ಬೆಂಗಳೂರು; ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಇಂದು “ಗ್ಲೋಬಲ್ ಬಯೋಇಂಡಿಯಾರೋಡ್ ಶೋ” ಕಾರ್ಯಕ್ರಮವನ್ನು ಜಿ.ಕೆ.ವಿ.ಕೆ ಆವರಣದಲ್ಲಿ ಆಯೋಜಿಸಲಾಗಿತ್ತು,
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ.ಸುರೇಶ ಅವರು ಮಾತನಾಡುತ್ತಾ, ಕೃಷಿಯಲ್ಲಿ ನವೋದ್ಯಮಗಳ ಅಳವಡಿಕೆಯಿಂದ ಕೃಷಿಯ ದಿಕ್ಕನ್ನೇ ಬದಲಿಸಬಹುದು 2014ರಲ್ಲಿ ಕೃಷಿಗೆ ಸಂಬಂಧಿಸಿದಂತೆ ರಾಷ್ಟ್ರದಾದ್ಯಂತ ಕೇವಲ 500 ನವೋದsÀ್ಯಮಗಳಿದ್ದವು. ಪ್ರಸ್ತುತ 8000ಕ್ಕೂ ಹೆಚ್ಚು ನವೋಧ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಈ ವಿಷಯವನ್ನು ಮನಗಂಡು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 2007ರಲ್ಲಿ ಕೃಷಿ ನಾವಿನ್ಯತಾ ಕೇಂದ್ರವನ್ನು ಪ್ರಾರಂಭಿಸಿತು. ಇಂದು ಕೃಷಿ ನಾವಿನ್ಯತಾ ಕೇಂದ್ರದಲ್ಲಿ 60ಕ್ಕೂ ಹೆಚ್ಚು ಅಗ್ರಿ-ಸ್ಟಾರ್ಟ್‍ಅಪ್‍ಗಳು ಕಾರ್ಯನಿರ್ವಹಿಸುತ್ತಿದ್ದು, 7 ಪೇಟೆಂಟ್‍ಗಳನ್ನು ಪಡೆದುಕೊಂಡಿರುತ್ತಾರೆ. ಇದರಿಂದಾಗಿ 10,000 ಸಾವಿರಕ್ಕೂ ಹೆಚ್ಚು ರೈತರು ಇದರ ಲಾಭವನ್ನು ಪಡೆದಿರುತ್ತಾರೆ.
ಕೃಷಿ ವಿಶ್ವವಿದ್ಯಾನಿಲಯದಿಂದ ಪ್ರೋತ್ಸಾಹ ಪಡೆದ ನವೋದ್ಯಮಿಗಳು ಲಾಭಗಳಿಕೆಗೆ ಒತ್ತು ನೀಡದೆ ಸಾಮಾಜಿಕ ಒಳಿತಿಗಾಗಿ ಒತ್ತು ನೀಡಬೇಕು. ರೈತರ ಆಧಾಯವನ್ನು ದ್ವಿಗುಣಗೊಳಿಸವ ನಿಟ್ಟಿನಲ್ಲಿ ನವೋದ್ಯಮ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದು ಪ್ರತಿಯೊಬ್ಬ ರೈತರೂ ಕೃಷಿಯನ್ನು ಉದ್ದಿಮೆಯ ರೀತಿ ಕಾರ್ಯಗತಗೊಳಿಸಿದಾಗ ಮಾತ್ರ ಆರ್ಥಿಕವಾಗಿ ಕೃಷಿ ಸದೃಡವಾಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ನವದೆಹಲಿಯ ಬೈರಾಕ್‍ನ ಹಿರಿಯ ವ್ಯವಸ್ಥಾಪಕರಾದ ಡಾ.ಆರ್ಶಿ ಮೆಹಬೂಬ್, ಬೆಂಗಳೂರು ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಕೆ.ಎಸ್. ನಾರಾಯಣ ಸ್ವಾಮಿ, ಅಗ್ರಿ ಇನ್ನೋವೇಶನ್ ಸೆಂಟರ್‍ನ ಮುಖ್ಯಸ್ಥರಾದ ಡಾ. ವೀಣಾ ಎಸ್ ಅನಿಲ್, ಹಾಗೂ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.