ಜೈ ಭೀಮ ಕೇವಲ ಒಂದು ಪದ ಅಥವಾ ಹೆಸರು ಮಾತ್ರವಾಗಿ ಉಳಿಯದೆ ಅದೊಂದು ಜಾತಿ ಸೂಚಕ ಪದವಾಗಿ ಮಾರ್ಪಡುತ್ತಿದೆ. ಈ ಹೆಸರು ಜಾತಿ, ಮತ, ಧರ್ಮ ರಾಜಕಾರಣಗಳ ನಡುವೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಘರ್ಷಣೆಗೆ ಒಳಗಾಗುತ್ತಿದೆ. ಇದಕ್ಕೆ ಕಾರಣ ಧರ್ಮಾಂಧತೆಯಲ್ಲಿ ತೇಲುತ್ತಿರುವವರ ಕಿವಿಗೆ ಈ ಪದ ಬಿದ್ದ ಕೂಡಲೇ ಜೈ ಶ್ರೀ ರಾಮ್ ಜೈ ಶಿವಾಜಿ ಎನ್ನುವ ಪದಗಳು ಜೈ ಭೀವi ಪದಕ್ಕೆ ವಿರುದ್ಧವಾಗಿ ಧ್ವನಿಸುತ್ತಿವೆ.
ಮತಾಂದರಿಗೆ ಈ ಶಬ್ದ ಕಾದ ಎಣ್ಣೆ ಕಿವಿಗೆ ಸುರಿದ ಅನುಭವ ನೀಡುತ್ತಿದೆ. ಇದರ ಮೂಲ ಬೇರು ಎಲ್ಲಿ ಹೋಗಿ ನಿಂತಿದೆ ಎಂದು ಶೋಧಿಸುತ್ತಾ ಹೋದರೆ? ನಾವು ಬಂದು ನಿಲ್ಲುವುದು ಜ್ಞಾನ ದೇಗುಲದ ಎದುರಿಗೆ. ಹೌದು ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಮನೋಭಾವ ಯಾಕೆ ಇμÉ್ಟೂಂದು ಸಂಕುಚಿತವಾಗುತ್ತಿದೆ? ಹೆಚ್ಚು ವಿಶಾಲ ಹೃದಯಿಗಳಾಗಿರಬೇಕಾಗಿದ್ದ ಶಿಕ್ಷಕರು ಇಂದು ಸಂಕುಚಿತ ಮನಸ್ಸಿನವರಾಗಿದ್ದಾರೆ. ಶಿಕ್ಷಣದಿಂದ ಸಮುದಾಯದ ಏಳಿಗೆ ಆಗಬೇಕೆ ಹೊರತು ಅವನತಿಯಲ್ಲ.
ಇಂದಿನ ಮಕ್ಕಳಿಗೆ ದೊರೆಯುತ್ತಿರುವ ಶಿಕ್ಷಣ ಮಕ್ಕಳಲ್ಲಿ ಸಮ ಸಮಾಜವನ್ನು ರೂಪಿಸುವದಕ್ಕೆ ತಳಹದಿಯಾಗಬೇಕು. ಆದರೆ ಹಾಗೆ ಆಗದೆ ಧರ್ಮಾಂಧತೆ, ಸಾಮಾಜಿಕ ಅಪಮಾನ, ಸಾಂಸ್ಕøತಿಕ ಬರ್ಬರತೆ ಹಾಗೂ ಮೇಲು ಜಾತಿಗಳ ರಾಜಕೀಯ ಕುತ್ಸದಿತನವನ್ನು ಯಥಾಸ್ಥಿತಿಯನ್ನು ಕಾಪಾಡುವ ಅಸ್ತ್ರವಾಗಿ ಮಾರ್ಪಟ್ಟಿದೆ.
