ಕನ್ನಡಿಗರಿಗೆ ಮಾತೃಭಾಷೆಯಾದ ಕನ್ನಡ ಹೆತ್ತ ತಾಯಿಗೆ ಸಮಾನ

0
35

ಶಹಾಬಾದ: ಕನ್ನಡಿಗರಾದ ನಾವು ಮಾತೃಭಾಷೆಯಾದ ಕನ್ನಡ ಹೆತ್ತ ತಾಯಿಗೆ ಸಮಾನ ಎಂದು ತಾಪಂ ಇಒ ಮಲ್ಲಿನಾಥ ರಾವೂರ ಹೇಳಿದರು.

ಅವರು ಶುಕ್ರವಾರ ತಾಲೂಕಾಡಳಿತ ವತಿಯಿಂದ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಮಗೆ ತಾಯಿ ಜೀವ ಕೊಟ್ಟಿದ್ದಾಳೆ. ಈ ನಾಡು ನಮಗೆ ಅನ್ನ ಕೊಟ್ಟಿದೆ. ಈ ನಾಡಿನ ಭಾಷೆಯಾದ ಕನ್ನಡವನ್ನು ಬೆಳೆಸುವಂತ ಕೆಲಸವನ್ನು ಕನ್ನಡಿಗರಾದ ನಾವು ಮಾಡಬೇಕಿದೆ ಎಂದರು.

Contact Your\'s Advertisement; 9902492681

ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ.ಹಲವಾರು ಕವಿಗಳು ಕನ್ನಡಕ್ಕೆ ತನ್ನದೆಯಾದ ಕೊಡುಗೆ ನೀಡಿದ್ದಾರೆ.ಹಲವಾರು ಜನರು ಅನ್ಯ ಭಾಷಿಕರಾದರೂ ಕನ್ನಡದಲ್ಲಿಯೇ ಅತ್ಯಂತ ಶ್ರೇಷ್ಠ ಸಾಹಿತ್ಯವನ್ನು ರಚಿಸಿದ್ದಾರೆ.ಇದಕ್ಕೆ ಕಾರಣ ಕನ್ನಡ ಭಾಷೆ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ ಭಾಷೆ ಎಂಬುದನ್ನು ಮರೆಯಬಾರದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ ಜಗದೀಶ ಚೌರ್ ಮಾತನಾಡಿ,ಜಾಗತೀಕರಣ, ಉದಾರೀಕರಣಗಳ ಪ್ರಭಾವ ಹಾಗೂ ಇಂಗ್ಲೀಷನ ವ್ಯಾಮೋಹ ಕನ್ನಡವನ್ನು ದುಸ್ಥಿತಿಗೆ ತಂದಿದೆ. ಇಂದು ಕನ್ನಡದ ರಕ್ಷಣೆ ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮನೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.

ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಮಾತನಾಡಿ, ಕನ್ನಡ ಭಾಷೆ, ಕನ್ನಡ ನುಡಿ, ನೆಲ ಹಾಗೂ ಜಲದ ಬಗ್ಗೆ ಕೇವಲ ನವೆಂಬರ್ ತಿಂಗಳಿಗೆ ಹಾಡೊಕೆ, ಆಡೋಕೆ ಸಿಮೀತವಾಗಿದೆ. ಬಿಲದಿಂದ ಹೊರ ಬರುವ ಇಲಿಗಳಂತೆ ಆಗದೇ ಕನ್ನಡವನ್ನು ಬೆಳೆಸುವಲ್ಲಿ ಕಿಂಚಿತ್ತು ಪ್ರಾಮಾಣಿಕ ಪ್ರಯತ್ನ ನಮ್ಮೆಲ್ಲರದಿಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 15 ಜನರಿಗೆ ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ಪತ್ರವನ್ನು ವಿತರಿಸಿದರು.ನಗರಸಭೆ ಅಧ್ಯಕ್ಷರಾದ ಚಂಪಾಬಾಯಿ ಮೇಸ್ತ್ರಿ, ಪಿಐ ನಟರಾಜ ಲಾಡೆ ಉಪಸ್ಥಿತರಿದ್ದರು.
ಶಿಕ್ಷಕ ಬನ್ನಪ್ಪ ಸೈದಾಪೂರ ನಿರೂಪಿಸಿದರು, ರವಿಕುಮಾರ ಮಾಲಗತ್ತಿ ವಂದಿಸಿದರು.

ಕಾರ್ಯಕ್ರಮದ ಮುಂಚಿತವಾಗಿ ನಾಡ ದೇವಿಯ ಭಾವಚಿತ್ರದ ಮೆರವಣಿಗೆಗೆ ಡಿವಾಯ್‍ಎಸ್‍ಪಿ ಶಂಕರಗೌಡ ಪಾಟೀಲ ಚಾಲನೆ ನೀಡಿದರು.ನಂತರ ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಗುರುರಾಜ ಸಂಗಾವಿ, ಉಪತಶೀಲ್ದಾರ ಅಣವೀರಪ್ಪ, ಸಿಡಿಪಿಒ ಡಾ. ವಿಜಯಲಕ್ಷ್ಮಿ ಹೇರೂರು, ಪತ್ರಕರ್ತ ಸಂಘದ ಅಧ್ಯಕ್ಷ ರಘುವೀರಸಿಂಗ ಠಾಕೂರ, ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯಲ್ಲಾಲಿಂಗ ಹೈಯ್ಯಾಳಕರ್, ವಿಶ್ವರಾಜ ಫಿರೋಜಾಬಾದ, ಶರಣಗೌಡ ಪಾಟೀಲ,ಪೂಜಪ್ಪ ಮೇತ್ರೆ,ಶರಣು ವಸ್ತ್ರದ್,ರಾಯಪ್ಪ ಹುರಮುಂಜಿ, ಗಿರಿಮಲ್ಲಪ್ಪ ವಳಸಂಗ,ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here