ಸುರಪುರ: ನಾನು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡುತ್ತೇನೆ ಎಂದರೆ ಅದಕ್ಕೆ ಎಲ್ಲಾ ಗ್ರಾಮ ಪಂಚಾಯತಿ ನೌಕರರು ಮಾಡುವ ಕೆಲಸದ ಕಾರಣದಿಂದ ಆದ್ದರಿಂದ ಎಲ್ಲಾ ಗ್ರಾಮ ಪಂಚಾಯತಿ ನೌಕರರು ನಮ್ಮ ಮನೆಯ ಸದಸ್ಯರಿದ್ದಂತೆ ತಾವ್ಯಾರು ಆತ್ಮಹತ್ಯೆಗೆ ಮುಂದಾಗ ಬಾರದು ಎಂದು ತಾ.ಪಂ ಇಓ ಬಸವರಾಜ ಸಜ್ಜನ್ ತಿಳಿಸಿದರು.
ನಗರದ ತಾಲೂಕ ಪಂಚಾಯತಿ ಕಚೇರಿ ಮುಂದೆ ಗ್ರಾಮ ಪಂಚಾಯತಿ ನೌಕರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಮಾತನಾಡಿ,ಯಲ್ಲಪ್ಪ ಆತ್ಮಹತ್ಯೆಗೆ ಯತ್ನಿಸಿರುವುದು ತುಂಬಾ ನೋವಿನ ಸಂಗತಿಯಾಗಿದೆ.ನನಗೆ ಒಂದು ಕರೆ ಮಾಡಿ ತಿಳಿಸಬಹುದಿತ್ತು ಎಂದರು.ಅಲ್ಲದೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ನೌಕರರು ನಿಮಗೆ ಏನೆ ಸಮಸ್ಯೆ ಇದ್ದರು ನನಗೆ ತಿಳಿಸಿ,ಅಲ್ಲದೆ ಶೀಘ್ರವೇ ಎಲ್ಲಾ ಬಿಲ್ ಕಲೆಕ್ಟರ್ ಸಭೆ ಕರೆದು ಯಾರ್ಯಾರು ಹಣವನ್ನು ಪಂಚಾಯತಿ ಕೆಲಸಗಳಿಗೆ ಖರ್ಚು ಮಾಡಿದ್ದೀರಿ ಅದನ್ನು ಕೊಡಿಸುವುದಾಗಿ ಭರವಸೆ ನೀಡಿದರು.ಅಲ್ಲದೆ ಯಲ್ಲಪ್ಪ ಆತ್ಮಹತ್ಯೆಗೆ ಕಾರಣರಾಗಿರುವ ಪಿಡಿಓ ಮೇಲೆ ಮತ್ತು ಅಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ತಿಳಿಸಲಾಗಿದೆ,ಅಲ್ಲದೆ ಅವರ ಮೇಲೆ ಪ್ರಕರಣವನ್ನು ದಾಖಲಿಸುವುದಾಗಿ ಭರಸವೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಜೈಲಾಲ್ ತೋಟದ ಮನಿ ಮಾತನಾಡಿ,ಯಾರೂ ಆತ್ಮಹತ್ಯೆ ಯಂತಹ ಹೀನ ಕೆಲಸಕ್ಕೆ ಮುಂದಾಗಬೇಡಿ,ಏನೆ ತೊಂದರೆಯಾದರೆ ಪ್ರತಿಭಟನೆ ಮಾಡಿ ಪರಿಹಾರ ಪಡೆಯೋಣ ಎಂದರು.ಅಲ್ಲದೆ ಈಗ ಯಲ್ಲಪ್ಪ ಅವರ ಆತ್ಮಹತ್ಯೆಗೆ ಕಾರಣರಾಗಿರುವ ಪಿಡಿಓ ದೇವಿಂದ್ರಪ್ಪ ಹಳ್ಳಿ ಹಾಗೂ ಅಧ್ಯಕ್ಷೆ ರೇಣುಕಾ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು.ಯಲ್ಲಪ್ಪ ಖರ್ಚು ಮಾಡಿರುವ ಹಣವನ್ನು ಕೊಡಿಸಬೇಕು,ಆತನ ಆಸ್ಪತ್ರೆ ಖರ್ಚು ಇವರಿಂದ ಭರಿಸಬೇಕು,ಪಿಡಿಓ ಅಮಾನತು ಮಾಡಿ,ಅಧ್ಯಕ್ಷರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ನಂತರ ಇಒ ಬಸವರಾಜ ಸಜ್ಜನ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ದೊರೆ,ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಬಳಿಚಕ್ರ,ಸುರಪುರ ತಾಲೂಕ ಅಧ್ಯಕ್ಷ ಯಲ್ಲಪ್ಪ ಸುರಪುರ,ಶಹಾಪುರ ತಾಲೂಕ ಅಧ್ಯಕ್ಷ ಅಮರಪ್ಪ ಸಗರ,ವಡಿಗೇರಾ ತಾಲೂಕ ಅಧ್ಯಕ್ಷ ಮುನಿಯಪ್ಪಗೌಡ ಕುರಕುಂದ,ಗುರುಮಠಕಲ್ ತಾ.ಅಧ್ಯಕ್ಷ ಮಹಾದೇವಪ್ಪ ಎಂಪಾಡ,ಬಸವರಾಜ ಯಮನೂರ,ರಮೇಶ ಸೂಗುರ,ಮೌಲಾಲಿ ಮಲ್ಲಾ ಬಿ,ಷರೀಫ್ ಅಗ್ನಿ,ನಾಗಪ್ಪ ಹುಣಸಗಿ,ಎಲ್.ಮಲ್ಲಿಕಾರ್ಜುನ,ಬಸವರಾಜ ಹೆಮನೂರ,ಸಿದ್ದಪ್ಪ ಖಾನಾಪುರ,ಸದ್ದಾಂ ಹುಸೇನ್,ಪಿಡ್ಡಪ್ಪ ಮಗ್ಗದ್,ಬಸವರಾಜ ದೇವತ್ಕಲ್,ಹಣಮಂತ ಕೊಂಗಂಡಿ, ಲಕ್ಷ್ಮಣ ರತ್ತಾಳ,ಹಣಮಂತ್ರಾಯಗೌಡ ಕಾಮನಟಗಿ ಸೇರಿದಂತೆ ಜಿಲ್ಲೆ ಆರು ತಾಲೂಕಗಳ ಅನೇಕ ಜನ ಗ್ರಾ.ಪಂ ನೌಕರರು ಭಾಗವಹಿಸಿದ್ದರು.