ದೇಶದ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆ ಪಾತ್ರ ಮಹತ್ವದ್ದು

0
43

ಆಳಂದ: ಸ್ವಾತಂತ್ರ್ಯ ಭಾರತದ ನಂತರದ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆ ಅತೀ ಮಹತ್ವದ ಪಾತ್ರ ನಿರ್ವಹಿಸಿದೆ ಎಂದು ಬೀದರ್ ಅಂಚೆ ಇಲಾಖೆಯ ಎಎಸ್‌ಪಿ ಶಿವಾನಂದ ಹೇಳಿದರು.

ಆಳಂದ ತಾಲೂಕಿನ ಗಡಿಗ್ರಾಮ ಖಜೂರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭೃಷ್ಟಾಚಾರ ನಿರ್ಮೂಲನಾ ಸಪ್ತಾಹ ಹಾಗೂ ರಾಷ್ಟ್ರೀಯ ಏಕತಾ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದಲ್ಲಿ ರೈಲ್ವೇ ಇಲಾಖೆಯ ನಂತರ ಅತೀ ಹೆಚ್ಚು ಜಾಲವನ್ನು ಹೊಂದಿರುವ ಇಲಾಖೆಯಾಗಿದ್ದು, ದೇಶದ ನಾಗರಿಕರಿಗಾಗಿ ಹಲವು ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿ ಜಾರಿಗೊಳಿಸಿದೆ. ಕಡಿಮೆ ಮೊತ್ತದಲ್ಲಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಬಹುದಾಗಿದೆ ಎಂದರು.

Contact Your\'s Advertisement; 9902492681

ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅನುಷ್ಠಾನಗೊಳಿಸಲಾಗಿದೆ ಇದರ ಅಂತಿಮ ಮೊತ್ತದಿಂದ ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸ ಅಥವಾ ಮದುವೆಯ ಖರ್ಚು ನಿಭಾಯಿಸಬಹುದು ಇಷ್ಟೇ ಅಲ್ಲದೇ ಪಿಎಂಎಸ್‌ಎಸ್‌ವೈ, ಅಟಲ ಪಿಂಚಣಿ ಯೋಜನೆ, ಸಾಮಾಜಿಕ ಭದ್ರತಾ ಯೋಜನೆಗಳು, ಐಪಿಪಿಬಿ ಮುಂತಾದ ಯೋಜನೆಗಳು ಅಂಚೆ ಇಲಾಖೆಯ ಮೂಲಕವೇ ನಡೆಯುತ್ತಿವೆ ಎಂದು ವಿವರಿಸಿದರು. ಮಲ್ಲಿನಾಥ ಬಂಗರಗೆ, ಶಿವಪುತ್ರ ಹಳ್ಳೆ, ಮಂಜೂರ, ಮಶಾಖ ಟಪ್ಪಾವಾಲೆ, ಉದಯಕುಮಾರ ಕೋತನ ಹಿಪ್ಪರ್ಗಾ ಸ್ವಾಮಿ ಸೇರಿದಂತೆ ಇಲಾಖೆಯ ನೌಕರರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಇಲಾಖೆಯ ನಿವೃತ್ತ ನೌಕರ ಸಿದ್ದಣ್ಣ ಹಳ್ಳೆ ಮಾತನಾಡಿದರು. ರಾಜಕುಮಾರ, ಶಿವರುದ್ರ, ಅಮೂಲ ಕೋಳಿ, ಅಂಚೆ ಮಾಸ್ಟರ್ ರಾಮಚಂದ್ರ ಕುಲಕರ್ಣಿ ವೇದಿಕೆಯ ಮೇಲಿದ್ದರು. ಹಣಮಂತ ಶೇರಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here