ದಲಿತ ದಮನಿತ ಮತ್ತು ಮನುಷ್ಯತ್ವದ ಉಳಿವಿಗಾಗಿ ಒದಗಿ ಬರಬೇಕಾಗಿದ್ದ ಶಿಕ್ಷಣವು ಇಂದು ದಾರಿ ತಪ್ಪುತ್ತಿದೆ. ಮುಂದೊಂದು ದಿನ ಇದಕ್ಕೆ ನೇರವಾಗಿ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರೇ ನೇರ ಹೊಣೆ ಹೊರಬೇಕಾದ ಕಾಲ ಬಹು ದೂರ ಉಳಿದಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇತಿಹಾಸದಲ್ಲಿಯೇ ಸೃಷ್ಟಿಸಲಾದ ಔರಂಗಜೇಬನ ವ್ಯಕ್ತಿತ್ವವನ್ನ ನೋಡಬಹುದು. ನೀವು ಬೆಳೆಸುತ್ತಿರುವ ಈ ವಿಷ ಪೂರಿತವಾದ ಸಸಿ ಒಂದು ದಿನ ವಿಷ ವೃಕ್ಷವಾಗಿ ನೀಲ್ಲುತ್ತದೆ. ನಿಮ್ಮನ್ನೇ ಸುತ್ತುತ್ತದೆ ಮರೆಯದಿರಿ.
“ಕುರಾನ್‍ನ ದಿವ್ಯ ವ್ಯಾಕ್ಯಗಳು ಮಾತ್ರವೇ ಪವಿತ್ರವಾದವು ಎಂದು ಹೇಳಿ ಕೊಟ್ಟಂತೆಯೇ ಇತರ ಧರ್ಮದ ದಿವ್ಯ ವ್ಯಾಕ್ಯಗಳು ಪವಿತ್ರವೆಂದು ಯಾಕೆ ಹೇಳಿಕೊಡಲಿಲ್ಲ? ಹೇಳು ಪಾಠ ಹೇಳುವ ನೆಪದಲ್ಲಿ ನನ್ನನ್ನೇಕೆ ಮತಾಂಧನಾಗಿಸಿದೆ?… ಎಲ್ಲಾ ಧರ್ಮಗಳಲ್ಲೂ ಒಳ್ಳೆಯದಿದೆ” [‘ದಾರಾಶಿಕೊ’ ನಾಟಕ,ಡಾ.ರಾಜಪ್ಪ ದಳವಾಯಿ, ಪು.ಸಂ.51.] ಹೀಗೆ ದಾರಾಶಿಕೋ ನಾಟಕದಲ್ಲಿ ಔರಂಗಜೇಬನು ತನಗೆ ಕುರಾನ್ ಬಗ್ಗೆ ಪಾಠ ಮಾಡಿದ ‘ಇನಾಯತ್ ಉಲ್ಲಾ’ [ಗುರು] ವಿಗೆ ಪ್ರಶ್ನಿಸಿ ಅವನಿಗೆ ಮರಣದಂಡನೆ ಕೊಡುತ್ತಾನೆ. ಈ ಸಂಭಾಷಣೆ ಇಲ್ಲಿ ಚರ್ಚಿಸುತ್ತಿರುವುದರ ತಾತ್ಪರ್ಯವಿμÉ್ಟೀ. ಸತ್ಯ ಯಾವತ್ತಿದ್ದರೂ ಬೂದಿ ಮುಚ್ಚಿದ ಕೆಂಡ ಇದ್ದಹಾಗೆ. ಒಂದಲ್ಲ ಒಂದು ದಿನ ಹೊರಬರಲೇಬೇಕು.
ಆಂದರೆ ಮತ್ತೊಂದು ಚಳುವಳಿಯಾಗಬೇಕು.
ಅದು ಯಾವ ತರಹದ ಚಳುವಳಿ ಬೀದಿಗಿಳಿಯುವ ಚಳುವಳಿಗೆ ಇಂದು ಅಸ್ತಿತ್ವವೇ ಇಲ್ಲದಂತಾಗಿದೆ. ಬಾಬಾ ಸಾಹೇಬರು ಎಳೆದು ತಂದ ರಥದ ಭಾಗಗಳು ಚಲಾ-ಪಿಲ್ಲಿಯಾಗಿ ಬಿಡಿ-ಬಿಡಿ ಭಾಗಗಳು ಒಂದೊಂದು ಮೂಲೆಯಲ್ಲಿ ಕಾಲು ಮುರಿದು ಬಿದ್ದಿವೆ. ಅದನ್ನ ಆಯ್ದು ತಂದು ಬಾಬಾ ಸಾಹೇಬರ ಕನಸಿನ ರಥವನ್ನು ಮರು ಕಟ್ಟಬೇಕಾದ ಕಾಲಘಟ್ಟದಲ್ಲಿದ್ದೇವೆ. ಇದೆಲ್ಲದಕ್ಕೂ ನಮ್ಮ ಕೈಯಲ್ಲಿರುವ ಅಸ್ತ್ರ ಶಿಕ್ಷಣ. ಹೌದು ಶಿಕ್ಷಣದ ಮೂಲಕವೇ ಸಮಾನತೆಯ, ಕಳಂಕ ರಹಿತವಾದ ನಿಶ್ಚಲ ಸಮಾಜ ಕಟ್ಟಲು ಸಾಧ್ಯ. ಬೌದ್ಧಿಕವಾಗಿ ಮನುಷ್ಯಪರ, ಜೀವಪರವಾದ ಶಿಕ್ಷಣ ದೊರೆಯುವುದು ಅತ್ಯಂತ ಅವಶ್ಯಕವಾಗಿದೆ. ಈಗ ಪ್ರಸ್ತುತವಾಗಿ ಯಾವುದೇ ಹೋರಾಟಗಳು ಮಾಡಿದರು ಅವು ಕೇವಲ ರಾಜಕೀಯ ಪರಿಣಾಮವನ್ನು ಬೀರುತ್ತವೆ. ಒಂದು ಚಾರಿತ್ರಿಕ ದಾಖಲೆ ಮಾತ್ರವಾಗುತ್ತದೆ.
ಮೂಲದಲ್ಲಿ ಇರುವ ಚಾರಿತ್ರಿಕ ಅರಿವು ಮತ್ತು ನಂಬಿಕೆಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ.್ಲ ಬಾಬಾ ಸಾಹೇಬರ ಮರು ಓದು ಮತ್ತು ಅವರು ತೋರಿದ ಮಾರ್ಗದಲ್ಲಿ ನಡೆಯುವುದರಿಂದ ಮಾತ್ರ ಸಮಾನತೆಯ ಸಮಾಜ ಕಟ್ಟಲ್ಲು ಸಾದ್ಯ. ಸಮಾನ ಶಿಕ್ಷಣ ವ್ಯವಸ್ಥೆ, ಶಿಕ್ಷಕರು, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಬದುತ್ವ, ಘನತೆಯನ್ನು ಕಳೆದುಕೊಂಡ ವಿದ್ಯಾ ದೇಗುಲ. ಹೆಸರಿಗೆ ಮಾತ್ರ ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಗುರುಕುಲ. ಗುರುಕುಲ ಎಂದಾಕ್ಷಣ ನಮ್ಮ ಕಲ್ಪನೆಗೆ ಬರುವುದು ವರ್ಣಾಶ್ರಮ ಪದ್ದತಿಯಲ್ಲಿ ದೊರೆಯುತ್ತಿದ್ದ ಶಿಕ್ಷಣ ವ್ಯವಸ್ಥೆ. ಆಧುನಿಕ ಗುರುಕುಲಗಳು ಸ್ವಲ್ಪ ರೂಪಾಂತರವಾಗಿವೆ ಅμÉ್ಟೀ. ಇಲ್ಲಿ ಅಸ್ಪೃಶ್ಯತೆ ಬಹಿರಂಗವಾಗಿಲ್ಲ, ಅಂತರಂಗದಲ್ಲಿ ಆಳವಾಗಿ ಬೇರೂರಿದೆ. ಅಂತಹ ಆಧುನಿಕ ಗುರುಕುಲದ ಪುಟ್ಟ ಕಥೆ ಹೇಳಬಯಸುತ್ತೇನೆ.
ನಗರದಿಂದ ದೂರದಲ್ಲಿ ಸ್ವಚ್ಛಂದವಾದ ಪರಿಸರದಲ್ಲಿ ಬದುಕುತ್ತಿದ್ದ ಒಂದು ಗುಂಪು. ಅಲ್ಲಿ ರಾಜ್ಯವನ್ನು ಆಳುತ್ತಿದ್ದ ಆಡಳಿತ ವರ್ಗವು ಬಂದು ಈ ಸ್ಥಳ ಗುರುಕುಲ ಕಟ್ಟಲು ತುಂಬಾ ಯೋಗ್ಯವಾಗಿದೆ. ಇಲ್ಲಿ ನಿಮ್ಮ ಮಕ್ಕಳಿಗೆ ಮತ್ತು ಈ ಭಾಗದ ಶೋಷಿತರಿಗೆ ವಿದ್ಯೆ, ಕೆಲಸ, ಕೈ ತುಂಬಾ ಕಾಣಿಕೆ ಕೊಡುತ್ತೆವೆ. ಇದಕ್ಕೆ ಪ್ರತಿಯಾಗಿ ನೀವೆಲ್ಲರೂ ನಿಮ್ಮ ಭೂಮಿಯನ್ನು ನಮಗೆ ಕೊಡಿ ಎಂದು ಕೇಳುತ್ತಾರೆ. ಆಗ ಆ ಗುಂಪಿನ ಜನರು ಮುಂದಿನ ಮಕ್ಕಳ ಭವಿಷ್ಯಕ್ಕಾಗಿ, ತಮ್ಮ ಭೂಮಿಯನ್ನು ಒಂದಿಷ್ಟು ಕಾಣಿಕೆ ಪಡೆದುಕೊಂಡು ಬಿಟ್ಟುಕೊಡುತ್ತಾರೆ.
ಕೆಲವೇ ದಿನಗಳಲ್ಲಿ ಒಂದು ಸುಂದರವಾದ ಕಟ್ಟಡ ಎದ್ದು ನಿಲ್ಲುತ್ತದೆ. ಹೊಸ ಗುರುಕುಲವು ಸಂವಿಧಾನದ ಅಡಿಯಲ್ಲಿ ಪ್ರಾರಂಭವಾಗಿ, ಮೀಸಲಾತಿ, ಸ್ವತಂತ್ರವಾದ ಪರಿಸರ, ಸಮಾನ ಮನಸ್ಕರ ನಡುವೆ ವಿದ್ಯಾಭ್ಯಾಸ ಪ್ರಾರಂಭಿಸಲಾಗುತ್ತದೆ. ಆಡಳಿತ ವರ್ಗವು ಹೇಳಿದ ಹಾಗೆ ಕೆಲವು ವರ್ಷಗಳ ಕಾಲ ಗುರುಕುಲ ಸುಸೂತ್ರವಾಗಿಯೇ ನಡೆಯುತ್ತದೆ. ಕಾಲ ಉರುಳಿದಂತೆ ಮೊದಲಿದ್ದ ಆಡಳಿತ ವರ್ಗವು ತಮ್ಮ ಪದವಿಯನ್ನು ಕಳೆದುಕೊಂಡು ಕಾಡುಸೇರುತ್ತದೆ. ನಂತರ ಬಂದ ಆಡಳಿತ ವರ್ಗದ ಕೃಪೆಯಿಂದಾಗಿ ಗುರುಕುಲದ ವಾತಾವರಣವು ದಿನೆ-ದಿನೆ ಹಾಳಾಗುತ್ತದೆ.
ಗುರುಕುಲದಲ್ಲಿದ್ದ ಅಸ್ಪೃಶ್ಯ ಗುರುಗಳಿಗೆ ಸೆರೆಮನೆಯ ಬಂಧನವಿಲ್ಲ ಅμÉ್ಟೀ. ಇನ್ನು ಉಳಿದ ಎಲ್ಲಾ ರೀತಿಯ ಬಂಧನದ ಮೊಹರುಗಳು ಅವರ ಮೇಲೆ ಒತ್ತಲ್ಪಡುತ್ತವೆ. ಗುರುಗಳ ಪಾಡೆ ಹೀಗಿರುವಾಗ ಇನ್ನು ವಿದ್ಯಾರ್ಥಿಗಳ ಗತಿ ಕಾಣದ ದೇವರಿಗೆ ಗೊತ್ತು. ಗುರುಕುಲವೆಲ್ಲ ವಾರ 15 ದಿನಗಳಿಗೊಮ್ಮೆ ಹೋಮ ಹವನದಿಂದ, ಮಂತ್ರಘೋಷಣೆ ಗಳಿಂದ ಗುರುಕುಲದ ಪರಿಸರವೆಲ್ಲ ತುಂಬಿ ತುಳುಕಾಡಲಾರಂಭಿಸಿತು.
ಸಂವಿಧಾನದ ಆಶಯಗಳೆಲ್ಲ ಗಾಳಿಗೆ ತೂರಿ. ನಿತ್ಯ ಪೂಜೆ ಕರ್ಮಾದಿಗಳು ಪ್ರಾರಂಭವಾದವು. ಊರಾಚೇ ಇದ್ದ ಬೆರಳೆಣಿಕೆಯೇಷ್ಟು ಅಸ್ಪೃಶ್ಯರು ಗುರುಕುಲದೊಳಗೆ ಬಂದಿದ್ದರμÉ್ಟೀ. ಇನ್ನು ಮುಂದೆ ಬರುವ ಅಸ್ಪೃಶ್ಯರಿಗೆ ಗುರುಕುಲದ ಬಾಗಿಲು ಮುಚ್ಚಲಿಕ್ಕೆ ಏನೆಲ್ಲ ಬೇಕೋ ಆ ಸಿದ್ಧತೆಗಳು ಬಲು ಜೋರಾಗಿಯೇ ನಡೆಯಲು ಪ್ರಾರಂಭಿಸಿದವು. ಈ ಮಧ್ಯೆ ಉಸಿರು ಗಟ್ಟುವ ವಾತಾವರಣದಲ್ಲಿಯೂ ಕೂಡ ಕೆಲವೊಮ್ಮೆ ಮಾನವೀಯ ಮೌಲ್ಯಗಳನ್ನು ನಂಬಿದ ವಿದ್ಯಾರ್ಥಿಗಳು ಸಂವಿಧಾನದ ಆಶಯದ ಕುರಿತು ಮೇಲ ಆಡಳಿತದ ಋಷಿಮುನಿಗಳಿಗೆ ಆಗಾಗ ನೆನಪಿಸುವ ಕೆಲಸ ಮಾಡುತ್ತಲೇ ಇದ್ದರು.
ಇಂತಹ ಒಂದು ಪ್ರಯತ್ನದ ಫಲವಾಗಿಯೇ ಗುರುಕುಲದ ಆವರಣದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಮೂರ್ತಿಯನ್ನು ಸ್ಥಾಪಿಸುವ, ಸಾಹಸ ಕೆಲವು ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ ನಡೆಯುತ್ತದೆ. ಇಲ್ಲಿದ್ದ ಋಷಿಮುನಿಗಳ ರುದ್ರ ತಾಂಡವ ಪ್ರಾರಂಭವಾಗುತ್ತದೆ. ಇದರ ಪರಿಣಾಮವಾಗಿಯೇ ಮೂರ್ತಿ ಅನಾವರಣದಲ್ಲಿದ್ದ ಒಬ್ಬ ವಿದ್ಯಾರ್ಥಿ ಗುರುಕುಲದ ಆಶ್ರಮದಿಂದ ಹೊರದೂಡಲ್ಪಡುತ್ತಾನೆ. ಮೂರ್ತಿಗೆ ವಿದ್ಯಾರ್ಥಿಗಳು ಹೂವಿನ ಮಾಲೆ ಹಾಕುವುದನ್ನು ತಡೆಯಲಾಗುತ್ತದೆ. ಕೊನೆಗೆ ಜೈ ಭೀಮ್ ಎನ್ನುವ ಪದ ಬಳಕೆಗೆ ಗುರುಕುಲದಲ್ಲಿ ನಿಶಿದ್ಧವೆಂಬ, ಧೋರಣೆಗಳಿಗೆ ಮುನಿಗಳು ಬಂದು ನಿಲ್ಲುತ್ತಾರೆ.
ಈ ಕಥೆ ಹೇಳುವ ಉದ್ದೇಶವಿμÉ್ಟೀ. ಭಾರತದ ವ್ಯವಸ್ಥೆ ನಿಂತಿರುವುದೇ ಬಾಬಾ ಸಾಹೇಬರು ಭಾರತಕ್ಕೆ ಸಮರ್ಪಿಸಿದ ಸಂವಿಧಾನದ ಅಡಿಯಲ್ಲಿ. ಅಂತಹ ಸಂವಿಧಾನ ಶಿಲ್ಪಿಯ ಹೆಸರು ಕೇಳಿದರೆ ಹಾವು ಮೇಲೆ ಬಿದ್ದ ಹಾಗೆ ವರ್ತಿಸುವ ಸಮಾಜ ನಿರ್ಮಿಸಲ್ಪಡುತ್ತಿರುವುದು ಯಾರಿಂದ? ಸಂವಿಧಾನ ಕೇವಲ ಒಂದು ಜಾತಿಗೆ ಮಾತ್ರ ಸೀಮಿತವಾಗಿಲ್ಲ.
ವೆಂದಮೇಲೆ ಬಾಬಾ ಸಾಹೇಬರನ್ನು ಒಂದೇ ಸಮುದಾಯಕ್ಕೆ ಯಾಕೆ ಸೀಮಿತಗೊಳಿಸಲಾಗುತ್ತಿದೆ? ತಲೆಯ ಮಾಸು ಕೂಡ ಮಾಸದ ಪುಟ್ಟ ಹುಡುಗನ ಕಿವಿಗೆ ಜೈ ಭೀಮ್ ಎಂಬ ಶಬ್ದ ಬಿದ್ದ ಕೂಡಲೇ ಅದಕ್ಕೆ ಪ್ರತಿಯಾಗಿ ಜೈ ಶ್ರೀ ರಾಮ್. ಎನ್ನುವ ಪದ ನಾಲಿಗೆ ನುಡಿಯುವ ಹಾಗೆ ಟ್ರೈನಿಂಗ್ ನೀಡಲಾಗುತ್ತಿದೆಯಲ್ಲ.
ಅದು ಎಷ್ಟರ ಮಟ್ಟಿಗೆ ಸರಿ? ಈ ಮತಾಂದತೆ ಎಲ್ಲಿಗೆ ಹೋಗಿ ನಿಲ್ಲುತ್ತದೆ? ಇದರ ಪರಿಣಾಮ ಏನಾಗಬಹುದು? ಎಂದು ನೆನಪಿಸಿಕೊಂಡರೆ ಮೈ ರೋಮಗಳು ನಿಲ್ಲುತ್ತವೆ. ಇಂದಿನ ಮಕ್ಕಳ ಸ್ಥಿತಿ ಇದಾದರೆ, ಇನ್ನು ಶಿಕ್ಷಣ ಪಡೆದ ಬುದ್ದಿಜೀವಿಗಳು ಎಂಬ ಬಿರುದಾಂಕಿತರ ಕಿವಿಯೊಳಗೆ ಈ ಜೈ ಭೀಮ್ ಪದ ಬಿದ್ದ ತಕ್ಷಣವೇ. ‘ನಾನ್ ಸೆನ್ಸ್’ ಎಂಬ ಪದ ಪ್ರಯೋಗ ಕೇಳಿ ಗಾಬರಿಯಾಗುತ್ತಿದೆ.
ಒಟ್ಟಾರೆಯಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾ? ಶಿಕ್ಷಕರು ಬದಲಾಗಬೇಕಾ? ಎನ್ನುವ ಪ್ರಶ್ನೆಯನ್ನು ಕೇಳಿಕೊಂಡರೆ ದೊರೆಯುವ ಉತ್ತರ. ಆಲೋಚನಾ ಕ್ರಮ ಬದಲಾಗಬೇಕು. ಎಲ್ಲಿಯವರೆಗೆ ಆಲೋಚನೆ ಬದಲಾಗುವುದಿಲ್ಲವೋ, ಅಲ್ಲಿಯವರೆಗೆ ಜೈ ಭೀಮ್ ಎನ್ನುವುದು ಒಂದು ಸಮುದಾಯದ ಸ್ವತ್ತಾಗಿ ಮಾತ್ರ ಉಳಿದುಕೊಳ್ಳುತ್ತದೆ. ಜೈ ಭೀಮರು ಮತ್ತು ಸಂವಿಧಾನ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ.
ಭಾರತದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಅಡಿಯಲ್ಲಿ ಏನೆಲ್ಲಾ ಹಕ್ಕುಗಳು ದೊರೆಯುತ್ತವೆಯೋ, ಅದೇ ರೀತಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಕೃತಜ್ಞರಾಗಿ ಇರಬೇಕಾದಂತಹ ವ್ಯಕ್ತಿ ಜೈ ಭೀಮ್. ಜೈ ಭೀಮ ಕೇವಲ ಒಂದು ಪದ ಮಾತ್ರ ಅಲ್ಲ, ಅದೊಂದು ಶಕ್ತಿ. ಅದೊಂದು ಆತ್ಮವಿಶ್ವಾಸ, ಅದೊಂದು ಸ್ವಾತಂತ್ರ, ಪ್ರಜಾಪ್ರಭುತ್ವದ ಅಡಿಯಲ್ಲಿ ಎಲ್ಲರಿಗೂ ಸಮಾನ ಬದುಕನ್ನು ದೊರಕಿಸಿ ಕೊಟ್ಟಂತಹ ಪದ ಜೈ ಭೀಮ್. ಭಾರತದ ಪ್ರತಿಯೊಬ್ಬರ ಉಸಿರಲ್ಲಿ ಬೆರೆತ ಜೀವನಾಡಿ. ಸೂರ್ಯ-ಚಂದ್ರ ಇರುವವರೆಗೆ ದೇಶದಾದ್ಯಂತ ಮಿಂಚಿ ಗೂಡುಗುವ ಘೋಷವಾಕ್ಯ. ಬಾಬಾ ಸಾಹೇಬರ ಮಾರ್ಗದಿ ನಡೆಯುತ್ತಾ, ಜ್ಞಾನ ಪಡೆಯುತ್ತಿರುವ ಇಂದಿನ ಮಕ್ಕಳು. ಎಂದು ಹಿಂದೂವಾದಿಯ ಹುನ್ನಾರದ ಬೀಜ ಬಿತ್ತಲು ಬಿಡುವುದಿಲ್ಲ. ಜೈ ಶ್ರೀ ರಾಮ್ ಎಂದ ಕಂದನ ಅರಿವಿನಲ್ಲಿ ವೈಚಾರಿಕ ಬೀಜ ಬಿತ್ತುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ.
ಶತಶತಮಾನಗಳಿಂದಲೂ ಧರ್ಮದ ಹೆಸರಿನಿಂದ ಹೆಣೇದ ಬಲೆಯ ಗಂಟುಗಳು ಒಂದೊಂದಾಗಿ ಬಿಚ್ಚುತ್ತಾ ಹೋಗುತ್ತಿರುವುದಕ್ಕೆ ಸಾಕ್ಷಿ 2024ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಣಬಹುದು. ಇದು ಜೈ ಭೀಮ್ ಸಂವಿಧಾನ ಪ್ರಜಾಪ್ರಭುತ್ವದ ಶಕ್ತಿ. ರಾಮನಿಗೂ ಗೊತ್ತು. ಜೈ ಭೀಮನ ಸಿದ್ಧಾಂತದಿಂದ ಮಾತ್ರ ಸುಭಿಕ್ಷೆಯ ಸಮ ಸಮಾಜ ಕಟ್ಟಲು ಸಾಧ್ಯ ಎನ್ನುವುದು.
Good Story