ಮುಂಗಾರು ಸಿದ್ಧತೆಗಾಗಿ ರೈತರ ಮಾಗಿ ಉಳಿಮೆಯಲ್ಲಿ ನಿರತ 

0
135

ಆಳಂದ: ರೈತರು ಈಗ ಮತ್ತೆ ಮುಂಗಾರು ಬಿತ್ತನೆ ಸಿದ್ಧತೆಗಾಗಿ ಮಾಗಿ ಉಳಿಮೆಯತ್ತ ಮುಖಮಾಡಿದ್ದಾರೆ.  ಹೊತ್ತೆರುವ ಮುನ್ನ ಹಾಗೂ ಇಳಿ ಹೊತ್ತಿನ ನಡುವೆ ಕುಂಟಿಯನ್ನು (ಗಳ್ಯಾ), ಹೊಡೆದು ಭೂಮಿಯ ಸಾಗಮಾಡುವಲ್ಲಿ ಮಗ್ನವಾಗಿದ್ದಾರೆ.

ಮಾಗಿ ಉಳುಮೆ ಕೈಗೊಂಡರೆ ಮಾತ್ರ ಬಿತ್ತನೆಗೆ ಭೂಮಿ ಹದವಾಗಿ ಪರಿಣಮಿಸುವ ಹಿನ್ನೆಲೆಯಲ್ಲಿ ಮತ್ತು ಇದರಿಂದ ಬೆಳೆಗೆ ವೈಜ್ಞಾನಿಕವಾಗಿ ಲಾಭ ಆಗುವುದರಿಂದ ರೈತರು ಪ್ರತಿ ವರ್ಷ ಭೂಮಿಯನ್ನು ಕನಿಷ್ಟ ಎರಡ್ಮೂರು ಬಾರಿಯಾದರು ಉಳಿಮೆಯನ್ನು ಮಾಡಿ ಸ್ವಚ್ಛಗೊಳಿಸಿದಂತೆ ಬಹುತೇಕ ತಾಲೂಕಿನ ಎಲ್ಲ ರೈತಾಪಿಗಳು ಈ ಕಾರ್ಯವನ್ನು ಭರದಿಂದ ಕೈಗೊಳ್ಳತೊಡಗಿದ್ದಾರೆ.

Contact Your\'s Advertisement; 9902492681

ಎತ್ತುಗಳ ಅವಲಂಬಿತ ಕೃಷಿ ವರ್ಷ ಕಳೆದಂತೆ ಕ್ಷೀಣಿಸುತ್ತಿದ್ದರಿಂದ ಈಗ ಟ್ಯ್ರಾಕ್ಟರ್‌ಗಳ ಮೊರೆಹೋಗಿ ಭೂಮಿಯ ಸಾಗಮಾಡುತ್ತಿರುವುದು ಕೂಡ ಹೆಚ್ಚುತೊಡಗಿದೆ.

ಮಾಗಿ ಉಳಿಮೆ ಆರಂಭ ಬೇಸಾಯಕ್ಕೆ ಮಾಗಿ ಉಳಿಮೆ ಮದ್ದು ಮುಂಗಾರಿ ಹಂಗಾಮಿಗೆ ಸಕಾಲಕ್ಕೆ ಬೀಜ ಒದಗಿಸಿ ಸಬ್ಸಿಡಿ ಬೀಜ ಸಾಮಗ್ರಿ ನಾಮಕೆವಾಸ್ತೆ ಬೇಡ, ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಅನಗತ್ಯ ದಾಖಲೆ ಕೇಳಬೇಡಿ. ಖರೀದಿ ಕೇಂದ್ರಕ್ಕೆ ಮಾರಿದ ತೊಗರಿ ಹಣ ನೀಡಿ.

