ಕಲಬುರಗಿಗೆ ಅಗಮಿಸಿದ ಕನ್ನಡ ರಥ: ಜಿಲ್ಲಾಡಳಿತದಿಂದ ಗಡಿಯಲ್ಲಿ ಸ್ವಾಗತ

0
72

ಕಲಬುರಗಿ: ಸಕ್ಕರೆ ನಾಡು ಮಂಡ್ಯದಲ್ಲಿ ಬರುವ ಡಿಸೆಂಬರ್ 20 ರಿಂದ 22ರ ವರೆಗೆ ನಡೆಯುವ 87ನೇ ಅಖಿಲ ಭಾರತ‌ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಪ್ರಚಾರ ನೀಡಲು ಹಾಗೂ ಸಮಸ್ತ ನಾಡಿನ ಜನತೆಗೆ ನುಡಿ ಸಮ್ಮೇಳನಕ್ಕೆ ಸ್ವಾಗತಿಸಲು ಗುರುವಾರ ವಿಜಯಪುರ ಜಿಲ್ಲೆ ಮಾರ್ಗವಾಗಿ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮೂಲಕ ಜಿಲ್ಲೆಗೆ ಕನ್ನಡ ರಥ ಪ್ರವೇಶಿದೆ.

ಕನ್ನಡ ಜ್ಯೋತಿ ಹೊತ್ತ ರಥಕ್ಕೆ ಜಿಲ್ಲಾಡಳಿತ ಪರವಾಗಿ ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜೇವರ್ಗಿ ತಹಶೀಲ್ದಾರ ಮಲ್ಲಿಕಾರ್ಜುನ ಅವರು ಸ್ವಾಗತಿಸಿ ಗೌರವದಿಂದ ಬರಮಾಡಿಕೊಂಡರು. ಕನ್ನಡಪರ ಹೋರಾಟಗಾರರು, ಇತರೆ ಸಿಬ್ಬಂದಿ ವರ್ಗ ಇದ್ದರು.

Contact Your\'s Advertisement; 9902492681

ನಾಡ ದೇವತೆ ಶ್ರೀ ಭುವನೇಶ್ವರಿ ದೇವಿ ದೇವಾಲಯದ ಆಕಾರದಲ್ಲಿರುವ ರಥ ಯಾತ್ರೆಯು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಿಂದ ಆರಂಭಗೊಂಡಿದ್ದು, ನಾಡಿನುದ್ದಕ್ಕು ಸಂಚರಿಸಿ ಸಮ್ಮೇಳನದ ಉದ್ಘಾಟನೆ ದಿನದಂದು ಮರಳಿ ಮಂಡ್ಯಕ್ಕೆ‌ ತಲುಪಲಿದೆ.

ನಗರದಲ್ಲಿ ಭವ್ಯ ಮೆರವಣಿಗೆ,ಸಾರ್ವಜನಿಕರು ಭಾಗವಹಿಸುವಂತೆ ಮನವಿ: ನಗರಕ್ಕೆ ಆಗಮಿಸಿರುವ ರಥದ ಭವ್ಯ ಮೆರವಣಿಗೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಆರಂಭವಾಗಲಿದೆ. ಪ್ರಮುಖ ಬೀದಿಗಳ ಮೂಲಕ ಜರುಗುವ ಮೆರವಣಿಗೆಯುದ್ದಕ್ಕೂ ಕಲಾ ತಂಡಗಳಿಂದ ವರ್ಣರಂಜಿತ ಪ್ರದರ್ಶನ ನಡೆಯಲಿದೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಕನ್ಮಡ‌ ಸಾಹಿತ್ಯ ಒರಿಷತ್ತಿನ ಅಧ್ಯಕ್ಷರು-ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಸಾರ್ವಜನಿಕರು, ಕನ್ನಡಪರ‌‌ ಸಂಘಟನೆಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಗುಂಪಿನ ಸದಸ್ಯರು, ಶಾಲಾ-ಕಾಲೇಜು ಮಕ್ಕಳು ಹೆಚ್ಚಿನ‌ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here