ಕಲಬುರಗಿ : ಪಕ್ಷಾತಿತ, ಧರ್ಮಾತಿತ, ಜಾತ್ಯಾತಿತ ಸಿದ್ಧಾಂತದಂತೆ ಶುದ್ಧ ರಾಜಕಿಯೇತರ ತಳಹದಿಯ ಮೇಲೆ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಸಂವಿಧಾನದ 371ನೇ(ಜೆ) ಕಲಂ ಅನುಷ್ಠಾನಕ್ಕೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಬಲವರ್ಧನೆ ಹೆಚ್ಚಿಸಲು ಸಮಿತಿಯ ಪರಿಣಿತ ತಜ್ಞರು ಮತ್ತು ಕೋರ್ ಕಮಿಟಿಯ ಸದಸ್ಯರು ನಿರ್ಣಯ ತೆಗೆದುಕೊಂಡಂತೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ರವರನ್ನು ಸಮಿತಿಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಮಿತಿಯ ನಿರ್ಣಯದ ಮನವರಿಕೆಗೆ ಸಂತೋಷದಿಂದ ಒಪ್ಪಿಕೊಂಡ ಬಸವರಾಜ ದೇಶಮುಖರವರು ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರಕಾರದ ಮೇಲೆ ಸಕರಾತ್ಮಕ ಒತ್ತಡ ತರುವಲ್ಲಿ ಮತ್ತು ಕಲ್ಯಾಣದ ಏಳು ಜಿಲ್ಲೆಗಳಲ್ಲಿ ಸಂಘಟನೆ ಹಾಗೂ ಅಭಿವೃದ್ಧಿ ಪರ ಹೋರಾಟಕ್ಕೆ ತಾವು ಬದ್ಧತೆ ಪ್ರದರ್ಶಿಸುವುದಾಗಿ ತಿಳಿಸಿದರು.
ಸಮಿತಿಯ ಮನವರಿಕೆಗೆ ಒಪ್ಪಿಕೊಂಡು ಗೌರವಾಧ್ಯಕ್ಷರಾದ ಬಸವರಾಜ ದೇಶಮುಖರವರಿಗೆ ಸಮಿತಿಯ ಪರಿಣಿತ ತಜ್ಞರು ಮತ್ತು ಕೋರ ಕಮಿಟಿಯ ಸದಸ್ಯರು ಐವಾನ ಶಾಹಿ ಅತಿಥಿ ಗೃಹದಲ್ಲಿ ಅವರನ್ನು ಗೌರವ ಸನ್ಮಾನ ಮಾಡಿ ಸಮಿತಿಯ ಗೌರವಾಧ್ಯಕ್ಷ ಸ್ಥಾನ ತಕ್ಷಣದಿಂದಲೇ ಜವಾಬ್ದಾರಿ ವಹಿಸಿಕೊಳ್ಳಲು ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ, ಪರಿಣಿತ ತಜ್ಞರಾದ ಪೆÇ್ರ. ಆರ್.ಕೆ. ಹುಡಗಿ, ಡಾ. ಬಸವರಾಜ ಗುಲಶೆಟ್ಟಿ, ಪೆÇ್ರ. ಶರಣಪ್ಪ ಹತ್ತಿ, ಡಾ. ಮಾಜಿದ್ ದಾಗಿ, ಮನೀಷ ಜಾಜು, ಡಿ.ಬಿ. ನಾಯಕ, ಅಬ್ದುಲ ರಹೀಂ, ಶಾಂತಪ್ಪ ಕಾರಭಾಸಗಿ, ಸಂಧ್ಯಾರಾಜ ಶ್ಯಾಮ್ಯೂವೆಲ್, ಕೈಲಾಸನಾಥ ದೇಶಮುಖ, ಸುಭಾಶ ಶೀಲವಂತ, ಅಸ್ಲಂ ಚೌಂಗೆ, ರಾಜು ಜೈನ, ಶರಣಬಸಪ್ಪ ಕುರಿಕೋಟಿ, ಡಾ. ಮನ್ಸೂರ ಡೆಕ್ಕನಿ, ವಿನೋದ, ಮಹಿಬೂಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.