ಸುರಪುರದಲ್ಲಿ ಹಡಪದ ಸಮಾಜಕ್ಕೆ ಜಮೀನು ನೀಡಿವಂತೆ ತಹಶೀಲ್ದಾರ ಅವರಿಗೆ ಮನವಿ

0
112

ಸುರಪುರ: ಹಡಪದ ಸಮಾಜದ ಸಮೂದಾಯ ಭವನ ನಿರ್ಮಿಸಲು ನಗರದಲ್ಲಿ 2 ಎಕರೆ ಜಮೀನು ಮಂಜೂರು ಮಾಡುವಂತೆ ಹಡಪದ ಅಪ್ಪಣ್ಣ ಸಮಾಜದ ಮುಖಂಡರು ಮಂಗಳವಾರ ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಅವರಿಗೆ ಮನವಿ ಸಲ್ಲಿಸಿದರು.

ಸಮಾಜದ ಅಧ್ಯಕ್ಷ ನಿಂಗಣ್ಣ ಹಡಪದ ಮಾತನಾಡಿ, ’ಹಡಪದ ಸಮಾಜ ಹಿಂದುಳಿದಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತೊಂದರೆ ಇದೆ. ಸಮಾಜದ ಜನರಿಗೆ ಸಮಾರಂಭಗಳನ್ನು ಮಾಡಲು ಸಮೂದಾಯ ಭವನ ಇಲ್ಲ. ಮಕ್ಕಳಿಗೆ ಹಾಸ್ಟೆಲ್ ನಿರ್ಮಿಸಲು ಸ್ಥಳದ ಅವಶ್ಯಕತೆ ಇದೆ’ ಎಂದರು.

Contact Your\'s Advertisement; 9902492681

’ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆಯ ಕುಮಾರ ಪಟ್ಟಣದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ ಹಜಾಮ ಎಂಬ ಶಬ್ದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಈ ಶಬ್ದಕ್ಕೆ ಜಾತಿ ನಿಂದನೆ ಕಾನೂನು ತರಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಡಪದ, ಶರಣಪ್ಪ ಅಮ್ಮಾಪುರ, ದೇವಿಂದ್ರಪ್ಪ ಸುರಪುರ, ದೇವರಾಜ ರುಕ್ಮಾಪುರ, ಆದಪ್ಪ ದೇವಪುರ, ಮುದಕಪ್ಪ ಯಕ್ತಾಪುರ, ಮಲ್ಲಿಕಾರ್ಜುನ ಹಡಪದ, ನಿಂಗಣ್ಣ ಸಿದ್ದಾಪುರ, ಶಿವಪಾದ ಕಕ್ಕೇರಾ, ನೀಲಕಂಠ ಕಕ್ಕೇರಾ, ಅಶೋಕ ಸುರಪುರ, ಅಪ್ಪಣ್ಣ ಕೆಂಭಾವಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here