ಕನ್ನಡ ಸಾರಥಿ ಕೃತಿ ಅವಲೋಕನ 22 ರಂದು: ಜಿಲ್ಲಾ ಕಸಾಪ ಅಧ್ಯಕ್ಷರ ಪರಿಚಯಾತ್ಮಕ ಕೃತಿ

0
40

ಕಲಬುರಗಿ: ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕøತಿಗೆ ಹಿಂದಿನ ಕಸಾಪ ಜಿಲ್ಲಾಧ್ಯಕ್ಷರು ನೀಡಿದ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ ಸಾರಥಿ ಎಂಬ ಕಸಾಪ ಅಧ್ಯಕ್ಷರ ಪರಿಚಯಾತ್ಮಕ ಕೃತಿಯ ಒಂದು ಅವಲೋಕನ ಕಾರ್ಯಕ್ರಮವನ್ನು ಜೂ.22 ರ ಸಾಯಂಕಾಲ 4.15 ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕನ್ನಡ ಕಟ್ಟಿದ ಬಗೆಯನ್ನು ಆ ಮೂಲಕ ಜಿಲ್ಲೆಯನ್ನು ಕನ್ನಡ ನಾಡಿನಲ್ಲಿ ವಿರಾಜಮಾನವಾಗಿಸಿದವರ ಕೋಶವಾಗಿರುವ ಈ ಕೃತಿಯಲ್ಲಿ, ಸಂಸ್ಕøತಿ-ಸಂಸ್ಕಾರವನ್ನು ಬಿತ್ತರಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ರೂವಾರಿಗಳನ್ನು ಒಂದೆಡೆ ಪೋಣಿಸಿ ಕೊಡುವುದರೊಂದಿಗೆ ಈ ಕೃತಿಯು ದಾಖಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜೆ ್ಜ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಟ್ಟಿದೆ.
ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿ ಬೆಳೆಯುವಲ್ಲಿ ಅನೇಕರ ಶ್ರಮವೂ ಕಾರಣ. ಹತ್ತು ಹಲವು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಮೂಲಕ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಈ ದಿಸೆಯಲ್ಲಿ ಸಾರಥ್ಯ ವಹಿಸಿದ ಈ ಕನ್ನಡ ಸಾರಥಿಗಳ ಕಾರ್ಯ ಚಟುವಟಿಕೆಗಳು ಹಾಗೂ ಯಶೋಗಾಥೆ ಪರಿಚಯಿಸುವ ಪುಟ್ಟ ಯತ್ನವೇ ಈ ಕೃತಿಯಾಗಿದೆ ಎಂದು ಅವರು ವಿವರಿಸಿದ್ದಾರೆ.

Contact Your\'s Advertisement; 9902492681

ಒಟ್ಟು ಹನ್ನೊಂದು ಜನ ಕನ್ನಡ ಸಾರಥಿಗಳ ಬದುಕು ಮತ್ತು ಬರಹದ ಹೆಜ್ಜೆ ಗುರುತುಗಳು ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಈ ಕೃತಿಯನ್ನು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹಾಗೂ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ಯವರು ಪ್ರಕಟಿಸಿ ಸಂಪಾದಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾದ ಪುಸ್ತಕವಾಗಿದ್ದು, ಪ್ರತಿಯೊಬ್ಬ ಕನ್ನಡ ಸಾರಥಿಗಳ ಕಾರ್ಯ ಸಾಧನೆ ಇವತ್ತಿನ ಸಮಾಜಕ್ಕೆ ಮಾದರಿಯಾಗಬಹುದು ಎಂಬ ಆಶಯವನ್ನು ಹೊಂದಲಾಗಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ತಿಳಿಸಿದ್ದಾರೆ.

ಜೂನ್ 22 ರ ಸಾಯಂಕಾಲ 4.15 ಕ್ಕೆ ನಗರದ ಕನ್ನಡ ಭವನದಲ್ಲಿ ಜರುಗಲಿರುವ ಕೃತಿ ಅವಲೋಕನ ಕಾರ್ಯಕ್ರಮವನ್ನು ಖ್ಯಾತ ವೈದ್ಯ ಲೇಖಕ ಡಾ. ಪಿ.ಎಸ್. ಶಂಕರ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಉತ್ತರಾದೇವಿ ಎಸ್ ಮಠಪತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಹಿರಿಯ ಸಾಹಿತಿ ಡಾ. ಶ್ರೀಶೈಲ್ ನಾಗರಾಳ ಅವರು ಕೃತಿ ವಿಮರ್ಶೆ ಮಾಡಲಿದ್ದಾರೆ. ಪ್ರಯುಕ್ತ ಸಾಹಿತಿಗಳು, ಆಸಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here