ರಾಜ್ಯಪಾಲರ ಅಧಿಕಾರ ದುರುಪಯೋಗ : ಸಿಪಿಐಎಂ ಖಂಡನೆ

0
51

ಕಲಬುರಗಿ: ಆರ್ಟಿಐ ಕಾರ್ಯಕರ್ತರೊಬ್ಬರ ಕೋರಿಕೆಯ ಮೇರೆಗೆ ರಾಜ್ಯದ ರಾಜ್ಯಪಾಲರು ಧಿಡೀರನೆ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದರು.

ಇದೀಗ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರದ ಮುಖ್ಯಮಂತ್ರಿಯ ಮೇಲೆ ಎಫ್ ಐ ಆರ್ ದಾಖಲಿಸಲು ಅನುಮತಿ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿ ದುಷ್ಕೃತ್ಯ ವಾಗಿದೆಯೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳೊ ಸದಸ್ಯೆ ಹಾಗೂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ರಾಜ್ಯಪಾಲರೊಬ್ಬರು ಸಾಮಾನ್ಯ ಪ್ರಜೆಯೊಬ್ಬರ ಮನವಿ ಮೇರೆಗೆ ಮುಖ್ಯಮಂತ್ರಿಗಳಿಗೆ ಶೋಕಾಸ್ ನೀಡುವ ಮತ್ತು ಪ್ರಾಸಿಕ್ಯೂಷನ್ ಗೆ ಅವಕಾಶ ನೀಡುವ ಈ ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳಲ್ಲಿ ಆತಂಕ ಮೂಡಿಸಿದೆ. ಮುಖ್ಯಮಂತ್ರಿಗಳು ಈಗಾಗಲೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಸಭೆಯಲ್ಲು ಹಾಗೂ ನೇರ ರಾಜ್ಯಪಾಲರಿಗೂ ವಿವರವಾದ ಮಾಹಿತಿ ನೀಡಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಕ್ರಮವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪರಿಸ್ಥಿತಿ ಹೀಗಿದ್ದಾಗಲು, ಈ ರೀತಿಯ ಕ್ರಮ ಸ್ಪಷ್ಟವಾಗಿ ಇದೊಂದು ಅಧಿಕಾರ ದುರುಪಯೋಗವಾಗಿದೆ. ರಾಜ್ಯ ಸರಕಾರವನ್ನು ಅಧಿಕೃತವಾಗಿ ಪ್ರತಿನಿಧಿಸುವ ಘನತೆವೆತ್ತವರು ವಿರೋಧ ಪಕ್ಷದ ನಾಯಕರಂತೆ ಕ್ರಮವಹಿಸುತ್ತಿರುವುದು ಮತ್ತು ಬಿಜೆಪಿಯ ಒಕ್ಕೂಟ ಸರಕಾರದ ದಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಆರೋಪಿಸಿದ್ದಾರೆ.

ಲೋಕಾಯುಕ್ತರು ತನಿಖೆ ಆಧಾರದಲ್ಲಿ ಈಗಿನ ಒಕ್ಕೂಟ ಸರಕಾರದ ಸಂಪುಟ ದರ್ಜೆಯ ಸಚಿವ ಕುಮಾರ ಸ್ವಾಮಿಯವರಿಗೆ ಸಂಬಂಧಿಸಿ ಮನವಿ ಮಾಡಿ ಸುಮಾರು ಹತ್ತು ತಿಂಗಳಾಗುತ್ತಿದ್ದರು ಏನೊಂದು ಕ್ರಮವಹಿಸದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಕ್ರಮಕ್ಕೆ ಮುಂದಾಗಿರುವುದು ಬಹಳ ಸ್ಪಷ್ಟವಾಗಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡುವ ಬಿಜೆಪಿ ಹಾಗೂ ಒಕ್ಕೂಟ ಸರಕಾರದ ಮುಂದುವರೆದ ದುರ್ನಡೆಯ ಭಾಗವಾಗಿದೆಯೆಂದು ಟೀಕಿಸಿದ್ದಾರೆ.

ಬಿಜೆಪಿ ಮತ್ತು ಅದರ ಒಕ್ಕೂಟ ಸರಕಾರ ವಿರೋಧ ಪಕ್ಷಗಳ ಸರಕಾರಗಳನ್ನು ದುರ್ಬಲಗೊಳಿಸಲು ಇಲ್ಲವೆ ಅಗತ್ಯ ಬಹುಮತವಿಲ್ಲದಿದ್ದರೂ ಬಲವಂತವಾಗಿ ಬಿಜೆಪಿಯ ಸರಕಾರ ಸ್ಥಾಪನೆಗೆ ಕ್ರಮವಹಿಸಲು ರಾಜ್ಯಪಾಲರ ಕಚೇರಿ ಹಾಗೂ ಅವರ ವಿವೇಚನಾಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ಅನುಭವವೇದ್ಯವಾಗಿದೆ ಎಂದಿದೆ.

ರಾಜ್ಯದ ಜನತೆ ಬರಗಾಲ, ಅತೀವೃಷ್ಠಿ, ಬೆಲೆ ಏರಿಕೆಯ ಹೊರೆಗಳಿಂದ ಬಳಲುತ್ತಿರುವಾಗ ಬಿಜೆಪಿ ಒಂದು ರಚನಾತ್ಮಕ ವಿರೋಧ ಪಕ್ಷವಾಗಿ ವಿಧಾನಸಭೆಯಲ್ಲಿ ತನ್ನ ಮಿತ್ರ ಪಕ್ಷದ ಬಲದೊಂದಿಗೆ ರಾಜ್ಯ ಸರಕಾರದ ನಡೆಯನ್ನು ಜನಪರವಾಗಿ ಬದಲಾಯಿಸುವ ಮತ್ತು ತನ್ನ ಒಕ್ಕೂಟ ಸರಕಾರದ ಬಲವನ್ನು ಉಪಯೋಗಿಸಿ ರಾಜ್ಯದ ನೈಜ ಅಭಿವೃದ್ಧಿಗೆ, ಸಂಕಷ್ಠದಲ್ಲಿರುವ ಜನತೆಗೆ ನೆರವಾಗಲು ಅಗತ್ಯ ಕ್ರಮವಹಿಸುವುದರ ಬದಲು ಒಂದೆಡೆ, ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸಿದರೆ, ಮತ್ತೊಂದೆಡೆ ಸಂಕಷ್ಠದಲ್ಲಿರುವ ಜನತೆ ಸಂಕಷ್ಠದ ವಿರುದ್ದ ಗಮನ ಹರಿಸದಂತೆ ಅವರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರವನ್ನು ಹೆಣೆದಿದೆ ಎಂದು ಟೀಕಿಸಿದೆ.

ಲೋಕಸಭಾ ಚುನಾವಣೆಯಲ್ಲಿ ತನಗೆ ಮತದಾರರು ಉಂಟು ಮಾಡಿದ ಹಿನ್ನಡೆಯಿಂದಾಗಿ ಬಿಜೆಪಿ ಹಾಗೂ ಆರ್.ಎಸ್.ಎಸ್ ಮಾತ್ರವಲ್ಲಾ, ಲೂಟಿಕೋರ ಕಾರ್ಪೊರೇಟ್ ಸಂಸ್ಥೆಗಳು ವ್ಯಗ್ರ ಗೊಂಡಿವೆ. ಹೀಗಾಗಿ, ವಿರೋಧ ಪಕ್ಷಗಳ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸುವ ಮತ್ತು ಉರುಳಿಸುವ ಕೆಲಸಕ್ಕೆ ಕೈ ಹಾಕಿವೆ.

ಇದರ ಭಾಗವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯಾದ ಅನುಷ್ಠಾನ ನಿರ್ಧೇಶನಾಲಯ (ಈ.ಡಿ) ರಾಜ್ಯ ಸರಕಾರದ ಉನ್ನತ ಸಚಿವರು ಹಗರಣದಲ್ಲಿದ್ದಾರೆಂದು ಹೇಳುವಂತೆ ತನ್ನನ್ನು ಹಿಂಸಿಸಲಾಗಿದೆಯೆಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಪೋಲೀಸರಿಗೆ ದೂರು ಸಲ್ಲಿಸಿರುವುದನ್ನು ಮತ್ತು ಮೂಡಾ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದ ನಂತರವೂ ಬಿಜೆಪಿ ಪಾದಯಾತ್ರೆಗೆ ಕ್ರಮವಹಿಸಿರುವುದನ್ನು ರಾಜ್ಯಪಾಲರ ನಡೆ ಈ ಎಲ್ಲವನ್ನು ಸಮರ್ಥಿಸುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾ ಪ್ರಭುತ್ವ ವಿರೋಧಿ ನಡೆಗಾಗಿ ಜನತೆಯಿಂದ ಮುಖಕ್ಕೆ ಇಕ್ಕಿಸಿಕೊಂಡರು ಬಿಜೆಪಿ ಪಾಠ ಕಲಿಯದಿರುವದನ್ನು ಇದು ಹೇಳುತ್ತದೆ. ಬಿಜೆಪಿ ಹಾಗೂ ಒಕ್ಕೂಟ ಸರಕಾರಗಳು ರಾಜ್ಯ ಸರಕಾರದ ಮೇಲೆ ನಡೆಸುತ್ತಿರುವ ಪ್ರಜಾಪ್ರಭುತ್ವ ಹಾಗೂ ಜನ ವಿರೋಧ ಈ ದುರ್ಧಾಳಿಗಳನ್ನು ಈ ಕೂಡಲೆ ನಿಲ್ಲಿಸುವಂತೆ ಆಗ್ರಹಿಸಿದೆ.

ಎಲ್ಲ ಪ್ರಜಾಪ್ರಭುತ್ವ ಪ್ರೇಮಿಗಳು ಬಿಜೆಪಿಯ ಇಂತಹ ಪ್ರಜಾಪ್ರಭುತ್ವ ವಿರೋಧಿ ದುರ್ನಡೆಯನ್ನು ಪ್ರತಿರೋಧಿಸಲು ಯು.ಬಸವರಾಜ ಕರೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here