ಅನುಭವ ಮಂಟಪ ಉತ್ಸವ: ಬಸವಪ್ರಭಾತ ಫೆರಿಯಿಂದ ಪಟ್ಟಣದಲ್ಲಿ ಮೂಡಿಸಿದ ಸಂಚಲನ

0
170

ಬಸವಕಲ್ಯಾಣ: ನವೆಂಬರ 23 ಮತ್ತು 24ರಂದು ನಡೆಯುವ ಅನುಭವ ಮಂಟಪ ಉತ್ಸವದ ನಿಮಿತ್ಯವಾಗಿ ಪರಮಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮುಲಕ ಪ್ರಸಾರ, ಪ್ರಚಾರ ಕಾರ್ಯ ನಡೆದಿವೆ.

ಪೂಜ್ಯರ ನೇತೃತ್ವದಲ್ಲಿ ಮುಂಜಾನೆ 7 ಗಂಟೆಗೆ ಪಟ್ಟಣದ ಜೈಶಂಕರ ಕಾಲೋನಿಯಲ್ಲಿ ಬಸವಪ್ರಭಾತ ಫೇರಿಯನ್ನು ನಡೆಸಲಾಯಿತು. ಓಂ ಶ್ರೀ ಗುರುಬಸವಲಿಂಗಾಯ ನಮಃ ಎಂಬ ಮಂತ್ರಘೋಷದಿಂದ ಮುಂಜಾನೆಯ ವಾತಾವರಣ ಪ್ರಸನ್ನವಾಗಿತ್ತು ಒಣಿಯ ಅನೇಕ ಸದ್ಭಕ್ತರು ಬಸವಪ್ರಭಾತ ಫೇರಿಯ ಸ್ವಾಗತ ಹರ್ಷಭರಿತವಾಗಿ ಮಾಡಿದರು, ಪ್ರತಿಒಬ್ಬರು ಮನೆಯಮುಂದೆ ರಂಗೋಲಿಯನ್ನು ಹಾಕಿ ಶರಣುಬನ್ನಿ ಎಂಬ ಸ್ವಾಗತದ ನುಡಿಯನ್ನು ಬರೆಸಿ ಪುಷ್ಪವೃಷ್ಠಿ ಮಾಡಿದರು. ಪೂಜ್ಯರ ಜೊತೆಗೆ ಅನೇಕ ಹರ-ಚರ ಮೂರ್ತಿಗಳು, ಬಸವಭಕ್ತರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರಭಾತಫೇರಿಯ ಮೂಲಕ ಅನುಭವ ಮಂಟಪ ಉತ್ಸವದ ಆಮಂತ್ರಣವನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿ 2ದಿನ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಂಡರು. ಇದೆ ರೀತಿಯಲ್ಲಿ ಪಟ್ಟಣದ ಬೇರೆ ಬೇರೆ ಒಣಿಗಳಲ್ಲಿ 21 ತಾರಿಕಿನವರೆಗೆ ಬಸವಪ್ರಭಾತ ಫೇರಿಯನ್ನು ಮುಂಜಾನೆ 7 ಗಂಟೆಗೆ ಜರುಗುತ್ತದೆ. ಆಸಕ್ತರು ಈ ಬಸವಪ್ರಭಾತ ಫೇರಿಯಲ್ಲಿ ಭಾಗವಹಿಸಿಬೇಕೆಂದು ವಿನಂತಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here