ಬರ ಆವರಿಸಿದ್ದರಿಂದ ಅಷ್ಟಕ್ಕಷ್ಟೇ ಬೆಳೆ ಕೈಗೆ ಬಂದಿದೆ ಆದರೆ ಬೆಲೆ ಬರಲಿಲ, ಖಾಸಗಿ ಮಾರುಕಟ್ಟೆಯಲ್ಲಿ ತೊಗರಿಗೆ ಬೆಲೆಯಿಲ್ಲ. ಸರ್ಕಾರದ ಖರೀದಿ ಮೂಲಕ ಬರೀ ೧೦ ಕ್ವಿಂಟಾಲಗೆ ಅವಕಾಶವಿದ್ದು, ೧೦ ಕ್ವಿಂಟಲಾ ಮಾರಾಟ ಮಾಡಿದವರ ಹಣವೂ ಸಹ ಇನ್ನೂ ರೈತರ ಸೇರುತ್ತಿಲ್ಲ. ಸೇರಿದ ಹಣವೂ ತಂದ ಸಾಲಮುಟ್ಟಿಸವಲ್ಲೇ ಸಾಕುಬೇಕಾಗುತ್ತಿದೆ. ಸದ್ಯ ಕೈಯಲ್ಲಿ ಕಾಸಿಲ್ಲ. ಸಾಲದ ಹೊರೆ ಸಾಮಾನ್ಯವಾಗಿದೆ. ಕೃಷಿ ಬಿಟ್ಟರೆ ಬೇರೆನು ಕೆಲಸ ಮಾಡುವಂತ್ತಿಲ್ಲ. ಅನ್ನದ ಉತ್ಪಾದನೆಯ ಜವಾಬ್ದಾರಿಯ ನಮ್ಮ ಮೇಲಿದೆ ಎನ್ನುತ್ತಾರೆ ರೈತರು.

ಏಪ್ರಿಲ್- ಮೇ ಈ ಎರಡು ತಿಂಗಳ ಕಳೆಯುವುದೇ ಹೇಗಪ್ಪ ಎನ್ನುತ್ತಲೇ ಇನ್ನೇನು ಜೂನ್ ಸಮೀಪಿಸಿ ಮಳೆ ಬಂದರೆ ಬಿತ್ತನೆ ಹೇಗಪ್ಪ ಮಾಡಬೇಕು. ಆದರೆ ಇದ್ದ ಎತ್ತುಗಳು ಹಿಂದಿನ ಬರಲಗಾದಿಂದಾಗಿ ಅನೆಕರು ಮಾರಿಕೊಂಡು ಕೈ ಖಾಲಿಯಾಗಿದೆ. ಬಿತ್ತನೆ ಮಾಡಲು ಮುಂದಾದರೆ ಬೀಜ, ಗೊಬ್ಬರ ಖರೀದಿಗೂ ಹಣವಿಲ್ಲ. ಸಕಾಲಕ್ಕೆ ಬ್ಯಾಂಕುಗಳು ಸಹ ಸಾಲ ನೀಡುವುದಿಲ್ಲ. ಸಾಹುಕಾರಿ ಸಾಲಗಳು ಈ ಬಾರಿ ದೊರೆಯದ ಪರಿಸ್ಥಿತಿ ಉಂಟಾಗಿದ್ದು, ರೈತರಿಗೆ ಬರದ ಹಸಿವಿನ ನಡುವೆ ಮುಂಗಾರು ಹಂಗಾಮಿನ ಸಿದ್ಧತೆಯ ಹೋರಾಟ ಮಾಡುವ ಅನಿವಾರ್ಯತೆ ತಂದೊಡ್ಡಿದೆ.

ಸಕಾಲಕ್ಕೆ ಬೀಜ ಒದಗಿಸಿ:

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯೂ ಈ ಭಾಗದ ರೈತರ ಬೀಜದ ಬೇಡಿಕೆಯನ್ನು ಸಕಾಲಕ್ಕೆ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಂಡು ಉದ್ದು, ಹೆಸರು, ತೊಗರಿ, ಶೇಂಗಾ, ಸೂಯಾಭಿನ್, ಸಜ್ಜೆ, ಸೂರ್ಯಕಾಂತಿ ಎಳ್ಳು ಮತ್ತಿತರ ಬೀಜಗಳ ಬೇಡಿಕೆ ಇದೆ. ಮಳೆ ಬಿದ್ದ ಮೇಲೆ ಬೀಜ, ಗೊಬ್ಬರಕ್ಕಾಗಿ ಅಲೆದಾಡಿ ದಿನದೊಡುವಂತೆ ಆಗಬಾರದು. ಇಲಾಖೆಯಲ್ಲಿ ಈಗಾಗಲೇ ಮೊದಲೆ ಬೀಗಳ ದಾಸ್ತಾನು ಆಗಬೇಕು ಎನ್ನುತ್ತಾರೆ ರೈತರು.

