ಅಕ್ರಮ ಮರಳು ಗಣಿಗಾರಿಕೆ ಕಡಿವಾಣಕ್ಕೆ ಒತ್ತಾಯಿಸಿ ಸತ್ಯಾಗ್ರಹ

0
31

ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮತ್ತು ಗಣಿಗಾರಿಕೆಗೆ ಕಡಿವಾಣ ಹಾಕಲು ಆಗ್ರಹಿಸಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಸೂಚನೆ ಜಾರಿಗೆ ಒತ್ತಾಯಿಸಿ ಜಿಲ್ಲಾ ಟಿಪ್ಪರ ಮಾಲೀಕರ ಅಭಿವೃದ್ಧಿ ಸಂಘದ ನೆತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಯಿತು.

ನಂತರ ಶಾಸಕ ಅಲ್ಲಮಪ್ರಭು ಪಾಟೀಲ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವಿಕರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆನಂದ ಬಿ.ರಾಧೆ, ಗೌರವಾಧ್ಯಕ್ಷ ಡಿ.ಜಿ.ಜಗದೀಶ, ಕಾರ್ಯದರ್ಶಿ ಮಹ್ಮದ ಹನೀಫ,  ವಿಠಲ, ಕಿರಣ ರಾಠೋಡ, ಶ್ರೀಕಾಂತ ರಾಠೋಡ, ಅಲೀಮ, ಅಬ್ದುಲ, ಶಿವ ಧಣಿ, ಇಕ್ಷಾಲ ಪಟೇಲ, ಮಾಣಿಕ ಪಾಟೀಲ ಸೇರಿದಂತೆ ಹಲವರು ಭಾಗವಹಿಸಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here