ಕಾವ್ಯ ಸಂಸ್ಕøತಿ ಯಾನ : ಕವಿಗಳಿಗೆ ಆಹ್ವಾನ

0
61

ಕಲಬುರಗಿ; ಸಹೃದಯ ಓದುಗರನ್ನು ಕಾವ್ಯದೆಡೆಗೆ ಸೆಳೆಯುವ ಉದ್ದೇಶದಿಂದ ಬೆಂಗಳೂರಿನ `ರಂಗಮಂಡಲ’ ಹಾಗೂ ಸೇಡಂನ ರಾಷ್ಟ್ರಕೂಟ ಸಾಂಸ್ಕøತಿಕ ಪ್ರತಿಷ್ಠಾನ ಸಹಯೋಗದೊಂದಿಗೆ ಸೆಪ್ಟೆಂಬರ್ 29 ರಂದು ಒಂದು ದಿನದ `ಕಾವ್ಯ ಸಂಸ್ಕøತಿ ಯಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.’

ಜಿಲ್ಲೆಯ ಕವಿ ಮತ್ತು ಕವಿಯತ್ರಿಯರು ಸೇರಿದಂತೆ ವಿಶೇಷವಾಗಿ ಜಿಲ್ಲೆಯ ಸ್ನಾತಕೋತ್ತರ, ಪದವಿ, ಪಿಯು ವಿದ್ಯಾರ್ಥಿ ಕವಿಗಳಿಗೆ ಕಾವ್ಯ ಸಂಸ್ಕøತಿ ಯಾನದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಯಾನ ಜಿಲ್ಲಾ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

Contact Your\'s Advertisement; 9902492681

ಕಾವ್ಯ ಸಂಸ್ಕøತಿಯನ್ನು ಎಲ್ಲೆಡೆ ಪಸರಿಸುವುದು, ಕಾವ್ಯದ ಓದುಗರನ್ನು ಕೇಳುಗರನ್ನು ಸಮರ್ಥವಾಗಿ ಹಾಗೂ ಸುಲಭವಾಗಿ ತಲುಪುವ ಹಿನ್ನೆಲೆಯಲ್ಲಿ ಈ ಕಾವ್ಯ ಸಂಸ್ಕøತಿಯಾನ ಆಯೋಜಿಸಲಾಗಿದೆ. ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಉದ್ಘಾಟನೆಗೊಂಡು, ನಂತರ ಧಾರವಾಡ ಜಿಲ್ಲೆಯಲ್ಲಾಗಿದ್ದು, ಇದೀಗ ಮೂರನೇ ಜಿಲ್ಲೆಯಾಗಿ ಕಲಬುರಗಿಯಲ್ಲಿ ನಡೆಯಲಿದೆ.

ಕಾವ್ಯ ಸಂಸ್ಕøತಿ ಯಾನದಲ್ಲಿ ಭಾಗವಹಿಸುವ ಕವಿಗಳಿಗೆ ಉಚಿತ ಊಟ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಪ್ರಯಾಣ ಭತ್ಯೆ ನೀಡುವುದಿಲ್ಲ. ಈ ಯಾನದಲ್ಲಿ ಹತ್ತಕ್ಕೂ ಹೆಚ್ಚು ನಾಡಿನ ಪ್ರಸಿದ್ಧ ಹಿರಿಯ ಕವಿಗಳು ಭಾಗವಹಿಸಲಿದ್ದಾರೆ.

ಈ ಕಾವ್ಯ ಯಾನದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಹೆಸರನ್ನು ಪ್ರಧಾನ ಸಂಚಾಲಕ ಡಿ.ಬಿ.ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ (9448970731) ಅಥವಾ ಜಿಲ್ಲಾ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ್ (9731666052) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here