತ್ತಿವೆ. ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದಾಗ್ಯೂ, ಬಿತ್ತನೆ ಬೀಜಗಳ ಕೊರತೆ ಎಲ್ಲೆಡೆ ಕಂಡುಬಂದಿದೆ. ಬಿತ್ತನೆ ಬೀಜಗಳು ಎಲ್ಲೆಡೆ ಶೇಕಡಾ 40ರಿಂದ 50ರಷ್ಟು ಏರಿಕೆ ಕಂಡಿದೆ ಎಂದು ಅವರು ಆರೋಪಿಸಿದರು.

ಅಗತ್ಯ ಬಿತ್ತನೆ ಬೀಜಗಳ ಕೊರತೆಯನ್ನು ರಾಜ್ಯ ಎದುರಿಸುತ್ತಿದೆ. ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಖಾಲಿ ಇರುವ ಹುದ್ದೆಗಳಿಂದಾಗಿ ರೈತರಿಗೆ ಸಕಾಲದಲ್ಲಿ ಸೇವೆ ಸಿಗುತ್ತಿಲ್ಲ. ಬಿತ್ತನೆ ಚಟುವಟಿಕೆಗಳಿಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಬಿತ್ತನೆ ಬೀಜಗಳಿಗಾಗಿ ರೈತರು ಗಂಟೆಗಂಟಲೇ ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಕೂಡಲೇ ಅಗತ್ಯ ಬೀಜಗಳು ಮತ್ತು ರಸಗೊಬ್ಬರಗಳನ್ನು ಸಕಾಲದಲ್ಲಿ ಒದಗಿಸಲು ಹಾಗೂ ಅವುಗಳ ಬೆಲೆಗಳನ್ನು ನಿಯಂತ್ರಿಸಿ, ರೈತರಿಗೆ ಹೊರೆಯಾಗದಂತೆ ಸಹಾಯಧನದಲ್ಲಿ ವಿತರಿಸಬೇಕು ಎಂದುಅ ವರು ಒತ್ತಾಯಿಸಿದರು.

ಬರಗಾಲ ಮತ್ತು ರೈತರ ಆತ್ಮಹತ್ಯೆಗಳು ರಾಜ್ಯದ ಬರಗಾಲ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯದಿಂದಾಗಿ ಜಿಲ್ಲೆಯಲ್ಲಿ ರೈತ ಕುಟುಂಬಗಳ ಆತ್ಮಹತ್ಯೆಗಳು ಮುಂದುವರೆಯುತ್ತಿವೆ. ಚಿಂಚೋಳಿ ತಾಲ್ಲೂಕಿನ ಅಣವಾರ್ ಜಮೀನು ನಾಲ್ಕು ಎಕರೆ ಮೆಕ್ಕೆಜೋಳ ಬೀಜ ಖರೀದಿ ತಂದಿದ್ದು, ಲಾಗೋಡಿ ಮಾಡಿ ಬಿತ್ತನೆ ಮಾಡಿ ಮೊಳಕೆ ಒಡೆದು ಒಳ್ಳೆಯ ರೀತಿಯಿಂದ ಮೆಕ್ಕೆಜೋಳ ಬೆಳೆದು ನಿಂತಿದೆ. ಆದಾಗ್ಯೂ, ಮಾತ್ರ ಮೆಕ್ಕೆತೆನೆ ಬಿಟ್ಟು ದಾಣಿ ಮಾತ್ರ ತುಂಬಿಲ್ಲ. ನಕಲಿ ಬೀಜ ಕೊಟ್ಟು ಮೋಸ ಮಾಡಿದ ಬೀಜದ ಕಂಪೆನಿ ಕಪ್ಪು ಪಟ್ಟಿಗೆ ಸೇರಿಸಿ ಕಾನೂನು ಪ್ರಕಾರ ಕಂಪೆನಿ ವಿರುದ್ಧ ಕ್ರಮ ಕೈಗೊಂಡು, ರೈತ ನಾಗಪ್ಪ ಪೂಜಾರಿ ಅವರಿಗೆ ನಷ್ಟ ಭರಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here