ಕಲಬುರಗಿ: ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಪಾಟೀಲರ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಚಿವರೂ ಆದ ಕಲ್ಯಾಣ ಕರ್ನಾಟಕದ ಗಾಂಧಿ ಎಂದೇ ಖ್ಯಾತಿಯನ್ನು ಪಡೆದ ಜನಪರ ಹೋರಾಟಗಾರ ದಿವಂಗತ ವೈಜನಾಥ ಪಾಟೀಲ ಅವರಿಗೆ ಶನಿಕವಾರದಂದು ನಗರದ ಬಸವೇಶ್ವರ ಪುತ್ಥಳ್ಳಿಯ ಆವರಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು.
ಮಾಜಿ ಕಾರ್ಮಿಕ ಸಚಿವ ಎಸ್.ಕೆ.ಕಾಂತಾ ಮಾತನಾಡಿ, ಈ ಭಾಗಕ್ಕೆ ವಿಶೇಷ ಸ್ಥಾನಮಾನವಾದ ಸಂವಿಧಾನದ ೩೭೧ ಕಲಂ ಜಾರಿ ಆಗಲು ಕಳೆದ ನಾಲ್ಕು ದಶಕಗಳಿಂದ ಹೋರಾಟ ಮಾಡಿ ಛಲದಂಕ ಮಲ್ಲನಾಗಿ, ಬದ್ಧತೆಯ ರೂವಾರಿಯಾಗಿ ಈ ಭಾಗದ ಸಾವಿರಾರು ಪ್ರತಿಭಾವಂತ ಯುವಕರಿಗೆ ಉದ್ಯೋಗಾವಕಾಶ ಮಾಡಿಕೊಟ್ಟು ನಿಜವಾದ ನಡೆದಾಡುವ ದೇವರಾಗಿದ್ದರು ಎಂದು ಮನದುಂಬಿ ಹೇಳಿದರು.
ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಈ ಭಾಗದ ಅನೇಕ ಯುವಕರ ಬದುಕಿಗೆ ಬೆಳಕು ಕೊಟ್ಟ ಮಹಾನ್ ವ್ಯಕ್ತಿಯಾಗಿದ್ದರು. ಕಲ್ಯಾಣ ಕರ್ನಾಟಕದ ಸವಾಂಗೀಣ ಅಭಿವೃದ್ಧಿಗಾಗಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ Pಕೊಟ್ಟ ಧೀಮಂತ ರಾಜಕಾರಣಿಯಾಗಿದ್ದರು. ಹೊಂದಾಣಿಕೆ ರಾಜಕೀಯ ಅವರ ಜೀವನದಲ್ಲಿ ಎಂದೂ ಕಂಡಿಲ್ಲ. ನೇರ ನಡೆ-ನುಡಿ, ಹಿಡಿದ ಕೆಲಸ ಮುಗಿಸುವವರೆಗೆ ಬಿಡುವ ಜಾಯಮಾನ ಅವರದ್ದಾಗಿರಲಿಲ್ಲ ಎಂದು ಹೇಳಿದರು.
ದಿವಂಗತ ವೈಜನಾಥ ಪಾಟೀಲ ಅವರ ಬದುಕು ಮತ್ತು ಹೋರಾಟದ ಒಂದೊಂದು ಕ್ಷಣಗಳನ್ನು ಭಾಗವಹಿಸಿದ್ದ ಪ್ರತಿಯೊಬ್ಬರೂ ಮೆಲುಕು ಹಾಕುವಾಗ ಕಣ್ಣುಗಳಲ್ಲಿ ನೀರು ಹರಿದಾಡುತ್ತಿದ್ದವು.
ಹೆಚ್.ಕೆ.ಸಿ.ಸಿ.ಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶರಣಕುಮಾರ ಮೋದಿ, ಪ್ರಮುಖರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಬಸವರಾಜ ಕೋನೆಕ್, ಕನ್ನಡ ಅಬಿವೃದ್ದಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ್, ಬಸವರಾಜ ಬಿರಬಿಟ್ಟೆ, ಡಾ.ಬಾಬುರಾವ ಶೇರಿಕಾರ, ಹಣಮಂತರಾಯ ಅಟ್ಟೂರ, ನಾಗಲಿಂಗಯ್ಯ ಮಠಪತಿ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಸತೀಶ ಸಜ್ಜನ್, ಬಿ.ಎಂ.ಪಾಟೀಲ ಕಲ್ಲೂರ, ಸಂಗಮೇಶ ಶಾಸ್ತ್ರೀ ಮಾಶಾಳ, ಡಾ.ನಾಗರತ್ನಾ ಬಿ.ದೇಶಮಾನ್ಯೆ, ಪ್ರಭುದೇವ ಯಳವಂತಗಿ, ಅಣವೀರಯ್ಯ ಸ್ವಾಮಿ ಕೋಡ್ಲಿ, ರಮೇಶ ನವಲೆ, ವಿನೋದ ಜೇನವೇರಿ, ಶಿವರಾಜ ಎಸ್.ಅಂಡಗಿ, ಎಸ್.ಎನ್.ಪುಣ್ಯಶೆಟ್ಟಿ, ಜಯಸಿಂಗ್ ಠಾಕೂರ್, ಉದಯಕುಮಾರ ಸಾಲಿ, ಶಿವಲಿಂಗ ಹಳಿಮನಿ ಸೇರಿದಂತೆ ನೂರಾರು ಅವರ ಅಭಿಮಾನಿಗಳು ಭಾಗವಹಿಸಿದ್ದರು.