ಸಬ್ಸಿಡಿ ನಾಮಕೆವಾಸ್ತೆ ಬೇಡ:

ಬಿತ್ತನೆ ಬೀಜವು ಕೃಷಿ ಇಲಾಖೆಗೆ ಪೂರೈಕೆ ಮಾಡುವಾಗ ಕಂಪನಿಗಳು ಬೆಲೆ ಹೆಚ್ಚಿಸಿ ಪೂರೈಕೆ ಮಾಡುತ್ತವೆ. ಕಂಪನಿಗಳಿಂದ ಖರೀದಿಸುವ ಬೀಗಳು ಕೃಷಿ ಇಲಾಖೆ ಶೇ ೫೦ಷ್ಟು ಸಬ್ಸಡಿ ಕಡಿತ ಮಾಡಿ ವಿತರಣೆ ಮಾಡಿದ ಮೇಲೂ ಬೆಲೆಯಲ್ಲಿ ಹೊರಗಡೆ ಯಾವುದೇ ವ್ಯಾತಾಸವಾಗದೆ ಇರುವುದು ರೈತರಿಗೆ ಬೀಜಗಳು ಯಥಾಸ್ಥಿತಿಯಲ್ಲೇ ಖರೀದಿಸುಸಂತಾಗುತ್ತದೆ. ಇದು ಸರ್ಕಾರದ ಸಬ್ಸಿಡಿಯ ಯಾವ ಪರುಷಾರ್ಥಕ್ಕೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಮಾಗಿ ಉಳಿಮೆ ಮದ್ದು: ಬೆಳೆ ಕಟಾವು ಆದ ಮೇಲೆ ಮಾಗಿ ಉಳಿಮೆ ನಿರಂತರವಾಗಿ ಮಾಡಬೇಕು. ಮೂರು ರೀತಿಯಲ್ಲಿ ಲಾಭವಾಗುತ್ತದೆ. ಹೊಲದಲ್ಲಿ ಬಿದ್ದ ಹುಲ್ಲು, ಕಸ ಕಣಿಕೆ ಮಣ್ಣಿನಲ್ಲಿ ಸಿಕ್ಕು ಮಳೆ ಬಂದಾಗ ಕೊಳೆತು ಗೊಬ್ಬರವಾಗಿ ಪರಿಣಮಿಸುತ್ತದೆ. ನೆಟೆ ರೋಗ ನಿರ್ವಹಣೆ, ಉಳುಮೆಯಿಂದ ಭೂಮಿ ನೀರು ಇಂಗಿಸಿಕೊಳ್ಳುತ್ತದೆ. ಅಲ್ಲದೆ, ರೋಗಾಣು ಜೀವಿಗಳು ಬಿಸಿಲಿಗೆ ಬಿದ್ದಾಗ ಪಕ್ಷಿಗಳು ತಿಂದ್ದುಹಾಕುತ್ತಿವೆ. ಅಲ್ಲದೆ, ಕೆಲವೊಂದು ಸತ್ತು ಹೋಗುವುದರಿಂದ ರೋಗವು ನಿರ್ವಹಣೆಯಾಗಿ ಬೆಳೆಗೆ ಅನುಕೂಲವಾಗುತ್ತದೆ ಎಂದು ಕೃಷಿ ತಜ್ಞರು ಮತ್ತು ಕೃಷಿ ವಿಜ್ಞಾನಿಗಳು ಹೇಳುತ್ತಾರೆ. 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here