ವಾಡಿ; ಪಟ್ಟಣದ ರೆಸ್ಟ್ ಕ್ಯಾಂಪ್ ತಾಂಡದ ಸಾರ್ವಜನಿಕ ಉದ್ಯಾನವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜೂನ್ 21 ರಂದು ಬೆಳಗ್ಗೆ 06:00 ಗಂಟೆಯಿಂದ 07:00 ಗಂಟೆವರೆಗೆ 10ನೇ ವಿಶ್ವ ಯೋಗ ದಿನಾಚರಣೆಯನ್ನು ಪುರಸಭೆ,ಪಟ್ಟಣದ ಯೋಗಾಸಕ್ತರ ಹಾಗೂ
ಪತಂಜಲಿ ಯೋಗ ಸಮಿತಿ ವತಿಯಿಂದ ಆಚರಿಸಲಾಗುವುದು ಎಂದು ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಹೇಳಿದ್ದಾರೆ.
ನಮ್ಮ ದೇಶದ ಕೊಡುಗೆಯಾದ ಯೋಗವನ್ನು ಇಂದು ಇಡೀ ಜಗತ್ತೇ ಕೊಂಡಾಡುತ್ತಿದೆ. ಅದರ ಒಂದು ಪ್ರಯುಕ್ತವಾಗಿ ಜೂನ್ 21ರಂದು ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಪಂಚಾದ್ಯಂತ ಆಚರಿಸುತ್ತಿದ್ದು ನಮ್ಮೆಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.
ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬುದು 2024ರ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಘೋಷ ವಾಕ್ಯವಾಗಿದ್ದು, ಮಹಿಳೆಯರು,ಯುವಕರು,ವಯಸ್ಕರು ಸೇರಿದಂತೆ ಎಲ್ಲರೂ ಜೀವನದ ಅವಿಭಾಜ್ಯ ಅಂಗವಾಗಿರುವ ಯೋಗದ ಮಹತ್ವವನ್ನು ಅರಿತು, ವಿಶ್ವಯೋಗ ದಿನದಲ್ಲಿ ಯೋಗಾಭ್ಯಾಸ ಮಾಡಿ ಪ್ರತಿ ದಿನ ಯೋಗದಲ್ಲಿ ನಿರತರಾಗಿ ದೇಹದ ದೇಶದ ಆರೋಗ್ಯಕ್ಕೆ ಬದ್ದರಾಗಬೇಕಾಗಿದೆ.
ಈ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಹೇಳಿದರು.