ಕಾಳಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯುವ ಕರ್ನಾಟಕ ವೇದಿಕೆಯ ಕಾಳಗಿ ತಾಲೂಕಿನ ನೂತನ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಯುವ ಕರ್ನಾಟಕ ವೇದಿಕೆಯ ಸಂಸ್ಥಾಪಕರಾದ ರೂಪೇಶ್ ರಾಜಣ್ಣ ಹಾಗೂ ರಾಜ್ಯ ಅಧ್ಯಕ್ಷರ ಆದೇಶದಂತೆ ಜಿಲ್ಲಾ ಅಧ್ಯಕ್ಷ ಮತ್ತು ಚಿಂಚೋಳಿ ಅಧ್ಯಕ್ಷರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕು ಅಧ್ಯಕ್ಷರಾಗಿ ಸಚಿನ್ ಸಿ ರಾಠೋಡ್. ಉಪಾಧ್ಯಕ್ಷರಾಗಿ ಚಂದ್ರಶೇಖರ್ ನಾಟಿಕರ್, ತಾಲೂಕು ಯುವ ಘಟಕ ಅಧ್ಯಕ್ಷರಾಗಿ ಚೆನ್ನವೀರ ಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ದಿಲೀಪ್ ಕುಮಾರ್, ಯುವ ಘಟಕ ಉಪಾಧ್ಯಕ್ಷರಾಗಿ ದಿನೇಶ್ ಜಾದವ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಕರ್ನಾಟಕ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಸಚಿನ್ ಚೌಹಾಣ್.ಗುರುನಾಥ್ ರಾಥೋಡ್. ಮುಖಂಡರಾದ ವಿಕ್ರಂ ಚೌಹಾಣ್,ಹಿರಾ ಪವಾರ್ ಆಕಾಶ್ ರಾಥೋಡ್, ಮತ್ತು ಅನೇಕ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು