ರಾವೂರ: ಕೇರಳ ರಾಜ್ಯದಲ್ಲಿ ತಲೆತ್ತಿದ್ದ ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀ ಅಸಮಾನತೆ, ತಾರತಮ್ಯಗಳ ವಿರುದ್ಧ ಹಿಂದುಳಿದ ಕುಲದಲ್ಲಿ ಜನಿಸಿದ ನಾರಾಯಣ ಗುರುಗಳು ವ್ಯವಸ್ಥೆಯನ್ನು ಸುಧಾರಿಸಲು ತಮ್ಮ ಬದುಕನ್ನೇ ಸಮರ್ಪಿಸಿದರು ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ರಾವೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬ್ರಾಹ್ಮಶ್ರೀ ನಾರಾಯಣ ಗುರೂಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮನುಷ್ಯರನ್ನು ಮನುಷ್ಯರಂತೆ ಕಾಣದ ಸಮಾಜವನ್ನು ದಿಕ್ಕರಿಸಿ ಹೊಸ ಬದಲಾವಣೆ ತರಲು ಟೊoಕ ಕಟ್ಟಿ ನಿಂತರು. 12ನೇ ಶತಮಾನಕ್ಕಿಂತ ಹೆಚ್ಚಿನ ಜಾತೀಯತೆ, ಅಸ್ಪೃಶ್ಯತೆ ಕೇರಳದಲ್ಲಿ ಬೇರುರಿತ್ತು. ಇದನ್ನು ಬುಡ ಸಮೇತ ಕಿತ್ತುಹಾಕಲು ನಿರಂತರವಾಗಿ ಶ್ರಮಿಸಿ ಇವತ್ತಿಗೂ ಕೂಡ ಜನರ ಮನದಲ್ಲಿ ನೆಲೆಸಿರುವ ಮಹಾನ್ ಸಂತರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈಡಿಗ ಸಮಾಜದ ಮುಖಂಡರಾದ ಅಮೃತ ಗುತ್ತೇದಾರ್, ದತ್ತಾತ್ರೇಯ ಗುತ್ತೇದಾರ್, ಭೀಮಾಶಂಕರ ಗುತ್ತೇದಾರ್, ನರೇಂದ್ರ ಗುತ್ತೇದಾರ್, ಬಸವರಾಜ ಗುತ್ತೇದಾರ್, ರೋಹಿತ್ ಗುತ್ತೇದಾರ, ನರಸಯ್ಯ ಗುತ್ತೇದಾರ್,ಸೇರಿದಂತೆ ಮುಖಂಡರಾದ ಈಶ್ವರ ಬಾಳಿ, ಶಿಕ್ಷಕರಾದ ಸಿದ್ದಲಿಂಗ ಬಾಳಿ,ಗಂಗಪ್ಪ ಕಟ್ಟಿಮನಿ, ಈಶಪ್ಪ ಇಂಗಳಗಿ,ಶಿವಕುಮಾರ್ ಮಠ ಇದ್ದರು