ಸುರಪುರ: ಮಲ್ಲಾ ಬಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನಾಮಫಲಕಕ್ಕೆ ಅವಮಾನಿಸಿದ ಕಿಡಿಗೇಡಿಯನ್ನು ಬಂಧಿಸಿದ ಪೊಲೀಸರ ಕ್ರಮಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ,ಅಕ್ಟೋಬರ್ 12 ರಂದು ಮಲ್ಲಾ ಬಿ ಗ್ರಾಮದಲ್ಲಿ ರಾತ್ರಿ ಕಿಡಿಗೇಡಿಯೊಬ್ಬ ವಿಶ್ವಗುರು ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಫಲಕಕ್ಕೆ ಅವಮಾನಿಸಿದ್ದ,ಇದರ ಕುರಿತು ಕೆಂಭಾವಿ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.ಆದರೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದರು.ಇದರ ಕುರಿತು ಎರಡು ದಿನಗಳ ಹಿಂದೆ ಸುರಪುರಕ್ಕೆ ಆಗಮಿಸಿದ್ದ ಕಲಬುರ್ಗಿ ವಲಯ ಪೊಲೀಸ್ ಮಹಾನಿರೀಕ್ಷಕರಿಗೆ ನಾವು ಮನವಿ ಸಲ್ಲಿಸಿದ್ದೇವು.ಪೊಲೀಸ್ ಮಹಾನಿರೀಕ್ಷಕರು ಎರಡು ದಿನಗಳ ಸಮಯ ಕೇಳಿದ್ದರು.ಅವರು ಹೇಳಿದಂತೆ ಎರಡು ದಿನಗಳಲ್ಲಿ ಪರಶುರಾಮ ಎನ್ನುವ ಆರೋಪಿಯನ್ನು ಬಂಧಿಸಿರುವುದು ಸಂತೋಷ ತಂದಿದೆ.
ಪೊಲೀಸರ ಕಾರ್ಯಕ್ಕೆ ಡಿವೈಎಸ್ಪಿಗೆ,ಸಿಪಿಐ ಹುಣಸಗಿಯವರಿಗೆ,ಪಿಎಸ್‍ಐ ಹಣಮಂತಪ್ಪ ಅವರಿಗೆ ಮತ್ತು ಸಿಬ್ಬಂದಿಗಳಿಗೆ ಅಭಿನಂದಿಸುತ್ತೇವೆ.ಅಲ್ಲದೆ ಕಿಡಿಗೇಡಿಗೆ ಕಠಿಣ ಶಿಕ್ಷೆ ನೀಡಬೇಕು ಅಂದಾಗ ಮತ್ತೊಬ್ಬರು ಈ ರೀತಿ ಕೃತ್ಯಕ್ಕೆ ಮುಂದಾಗುವುದಿಲ್ಲ.ಆದ್ದರಿಂದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.