ಸಿಯುಕೆಯಲ್ಲಿ ʼಕೃತಕ ಬುದ್ದಿಮತ್ತೆ ಮತ್ತು ಸಂಶೋಧನೆ ರಾಷ್ಟ್ರೀಯ ಸಮ್ಮೇಳನ

0
106

ಕಲಬುರಗಿ; “ತಂತ್ರಜ್ಞಾನಗಳು ಗ್ರಂಥಾಲಯಗಳು ಜನರಿಗೆ ಸೇವೆ ಸಲ್ಲಿಸುವ ವಿಧಾನವನ್ನು ಪರಿವರ್ತಿಸಿವೆ” ಎಂದು ಮುಂಬೈನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್ (ಐಜಿಐಡಿಆರ್) ಮುಖ್ಯ ಗ್ರಂಥಪಾಲಕ ಡಾ. ಎಸ್.ಎಂ ಪೂಜಾರ್ ಅವರು ಹೆಳಿದರು. ನಿನ್ನೆ ನಡೆದ “ಕೃತಕ ಬುದ್ದಿಮತ್ತೆ ಮತ್ತು ಸಂಶೋಧನೆ ಪರಿಣಾಮಗಳು ಮತ್ತು ಅನ್ವಯಗಳು” ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದರು.

ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ ಎಸ್ ಆರ್ ರಂಗನಾಥ್ ಅವರ 132 ನೇ ಜನ್ಮದಿನದ ಸಂದರ್ಭದಲ್ಲಿ ನವದೆಹಲಿಯ ಇಂಡಿಯನ್ ಲೈಬ್ರರಿ ಅಸೋಸಿಯೇಷನ್‍ನ ಸಹಯೋಗದೊಂದಿಗೆ ಸಿಯುಕೆಯ ಸೆಂಟ್ರಲ್ ಲೈಬ್ರರಿ ಈ ಸಮ್ಮೇಳನವನ್ನು ಆಯೋಜಿಸಿತ್ತು. ಅವರು ಮುಂದುವರೆದು ಮಾತನಾಡಿ “ಗ್ರಂಥಪಾಲಕರು ಬಳಕೆದಾರರ ಸಮುದಾಯಕ್ಕೆ ಶೈಕ್ಷಣಿಕ ಗ್ರಂಥಾಲಯ ಸೇವೆಗಳನ್ನು ಒದಗಿಸುವ ವಿಷಯದಲ್ಲಿ ಗ್ರಂಥಾಲಯ ಚಟುವಟಿಕೆಗಳಲ್ಲಿ ತೀವ್ರ ಬದಲಾವಣೆಯನ್ನು ಕಾಣಬಹುದು. ಗ್ರಂಥಾಲಯ ವಿಜ್ಞಾನದ ಐದು ನಿಯಮಗಳಾದ, ವರ್ಗೀಕರಣ ಯೋಜನೆ, ಗ್ರಂಥಾಲಯ ಕ್ಯಾಟಲಾಗ್, ಗ್ರಂಥಾಲಯ ಶಿಕ್ಷಣ, ಗ್ರಂಥಾಲಯ ವಿಸ್ತರಣೆ, ಗ್ರಂಥಾಲಯ ತತ್ವಶಾಸ್ತ್ರದ ದಾಖಲೀಕರಣಕ್ಕೆ ಡಾ.ಎಸ್.ಆರ್. ರಂಗನಾಥ್ ಅವರ ಕೊಡುಗೆ ಅಪಾರವಾಗಿದೆ” ಎಂದು ಹೇಳಿದರು.

Contact Your\'s Advertisement; 9902492681

ಕೃತಕ ಬುದ್ದಿಮತ್ತೆ ಕುರಿತು ಮಾತನಾಡುತ್ತಾ “ಇದು ಕಂಪ್ಯೂಟರ್ ವಿಜ್ಞಾನದಲ್ಲಿ ಜನಪ್ರಿಯವಾಗುತ್ತಿದೆ ಏಕೆಂದರೆ ಇದು ಅನೇಕ ಕ್ಷೇತ್ರಗಳಲ್ಲಿ ಮಾನವ ಜೀವನವನ್ನು ಬದಲಿಸಿದೆ. ಕಳೆದ ಎರಡು ದಶಕಗಳಲ್ಲಿ ಕೃತಕ ಬುದ್ಧಿಮತ್ತೆಯು ಶಿಕ್ಷಣದಲ್ಲಿ, ಉತ್ಪಾದನೆ, ಸೇವಾ ವಲಯ ಮುಂತಾದವುಗಳ ಕಾರ್ಯಕ್ಷಮತೆಯನ್ನು ಸುಧಾರಿಸಿದೆ. ಕೃತಕ ಬುದ್ಧಿಮತ್ತೆ  ʼತಜ್ಞರ ವ್ಯವಸ್ಥೆʼ ಎಂದು ಕರೆಯಲ್ಪಡುವ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಹುಟ್ಟುಹಾಕಿದೆ. ಕೃತಕ ಬುದ್ಧಿಮತ್ತೆಯ ಅನ್ವಯಗಳು ಜೀವನದ ವಿವಿಧ ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಶಿಕ್ಷಣ, ಇಂಜಿನಿಯರಿಂಗ್, ವ್ಯಾಪಾರ, ಔಷಧ, ಹವಾಮಾನ ಮುನ್ಸೂಚನೆ ಇತ್ಯಾದಿ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಕೃತಕ ಬುದ್ದಿಮತ್ತೆಯ ʼತಜ್ಞರ ವ್ಯವಸ್ಥೆʼಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕ್ಷೇತ್ರಗಳು ಸುಧಾರಿತ ಗುಣಮಟ್ಟ ಮತ್ತು ದಕ್ಷತೆಯನ್ನು ಕಂಡಿವೆ” ಎಂದು ಹೇಳಿದರು.

