ಕಲಬುರಗಿ: ಪತಿಯಿಂದ ಪತ್ನಿಯ ಹತ್ಯೆ

0
218

ಕಲಬುರಗಿ: ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಪತ್ನಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಭಯಾನಕ ಘಟನೆ ಸೇಡಂ ತಾಲ್ಲೂಕಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಬಟಗೇರಾ (ಬಿ) ಗ್ರಾಮದ ನಿವಾಸಿ ನಾಗಮ್ಮ (42) ಕೊಲೆಯಾದ ಮಹಿಳೆ. ಪತ್ನಿಯನ್ನು ಕೊಲೆಗೈದು ಬಳಿಕ ಆರೋಪಿ ಪತಿ ಶೇಕಪ್ಪ ಮಾದ್ವಾರ (50) ಪೊಲೀಸ್‌ ಠಾಣೆಗೆ ತೆರಳಿ ತಾನಾಗಿಯೇ ಶರಣಾಗಿದ್ದಾನೆ.

Contact Your\'s Advertisement; 9902492681

ನಾಗಮ್ಮ ಶೇಕಪ್ಪ ಅವರ ಮೊದಲ ಪತ್ನಿಯಾಗಿದ್ದು, ಶೇಕಪ್ಪ ಕಳೆದ 5-6 ವರ್ಷದ ಹಿಂದೆ 2ನೇ ಮದುವೆ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಹಾಗೂ ಕುಡಿತದ ಚಟ ಹೊಂದಿದ್ದ ಎನ್ನುವ ಕಾರಣಕ್ಕೆ ಆಗಾಗ ಗಂಡ ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು ಎನ್ನಲಾಗಿದೆ.

ಶೇಖಪ್ಪ ತನ್ನ ಪತ್ನಿಗೆ ನಿನ್ನೆ ರಾತ್ರಿಯಿಂದ ಎರಡು ಬಾರಿ ಸೆಕ್ಸ್‌ಗೆ ಒತ್ತಾಯ ಮಾಡಿದ್ದ. ಆದರೆ ಎರಡೂ ಬಾರಿಯೂ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದು ಆಕೆಯನ್ನು ಹಗ್ಗದಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮೃತ ನಾಗಮ್ಮಳಿಗೆ 3 ಜನ ಹೆಣ್ಣು ಮಕ್ಕಳಿದ್ದಾರೆ. ಮೊದಲ ಮಗಳಿಗೆ ಮದುವೆಯಾಗಿದ್ದು, 2ನೇ ಮಗಳು ತವರಲ್ಲಿದ್ದು, 3ನೇ ಮಗಳೊಂದಿಗೆ ನಾಗಮ್ಮ ವಾಸವಿದ್ದಳು ಎಂದು ತಿಳಿದುಬಂದಿದ್ದು, ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ್ದು ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here