ಕಲಬುರಗಿ: ಇಂದಿನ ಹೊಸ ಪೀಳಿಗೆಯು ಕನ್ನಡ ಸಾಹಿತ್ಯ ಪ್ರವೇಶ ಮಾಡುವ ಮೂಲಕ ಹೊಸ ಸಾಹಿತ್ಯ ಬೆಳವಣಿಗೆಗೆ ಕಾರಣರಾಗಬೇಕೆಂಬ ಉದ್ದೇಶದಿಂದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಶ್ರೀಮತಿ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ ಅವರ ನೇತೃತ್ವದಲ್ಲಿ ಆಗಷ್ಟ್ 29 ರಂದು ನಗರದ ಕನ್ನಡ ಭವನದ ಆವರಣದಲ್ಲಿ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಅದರ ಯಶಸ್ವಿಗಾಗಿ ಸಿದ್ಧತೆ ಭರದಿಂದ ಸಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಎಸ್ ಸಜ್ಜನಶೆಟ್ಟಿ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಜ್ಜನಶೆಟ್ಟಿ ಯವರು, ಕಲಬುರಗಿ ನೆಲವೆಂದರೆ ಸಂಸ್ಕøತಿ ಸಾಹಿತ್ಯದ ತವರೂರಾಗಿದೆ. ಅನೇಕ ಪ್ರಥಮಗಳಿಗೆ ಹೆಸರುವಾಸಿಯಾದ ನೆಲವಾಗಿದೆ. ಎಲ್ಲಾ ವರ್ಗದ ಜನರನ್ನು ಒಂದುಗೂಡಿಸುವುದೇ ಈ ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶವಾಗಿದೆ. ಸಾಹಿತ್ಯಕ, ಸಾಂಸ್ಕøತಿಕ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ವೈವಿಧ್ಯಮಯ ಮತ್ತು ಜನಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಷತ್ತು ಜನಸಾಮಾನ್ಯರ ಬಳಿ ಕೊಂಡೊಯ್ಯಲಾಗುತ್ತಿದೆ ಎಂದು ಅವರು ವಿವರಿಸಿದರು.
ಇಂದಿನ ಜಾಗತೀಕರಣ ವೇಗದಾಳಿಗೆ ನಮ್ಮ ಬದುಕಿನ ಪ್ರತೀಕವಾದ ಕನ್ನಡ ಭಾಷೆ ನಲುಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇಂದು ನಮ್ಮೆಲ್ಲರದ್ದಾಗಿದೆ. ಬೆಳಗ್ಗೆ 8.30 ಕ್ಕೆ ಧ್ವಜಾರೋಹಣ ನೆರವೇರಿಸಿ, ನಂತರ ಬೆಳಗ್ಗೆ 9.30 ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಛೇರಿಯಿಂದ ಕನ್ನಡ ಭವನದ ವರೆಗೆ ವಿವಿಧ ಕಲಾ ಮೇಳಗಳೊಂದಿಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ ಜರುಗಲಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 10.45 ಕ್ಕೆ ಸಾಹಿತಿ ಶಿವಕವಿ ಹಿರೇಮಠ ಜೋಗೂರ ವೇದಿಕೆಯಡಿಯಲ್ಲಿ ಜರುಗಲಿರುವ ಸಮ್ಮೇಳನ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಡಾ. ಲಿಂಗರಾಜಪ್ಪ ಅಪ್ಪ ಅವರು ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಆಶಯ ನುಡಿಗಳನ್ನಾಡುವರು. ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಅವರು ಹಿಂದಿನ ತಾಲೂಕಾ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಬದುಕು-ಬರಹಗಳನ್ನೊಳಗೊಂಡ ಹೊನ್ನುಸಿರು ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ನಾಗೇಂದ್ರ ಮಸೂತಿ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸೀಂಪೀರ ವಾಲೀಕಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾಲೂಕಾ ಸಾಹಿತ್ಯ ಸಮ್ಮೇಳನಗಳ ಹಿಂದಿನ ಸರ್ವಾಧ್ಯಕ್ಷರುಗಳನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸತ್ಕರಿಸಲಾಗುವುದು.
ಮಧ್ಯಾಹ್ನ 12.15 ಕ್ಕೆ ನಡೆಯುವ ಸಾಹಿತ್ಯ ಚಿಂತನಾಗೋಷ್ಠಿಯಲ್ಲಿ ತಾಲೂಕಿನ ಮಹಿಳಾ ಸಾಹಿತ್ಯ ವಿಷಯದ ಕುರಿತು ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಅನೇಕತೆಯಲ್ಲಿ ಏಕತೆ-ಕಲಬುರಗಿ ಎಂಬ ವಿಷಯದ ಕುರಿತು ಮಹ್ಮದ್ ಅಯಾಜುದ್ದೀನ್ ಪಟೇಲ್ , ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ಪ್ರೊ. ನಿಂಗಮ್ಮ ಪತಂಗೆ ಮಾತನಾಡಲಿದ್ದಾರೆ. ಹಿರಿಯ ಸಾಹಿತಿ ಈಶ್ವರ ಕಟ್ಟಿಮನಿ ಅಧ್ಯಕ್ಷತೆ ವಹಿಸಲಿದ್ದು, ತಾಲೂಕಾ ಕಸಾಪ ದ ನಿಕಟಪೂರ್ವ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಅವರು ಆಶಯ ನುಡಿಗಳನ್ನಾಡುವರು.
