ಕಲಬುರಗಿ: ಕಬ್ಬಿನ ಬಾಕಿ ಹಣ ಬಿಡುಗಡೆಗಾಗಿ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಪ್ರಾಂತ ರೈತ ಸಂಘದ ನಿಯೋಗವು ಬೆಂಗಳೂರಿನಲ್ಲಿ ನಿಯೋಗ ತೆರಳಿ ಜುಲೈ 24ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನಾ ಪ್ರದರ್ಶನ ಮಾಡಿದರು.
ಅಫಜಲಪುರ ತಾಲ್ಲೂಕಿನ ಭೀಮಾ ನದಿಯ ವ್ಯಾಪ್ತಿಯಲ್ಲಿ ಎರಡು ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿ ಮುಗಿದಿದೆ. ಆದರೆ ಗೇಟ್ ಹಾಕಿಲ್ಲ. ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ನೀಡಿ ಬೀಜ್ ಕಂ ಬ್ಯಾರೇಜ್‍ಗೆ ಗೇಟ್ ಕೂಡಿಸಿ ನೀರು ನಿಲ್ಲಿಸಬೇಕು. ರೈತರಿಗೆ ನೀರಾವರಿ ಮಾಡಲು ಒತ್ತು ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಕಬ್ಬು ಬೆಳೆಗಾರರ 2022 ಮತ್ತು 2023ರ ಸಾಲಿನ ಕಬ್ಬು ಕಟಾವು ಮಾಡಿದ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡದೆ ರೈತರಿಗೆ ದ್ರೋಹ ಬಗೆದಿದೆ. ರೇಣುಕಾ ಶುಗರ್ಸ್ ಹಾವಳಗಾ ಸಕ್ಕರೆ ಕಾರ್ಖಾನೆ ಪ್ರತಿ ರೈತರಿಂದ ಪ್ರತಿ ಟನ್ ಕಬ್ಬಿಗೆ ಪ್ರಕಾರ 112 ರೂ.ಗಳ ಬಾಕಿ ಉಳಿಸಿಕೊಂಡು ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಿದೆ. ಚಿಮಣಗೇರಾ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಗಾರರ ಕಳೆದ ವರ್ಷದ 2022 ಮತ್ತು 2023ನೇ ಸಾಲಿನ ಪ್ರತಿ ಟನ್ ಕಬ್ಬಿಗೆ 162 ರೂ.ಗಳ ಬಾಕಿ ಹಣ ಉಳಿಸಿಕೊಂಡ ಕಬ್ಬು ಬೆಳೆಗಾರರ ಬೆನ್ನಿಗೆ ಚೂರಿ ಹಾಕಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ರೇಣುಕಾ ಶುಗರ್ಸ್ ಹಾವಳಗಾ ಒಟ್ಟು 23000 ಜನ ರೈತರ ಒಟ್ಟು 10 ಲಕ್ಷ ಟನ್ ಕಬ್ಬು ಪೂರೈಸಿದ್ದು, ಪ್ರತಿ ಟನ್ ಕಬ್ಬಿಗೆ 112 ರೂ.ಗಳಂತ ಒಟ್ಟು ಹಣ 112000000 ರೂ.ಗಳ ಕಬ್ಬಿನ ಬಾಕಿ ಹಣ ಕೊಡಬೇಕು ಎಂದು ಅವರು ಒತ್ತಾಯಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಿದ್ಧøಆಮ್ ಎಸ್. ದಣ್ಣೂರ್, ಅಶೋಕ್ ಹೂಗಾರ್ ಮುಂತಾದವರು ನಿಯೋಗದಲ್ಲಿದ್ದಾರೆ.