ಕೃಷಿ ಇಲಾಖೆ ಅಧಿಕಾರಿಗಳ ಅಮಾನತ್ತಿಗೆ ಹರ್ಷಾ ಗುತ್ತೇದಾರ ಆಗ್ರಹ

0
254

ಕಲಬುರಗಿ: ನಿಯಮಗಳನ್ನು ಮೀರಿ ಸ್ಪ್ರಿಂಕ್ಲರ್ ಪೈಪುಗಳನ್ನು ವಿತರಿಸಲು ಅವಕಾಶ ಮಾಡಿಕೊಟ್ಟಿರುವ ಆಳಂದ ತಾಲೂಕಿನ ಕೃಷಿ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆಗ್ರಹಿಸಿದ್ದಾರೆ.

ಈ ಕುರಿತು ಕಲಬುರಗಿ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಆಳಂದ ತಾಲೂಕಿನ ಕೃಷಿ ಇಲಾಖೆಯ ಕೆಲವು ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು, ರೈತರಿಗೆ ಸಿಗಬೇಕಾದ ಸ್ಪ್ರಿಂಕ್ಲರ್ ಪೈಪುಗಳನ್ನು ಶಾಸಕರ ಕಾರ್ಯಾಲಯದಿಂದ ಶಿಫಾರಸ್ಸು ಪತ್ರ ಮತ್ತು ಶಾಸಕರ ಸಹೋದರನ ಮಗ ಆರ್.ಕೆ. ಪಾಟೀಲ ಶಿಫಾರಸ್ಸು ಮಾಡಿದ ವ್ಯಕ್ತಿಗಳಿಗೆ ಮಾತ್ರ ವಿತರಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

Contact Your\'s Advertisement; 9902492681

2024ನೇ ಸಾಲಿಗಿಂತ ಮುಂಚೆ ಅರ್ಜಿ ಹಾಕಿದ ರೈತರ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ. ಅಲ್ಲದೇ ಸರ್ಕಾರದ ಗೋದಾಮಿನಲ್ಲಿ ಇರಬೇಕಾದ ಸ್ಪ್ರಿಂಕ್ಲರ್ ಪೈಪುಗಳನ್ನು ಖಾಸಗಿ ವ್ಯಕ್ತಿಗೆ ಸೇರಿದ ಸ್ಥಳದಲ್ಲಿ ಇಟ್ಟು ಅಲ್ಲಿ ಚೀಟಿ ಕೊಟ್ಟ ರೈತರಿಗೆ ಮಾತ್ರ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನ.9 ರಂದು ಮಟಕಿ ಗ್ರಾಮದಲ್ಲಿ ಹಾಗೂ ನ.18 ರಂದು ಯಳಸಂಗಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್.ಕೆ. ಪಾಟೀಲ ಅವರು ಸ್ಪ್ರಿಂಕ್ಲರ್ ಪೈಪುಗಳನ್ನು ವಿತರಿಸಿದ್ದಾರೆ. ಇದು ಕ್ಷೇತ್ರದ ಶಾಸಕರು ಮಾಡಬೇಕಾದ ಕೆಲಸ ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಮೀರಿ ಆಳಂದ ತಾಲೂಕಿನಲ್ಲಿ ಆರ್.ಕೆ. ಪಾಟೀಲ ಮೂಲಕ ಪೈಪುಗಳನ್ನು ತಮಗೆ ಬೇಕಾದವರಿಗೆ ವಿತರಿಸಿ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ.

ಸ್ಪ್ರಿಂಕ್ಲರ್ ಪೈಪುಗಳನ್ನು ವಿತರಿಸಲು ಅವಕಾಶ ಮಾಡಿಕೊಟ್ಟ ಆಳಂದ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಖಜೂರಿ ರೈತ ಸಂಪರ್ಕ ಕೇಂದ್ರದ ಬಿ.ಎಂ. ಬಿರಾದಾರ, ನಿಂಬರ್ಗಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಮಾನತ್ತು ಮಾಡಬೇಕು. ಹಾಗೂ ಕೂಡಲೇ ಸ್ಪ್ರಿಂಕ್ಲರ್ ಪೈಪುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here