ಮಧ್ಯಾಹ್ನ 2.15 ಕ್ಕೆ ಹಿರಿಯ ಸಾಹಿತಿ ಡಾ. ರಾಜೇಂದ್ರ ಯರನಾಳೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಪತ್ರಕರ್ತ-ಸಾಹಿತಿ ಸಂಗಮನಾಥ ರೇವತಗಾಂವ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ ಸೇರಿ ಅನೇಕರು ಉಪಸ್ಥಿತರಿರುವರು. ಕವಿಗಳಾದ ಶಾಂತಾ ಪಸ್ತಾಪೂರ, ಶಿವಾನಂದ ಅಣಜಗಿ, ಶಿವಯ್ಯಾ ಮಠಪತಿ, ಸಿದ್ಧರಾಮ ಸಿ ಸರಸಂಬಿ, ನೀತಾ ಡಿ ಕಾಬಾ, ಕಸ್ತೂರಿಬಾಯಿ ಆರ್.,ಸ್ವಾತಿ ಕೋಬಾಳ, ಶಬ್ಬೀರ ವಾಲಿಕರ್, ಸಾನ್ವಿ ದೇಸಾಯಿ, ಗೋದಾವರಿ ಪಡಶೆಟ್ಟಿ, ಲಿಂಗಬಸಪ್ಪ ಬೋಳಶೆಟ್ಟಿ, ಶಶಿಕಲಾ ನರೋಣಾ, ಸುಧೀರ ಅನೂರಕ್, ಜಯಶ್ರೀ ಶಿವಪುರ, ಚಂದ್ರಶೇಖರ ಪತ್ತಾರ, ಮೃತ್ಯುಂಜಯ ಹಿರೇಮಠ, ಶ್ರೀಕಾಂತ ಬಿರಾದಾರ ಸೇರಿದಂತೆ ಅನೇಕರು ಕವನ ವಾಚಿಸಲಿದ್ದಾರೆ.
ಇಳಿಹೊತ್ತು 4.15 ಕ್ಕೆ ಸಮಾರೋಪ ಮತ್ತು ಸತ್ಕಾರ ಸಂಭ್ರಮ ಜರುಗಲಿದ್ದು, ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅವರು ಸಮಾರೋಪ ನುಡಿಗಳನ್ನಾಡಲಿದ್ದು, ಬಿ.ಎಸ್. ದೇಸಾಯಿ, ಸೂರ್ಯಕಾಮತ ಮದಾನಿ, ಸೇವಂತಾ ಪಿ ಚವ್ಹಾಣ, ಬಿ.ಎಸ್. ಮಾಲಿಪಾಟೀಲ, ಪ್ರಭುಲಿಂಗ ಮೂಲಗೆ, ಭಾನುಕುಮಾರ ಗಿರೇಗೋಳ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಚೇತನ್ ಯುತ್ ಫೋರಮ್ ಪ್ರೌಢ ಶಾಲೆ, ಶ್ರೀ ಚನ್ನಬಸವೇಶ್ವರ ಪ್ರೌಢ ಶಾಲೆ, ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ ಸೇರಿದಂತೆ ಅನೇಕ ಪ್ರತಿಭಾವಂತ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳೂ ಸಹ ರೂಪಿಸಲಾಗಿದೆ.
ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖರಾದ ಜಗದೇವಿ ಮಸೂತಿ, ಗೌಡೇಶ ಬಿರಾದಾರ, ಚನ್ನವೀರಪ್ಪ ಗುಡ್ಡಾ, ದೇವೀಂದ್ರಪ್ಪ ಗಣಮುಖಿ, ಶರಣು ಹೊನ್ನೆಗೆಜ್ಜೆ, ಕುಪೇಂದ್ರ ಬರಗಾಲಿ, ರಾಜೇಂದ್ರ ಪಾಟೀಲ, ಸಂದೀಪ ದೇಸಾಯಿ, ಮಲ್ಲಿಕಾರ್ಜುನ ಮಣ್ಣೂರ, ಅನ್ನಪೂರ್ಣ ಮಾಲಿಪಾಟೀಲ, ರೂಪಾದೇವಿ ಹಿರೇಮಠ, ಶಿವಕುಮಾರ ಸಜ್ಜನಶೆಟ್ಟಿ, ಸಂಧ್ಯಾ ಕಮಲಾಪುರ್, ನಾಗಭೂಷಣ ಮಹಾಂತಿನಮಠ, ರಾಚಮ್ಮ ಪಾಟೀಲ, ಸುಧೀರ ಸಂಗಾಣಿ ಅವರನ್ನು ಸತ್ಕರಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ವಿಶಾಲಾಕ್ಷಿ ಮಾಯಣ್ಣವರ್, ವಿಶ್ವನಾಥ ಯನಗುಂಟಿ, ಕುಪೇಂದ್ರ ಬರಗಾಲಿ, ವಿಜಯಕುಮಾರ ಹಾಬನೂರ, ಶರಣು ಹಾಗರಗುಂಡಗಿ, ರೇವಯ್ಯಾ ಸ್ವಾಮಿ, ಪ್ರಭವ ಪಟ್ಟಣಕರ್, ಭಾಗ್ಯಶ್ರೀ ಮರಗೋಳ ಇತರರಿದ್ದರು.