ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿರ್ಲಕ್ಷ – ತಾಲೂಕು ಆಡಳಿತ ಮಂಡಳಿ ವಿರುದ್ಧ ಅಕ್ರೋಶ

0
63

ಶಹಾಪುರ : ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣವನ್ನೇ ತ್ಯಾಗ ಮಾಡಿದ ಕಿತ್ತೂರು ರಾಣಿ ಚೆನ್ನಮ್ಮಳ ಜಯಂತಿ ನಿರ್ಲಕ್ಷ್ಯ ತೋರಿದ ಶಹಪೂರ ತಾಲೂಕು ಆಡಳಿತ ಮಂಡಳಿಯ ವಿರುದ್ಧ,ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ದೇವೇಂದ್ರಪ್ಪ ತೋಟಗೇರ ಮಾತನಾಡಿ ಪ್ರತಿ ಬಾರಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಅಂಗವಾಗಿ ತಾಲೂಕ ಆಡಳಿತ ಮಂಡಳಿ ವತಿಯಿಂದ ವಾರದಕ್ಕಿಂತ ಮೊದಲೇ ಪೂರ್ವಭಾವಿ ಸಭೆ ಕರೆಯಲಾಗುತ್ತಿತ್ತು,ಆದರೆ ಈ ಭಾರಿ ಯಾವುದೇ ಪೂರ್ವ ಭಾವಿ ಸಭೆ ಕರೆಯದೆ,ಸೌಜನ್ಯಕ್ಕಾದರು ಜಯಂತಿಗೆ ಸಮಾಜದ ಮುಖಂಡರುಗಳಿಗೆ ಆಹ್ವಾನಿಸದೆ,ಏಕ ಪಕ್ಷಿಯ ನಿರ್ಧಾರ ತೆಗೆದುಕೊಂಡು ಸರಳವಾಗಿ ಪೂಜೆ ಸಲ್ಲಿಸಿ ಕೈ ತೊಳೆದುಕೊಂಡಿದ್ದಾರೆ,ಅಲ್ಲದೆ ಪ್ರತಿ ವರ್ಷವೂ ಕೂಡ ಇದೇ ರೀತಿ ತಾಲೂಕ ಆಡಳಿತ ಮಂಡಳಿಯವರು ನಡೆದುಕೊಳ್ಳುತ್ತಿದ್ದಾರೆ ಎಂದು,ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಆಂಗ್ಲರಿಗೆ ಸಿಂಹ ಸ್ವಪ್ನವಾಗಿ ಕಾಡಿ, ಸ್ವಾಭಿಮಾನದ ಸಂಕೇತವಾಗಿ ಬೆಳ್ಳಿ ತೆರೆಯಲ್ಲಿ ಮೂಡಿ,ಈ ನಾಡಿಗೆ ಅಪಾರ ಕೊಡುಗೆ ನೀಡಿದ ಕಿತ್ತೂರು ರಾಣಿ ಚೆನ್ನಮ್ಮಳಿಗೆ ಅಪಮಾನ ಮಾಡಿದ್ದಲ್ಲದೆ ಸಮಾಜಕ್ಕೆ ನೋವು ಉಂಟು ಮಾಡುವ ರೀತಿಯಲ್ಲಿ ನಡೆದುಕೊಂಡ ತಾಲೂಕು ಆಡಳಿತ ಮಂಡಳಿಯ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿ ಬೇಜವಾಬ್ದಾರಿತನದಿಂದ ನಡೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಶಹಾಪುರ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲೂ ಕೂಡ,ಜಯಂತಿ ಆಚರಿಸಿಲ್ಲ,ಪ್ರಶ್ನಿಸಿದರೆ ನಾವು ಸಣ್ಣ ಪುಟ್ಟ ಜಯಂತಿಗಳು ಆಚರಿಸುವುದಿಲ್ಲ,ಏನಿದ್ದರೂ ದೊಡ್ಡ ದೊಡ್ಡ ಜಯಂತಿಗಳ ಮಾಡುತ್ತೇವೆ ಎಂದು  ಅಧಿಕಾರಿ ಉಡಾಫೆ ಉತ್ತರ ನೀಡುತ್ತಿದ್ದಾರೆ,ಅದರಂತೆ ಸಗರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ವಸತಿ ನಿಲಯದಲ್ಲೂ ಕೂಡ, ಜಯಂತಿ ಆಚರಿಸದೆ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ,ಸರ್ಕಾರದ ಕಡ್ಡಾಯವಾಗಿ ಆದೇಶವಿದ್ದರೂ ಕೂಡ ಇಂತಹ ನಿರ್ಲಕ್ಷತನದಿಂದ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಡೀ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಹಾಗು ಕನ್ನಡಪರ ಹೋರಾಟಗಾರರು,ಪ್ರಗತಿಪರ ಚಿಂತಕರು,ಸಾಹಿತಿಗಳು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಪಾಟೀಲ್,ಶಹಪುರಾ ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಸಿದ್ದಣ್ಣ ಸಾಹು ಆರಬೋಳ, ಶಂಭುಲಿಂಗ ಗೋಗಿ, ಮಲ್ಲಿಕಾರ್ಜುನ್ ಬುಕ್ಕಿಷ್ಟಗಾರ, ಗುರು ಅಂಗಡಿ ಹೊಸೂರ, ಬಸವರಾಜ ಶಿನ್ನೂರ, ಭೀಮಾಶಂಕರ ಸಾಹು ಹೊಸಕೆರ,ಶರಣು ಬೇವಿನಹಳ್ಳಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here