ರಾಯಚೂರು: ಆಂಗ್ಲ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಕನ್ನಡ ಮಾಧ್ಯಮದ ಮೌಲ್ಯಮಾಪಕರಿಂದ ಮಾಪನ ಮಾಡಿಸಿ ಗಂಭೀರ ಲೋಪವೆಸಗಿರುವ ಹಾಗೂ ಹಣ ಪಡೆದು ಆಕ್ರಮವಾಗಿ ಹೊಸ ಶಾಲೆಗಳಿಗೆ ಅನುಮತಿ ಸೇರಿದಂತೆ ಸರ್ವಾಧಿಕಾರ ಧೋರಣೆ ನಡೆಸುತ್ತಿರು ರಾಯಚೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಬಿ.ಕೆ ನಂದನೂರು ಇವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಎಸ್.ಎಫ್.ಐ ಜಿಲ್ಲಾ ಘಟಕ ಆಗ್ರಹಸಿದೆ.
ಅವರು ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇಲಧಿಕಾರಿಗಳ ಆದೇಶ ಮೀರಿ ಸರ್ವಾಧಿಕಾರಿಯಾಗಿ ಅಡಳಿತ ನಡೆಸುತ್ತಿದ್ದಾರೆ. ಶಿಕ್ಷರ ಕೆಲಸ ನೆನಗುದಿಗೆ ಹಾಕಿದ್ದಾರೆ ಎಂದು ಆರೋಪಿಸಿದ ಈ ಕುರಿತು ತನಿಖೆ ನಡೆಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಮಾನತುಗೊಳಿಸಬೇಕೆಂದು ಒತ್ತಾಯಿಸದ್ದರು.
ಈ ಸಂದರ್ಭದಲ್ಲಿ ಎಸ್.ಎಫ್.ಐ ಜಿಲ್ಲಾ ಮುಖಂಡ ಜಿ.ಶಿವಮೂರ್ತಿ, ಮಿಥುನ್ ರಾಜ್ ಬಸವರಾಜ ಇದ್ದರು.