ಸಿಯುಕೆಯ ಕೇಂದ್ರ ಗ್ರಂಥಾಲಯ ಆರಂಭಿಸಿರುವ ಗುಡ್ ಮಾನಿರ್ಂಗ್ ಸಿಯುಕೆ ನ್ಯೂಸ್ ಕ್ಲಿಪ್ಪಿಂಗ್ ಸೇವೆಗಳನ್ನು ಪ್ರಭಾರಿ ಕುಲಸಚಿವ ಪೆÇ್ರ.ಚನ್ನವೀರ್ ಆರ್.ಎಂ ಬಿಡುಗಡೆಗೊಳಿಸಿ ಮಾತನಾಡಿ “ಸಿಯುಕೆ ಗ್ರಂಥ ಪಾಲಕ ಮತ್ತು ತಂಡವು ಗುಡ್ ಮಾನಿರ್ಂಗ್ ಸಿಯುಕೆ ನ್ಯೂಸ್ ಕ್ಲಿಪ್ಪಿಂಗ್ ಸೇವೆಗಳ ಮೂಲಕ ಎಲ್ಲಾ ಶಿಕ್ಷಕರಿಗೆ ಹಾಗು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಸುಧಾರಿಸಲು ಸುದ್ದಿ ಸೇವೆಗಳನ್ನು ನೀಡುತ್ತಿದೆ. ಕೃತಕ ಬುದ್ದಿಮತ್ತೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸಲಿದೆ. ಕೃತಕ ಬುದ್ದಿಮತ್ತೆ ವಿಷಯಗಳನ್ನು ಸರಳ ರೀತಿಯಲ್ಲಿ ತರುತ್ತದೆ, ಆದರೆ ಸಂಶೋಧನೆಗೆ ಕೃತಕ ಬುದ್ದಿಮತ್ತೆಯ ಉಪಕರಣವನ್ನು ಯಾವ ಪ್ರಮಾಣದಲ್ಲಿ ಬಳಸಬಹುದು ಎಂದು ಸಂಶೋಧಕರು ಯೋಚಿಸಬೇಕು” ಎಂದು ಹೇಳಿದರು.

ವಿಶ್ವವಿದ್ಯಾಲಯದ ಗ್ರಂಥಪಾಲಕ ಹಾಗು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪಿ.ಎಸ್.ಕಟ್ಟಿಮನಿ ಅವರು ರಾಷ್ಟ್ರೀಯ ವಿಚಾರ ಸಂಕಿರಣದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿ ಈ ಸಮ್ಮೇಳನದ ಆಯೋಜನೆಯ ಮೂಲ ಉದ್ದೇಶ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸವುದು, ಸಿಯುಕೆಯ ಗ್ರಂಥಾಲಯ ಬಳಕೆದಾರರಿಗೆ ಅತ್ಯುತ್ತಮ ಗ್ರಂಥಾಲಯ ಬಳಕೆದಾರರ ಪ್ರಶಸ್ತಿಗಳನ್ನು ನೀಡುವುದು ಮತ್ತು ಇಂದಿನ ಶಿಕ್ಷಣ ತಜ್ಞರಿಗೆ ಬೇಕಾದ ಇತ್ತೀಚಿನ ತಂತ್ರಜ್ಞಾನಗಳ ಮೇಲೆ ಬೆಳಕು ಚೆಲ್ಲುವುದಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಪ್ರವೀಣ್ ಶೇಟ್, ‘ಲರ್ನ್ ಎಐ ವಿತ್ ಪ್ಯಾಕೆಟ್’ ಕುರಿತು ಮಾತನಾಡಿದರು, ಡಾ. ಗುರುರಾಜ್ ಮುಕರಂಬಿ, ʼ21 ನೇ ಶತಮಾನದ ಸಮಾಜದ ಮೇಲೆ ಪರಿಣಾಮ ಬೀರುವ ತಂತ್ರಜ್ಞಾನಗಳ (ಎಐ, ಮೆಷಿನ್ ಲನಿರ್ಂಗ್ ಐಒಟಿ ಮತ್ತು ಕಂಪ್ಯೂಟರ್ ವಿಷನ್) ಪ್ರಭಾವʼ, ಶ್ರೀ ಶಿವಹರ್ನ್ ಅವರು ‘ಜೋವ್ ಮತ್ತು ರೈಟ್: ಸ್ವಯಂಚಾಲಿತ ಪ್ರೂಫ್ ರೀಡಿಂಗ್ ಟೂಲ್’, ಗ್ರಾಮರ್ಲಿ ಮತ್ತು ಕೃತಕ ಬುದ್ಧಿಮತ್ತೆಯ ಕುರಿತು ಶ್ರೀ ಬಿನ್ನೊಯ್ ಮತ್ತು ಶ್ರೀ ಗುಪ್ತಾ ವಿ ಅವರು ‘ರಿಮೋಟ್ ಆಕ್ಸೆಸ್ ಮತ್ತು ಡಿಜಿಟಲ್ ಪೆÇೀರ್ಟಲ್’ ಕುರಿತು ಮಾತನಾಡಿದರು.

ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಆವ್ಹಾನಿತರು ಉಪಸ್ಥಿತರಿದ್ದರು. ಸಿಯುಕೆ ಉಪ ಗ್ರಂಥಪಾಲಕ ಡಾ.ಸತೀಶ್ ವಿ ತೋಟಾರ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here