ಶ್ರೀಮತಿ ವಿ ಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ

0
30

ಕಲಬುರಗಿ: ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ ೨೦೨೪-೨೫ ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಜರುಗಿತು.

ಈ ಚುನಾವಣಾ ಪ್ರಕ್ರಿಯೆಗೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಡಾ. ವೀಣಾ ಹೊನಗಂಟಿಕರ್ ಅವರು ಸಸಿಗೆ ನೀರುಣಿಸುವುದರ ಮುಖಾಂತರ ಚಾಲನೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಚುನಾವಣೆ ಹಾಗೂ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಚುನಾವಣೆಯನ್ನು ಸರ್ಕಾರಿ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ “ಕಿಶೋರಿ ಮತಗಟ್ಟೆ”ಯನ್ನು ರಚಿಸಿ ಮತದಾನ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಲಾಯಿತು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಿಂದ ನೇಮಕಗೊಂಡ ಮುಖ್ಯಚುನಾವಣಾ ಅಧಿಕಾರಿಯಾದ ಡಾ. ನಯನತಾರ ಆಸ್ಪಲ್ಲಿ ಅವರು ಚುನಾವಣೆಗೆ ಸೂಚಿಸಲಾದ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಚುನಾವಣೆಯ ವೇಳಾಪಟ್ಟಿ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಅವಧಿ ಕುರಿತಾಗಿ ತಿಳಿಸಿದರು.

ಮುಂದುವರೆದು ಮಾತನಾಡುತ್ತಾ ಕಾಲೇಜು ಆಡಳಿತವು ವಿದ್ಯಾರ್ಥಿನಿಯರÀ ಸಮಗ್ರ ಅಭಿವೃದ್ಧಿಗೆ ಗಮನಾರ್ಹ ಒತ್ತು ನೀಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ವಿದ್ಯಾರ್ಥಿನಿಯರು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು, ಗಮನಾರ್ಹ ಸಾಧನೆಗಳನ್ನು ಸಾಧಿಸಲು ಅವರನ್ನು ಸಶಕ್ತಗೊಳಿಸುವ ವಿವಿಧ ಚಟುವಟಿಕೆಗಳ ಮೂಲಕ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನೀಡಲಾಗುವ ಅವಕಾಶಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯು ಕೂಡಾ ಒಂದಾಗಿದೆ ಎಂದರು.

ಮೊದಲಿಗೆ ಚುನಾವಣೆಯಲ್ಲಿ ಪ್ರತಿನಿಧಿಸಲು ಬಯಸುವ ವಿದ್ಯಾರ್ಥಿನಿಯರಿಂದ ನಾಮಪತ್ರಗಳನ್ನು ಸ್ವೀಕರಿಸಲಾಯಿತು; ನಂತರ ಚುನಾವಣಾ ದಿನದಂದು ವರ್ಗ ಪ್ರತಿನಿಧಿಗಳ ಆಯ್ಕೆ ಮಾಡಲಾಯಿತು. ಆಯ್ಕೆಯಾದ ವರ್ಗಪ್ರತಿನಿಧಿಗಳು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿದರು.

೨೦೨೪-೨೫ ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆೆಯು ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ ಅವರ ಮಾರ್ಗದರ್ಶನದಲ್ಲಿ ಹಾಗೂ ಮುಖ್ಯ ಚುನಾವಣಾ ಅಧಿಕಾರಿಗಳಾದ ಡಾ. ನಯನತಾರ ಆಸ್ಪಲ್ಲಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀಮತಿ ಶೈಲಜಾ ನಾಕೇದಾರ ಅವರನ್ನು ವಿದ್ಯಾರ್ಥಿ ಸಂಘದ ಸಲಹೆಗಾರರಾಗಿ ಮತ್ತು ಸಿಬ್ಬಂದಿ ವರ್ಗದ ಕಾರ್ಯದರ್ಶಿಗಳಾಗಿ ಶ್ರೀಮತಿ ರಷ್ಮಿ ಸ್ವಾಮಿ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಕುಮಾರಿ ಶ್ರದ್ಧಾ ಶಕ್ತಿ, ಪ್ರಧಾನ ಕಾರ್ಯದರ್ಶಿಗಳಾಗಿ ಕುಮಾರಿ. ಫಾಯ್ಜಾ ಖಾನಮ, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಕುಮಾರಿ. ಫಾತೀಮಾ ಶನಮ್, ಕ್ರೀಡಾ ಕಾರ್ಯದರ್ಶಿಯಾಗಿ ಕುಮಾರಿ ಕರುಣಾ ಅವರು ಆಯ್ಕೆಯಾಗಿ ಉಳಿದ ವರ್ಗ ಪ್ರತಿನಿಧಿಗಳು ಸಂಘದ ಸದಸ್ಯರಾದರು.

ವಿದ್ಯಾರ್ಥಿ ಸಂಘದ ಚುನಾವಣಾ ಕಾರ್ಯದಲ್ಲಿ ಕಾಲೇಜಿನ ಎಲ್ಲಾ ಬೋಧಕ-ಬೋದಕೇತರ ಸಿಬ್ಬಂದಿಗಳು ಪಾಲ್ಗೋಂಡು ಯಶಸ್ವಿಗೊಳಿಸಿದರು ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪತ್ರಿಕಾ ಮಾಧ್ಯಮದ ಸಂಯೋಜಕರಾದ ಶ್ರಿ. ಐ. ಕೆ. ಪಾಟೀಲ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here