ಸಮಾಜಸೇವೆಯಲ್ಲಿ ಜೀವನದ ಸಾರ್ಥಕತೆಯಿದೆ: ಅನುಶ್ರೀ

0
95

ಸಸಿನೆಟ್ಟು, ವೃದ್ದರಿಗೆ ಬೆಡ್ ಶೀಟ್ ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಪರಿಸರ ಪ್ರೇಮಿ

ಆನೇಕಲ್: ಸಮಾಜ ಸೇವಕಿ, ಪರಿಸರ ಪ್ರೇಮಿ ಅನುಶ್ರೀ ಅವರ ಹುಟ್ಟುಹಬ್ಬವನ್ನು ಆನೇಕಲ್ ತಾಲ್ಲೂಕಿನ ಆರ್.ಕೆ.ಪಾರಂನಲ್ಲಿರುವ ಆಶ್ರಯ ವೃದ್ಧಾಶ್ರಮದ ನಿರಾಶ್ರಿತರಿಗೆ ಹೊದಿಕೆ, ಸಿಹಿತಿಂಡಿ ವಿತರಿಸಿ ಹಾಗೂ ಜೀನಿಯಸ್ ಶಾಲೆಯಲ್ಲಿ ಹಣ್ಣಿನ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ತಮ್ಮ ಆಪ್ತ ಬಳಗದ ಜೊತೆಗೆ ಆಶ್ರಯ ವೃದ್ಧಾಶ್ರಮದಲ್ಲಿ ಕೇಕ್ ಕಟ್ ಮಾಡಿ, ನಿರಾಶ್ರಿತರಿಗೆ ಸಿಹಿಯನ್ನು ತಿನ್ನಿಸಿದರು. ಹಾಗೂ ಚಳಿಯ ವಾತಾವರಣಕ್ಕೆ ಅಗತ್ಯವಾಗಿರುವಂತಗ ಬೆಡ್ ಶೀಟ್ ಗಳನ್ನು ವಿತರಿಸಿ, ಅವರ ಮುಖದಲ್ಲಿ ನಗು ಮೂಡಿಸಿದರು.

Contact Your\'s Advertisement; 9902492681

ಈ ವೇಳೆ ತಮ್ಮ ಸಂತಸವನ್ನು ಹಂಚಿಕೊಂಡ ಅನುಶ್ರೀ ಅವರು, ಪ್ರತಿ ವರ್ಷ ನನ್ನ ಹುಟ್ಟು ಹಬ್ಬವನ್ನು ಎಚ್ ಎಸ್ ಆರ್ ಲೇಔಟ್ ನಲ್ಲಿ ಸಮಾಜಸೇವೆ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದ್ದೆ. ಆದರೆ, ಈ ವರ್ಷ ಗುಡ್ಡಟ್ಟಿ ಗೋಪಿ ಅವರ ಸಲಹೆಯ ಮೇರೆಗೆ ಶಾಲೆಯಲ್ಲಿ ಸಿಸಿಗಳನ್ನು ನೆಟ್ಟು, ವೃದ್ಧರಿಗೆ ಸಿಹಿತಿನ್ನಿಸಿ ಅವರ ಜೊತೆ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದು ಮನಸಿಗೆ ಉಲ್ಲಾಸ ನೀಡಿದೆ ಎಂದು ಸಂತಸ ಪಟ್ಟರು‌.

ಮುಂದಿನ ದಿನಗಳಲ್ಲಿ ಆನೇಕಲ್ ಭಾಗದಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ಇಚ್ಚಿಸಿದ್ದೇನೆ. ಎಲ್ಲರ ಸಹಕಾರದೊಂದಿಗೆ ಬಡವರ, ನಿರಾಶ್ರಿತರ ಏಳ್ಗೆಗೆ ಶ್ರಮಿಸಲಿದ್ದೇನೆ ಎಂದು ಅವರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಈ ವೇಳೆ ರಮೇಶ ರೆಡ್ಡಿ, ಬನಹಳ್ಳಿ ರವಿ, ಗೋಪಿ, ಲೋಕೇಶ್, ನಾಗರಾಜು, ಇಗ್ಲೂರು ನಾರಾಯಣ, ಪವಿತ್ರ, ಶೋಭಾ, ಚಂದ್ರಕಲಾ, ಭಾಗ್ಯ, ಪೂಜಾ, ರೋಜಾ, ಪವಿತ್ರಾ ಸೇರಿದಂತೆ ಹಲವರು ಅಶ್ವಿನಿ ಅವರ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here