ಸಮಸ್ಯೆಗಳಿಗೆ ವಿಜ್ಞಾನದಲ್ಲಿದೆ ಪರಿಹಾರ: ಹರ್ಷಾನಂದ ಗುತ್ತೇದಾರ

0
217

ಕಲಬುರಗಿ: ಜಗತ್ತು ಇಂದು ಎದುರಿಸುತ್ತಿರುವ ಜಾಗತಿಕ ಸಮಸ್ಯೆಗಳಿಗೆ ಮೂಲ ವಿಜ್ಞಾನದಲ್ಲಿ ಪರಿಹಾರ ಹೊಂದಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯ ಹರ್ಷಾನಂದ ಗುತ್ತೇದಾರ ಅಭಿಪ್ರಾಯಪಟ್ಟರು.

ಮಂಗಳವಾರ ಆಳಂದ ತಾಲೂಕಿನ ಖಜೂರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಖಜೂರಿ ಕ್ಲಸ್ಟರ್ ಮಟ್ಟದ ಎರಡು ದಿನಗಳ ಮಕ್ಕಳ ವಿಜ್ಞಾನ ಹಬ್ಬದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಎರಡು ದಿನದ ಸಮ್ಮೇಳನ ಅಚ್ಚುಕಟ್ಟಾಗಿ ಜರುಗಿದೆ. ಊಟದ ವ್ಯವಸ್ಥೆಯಿಂದ ಹಿಡಿದು ಪರಿಕರ ವ್ಯವಸ್ಥೆಗಳವರೆಗೆ ಎಲ್ಲವನ್ನು ಒದಗಿಸಿಕೊಟ್ಟಿದ್ದಾರೆ. ರಾಕೇಟ್ ಉಡಾವಣೆ ನಿಯಮ, ಗ್ರಹಣ, ತ್ರಿಡಿ ತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳನ್ನು ಕಲಿಸಿಕೊಟ್ಟಿದ್ದಾರೆ.- ಪ್ರೀತಿ ವಿದ್ಯಾರ್ಥಿನಿ, ಖಂಡಾಳ.

ಮಕ್ಕಳಲ್ಲಿ ಹುದುಗಿರುವ ಕ್ರಿಯಾಶೀಲತೆಯನ್ನು ಹೊರ ತೆಗೆಯುವುದು ಪ್ರತಿಯೊಬ್ಬ ಶಿಕ್ಷಕರ
ಆದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಆ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು.
ಬೃಹ್ಮಾಂಡದಲ್ಲಿ ನಡೆಯುವ ಪ್ರತಿ ಕ್ರಿಯೆಗಳು ವಿಜ್ಞಾನದ ಸಿದ್ಧಾಂತವನ್ನು ಅವಲಂಬಿಸಿಯೇ ನಡೆಯುತ್ತವೆ ಅದಕ್ಕಾಗಿ ವಿದ್ಯಾರ್ಥಿಗಳು ಮೂಲ ವಿಜ್ಞಾನವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ನುಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಪ್ರೌಢ ಶಾಲೆ ಮುಖ್ಯ ಗುರು ಶ್ರೀಮಂತ ಜಿಡ್ಡೆ, ರಾಜ್ಯ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ಮಾಡ್ಯಾಳೆ ಮಾತನಾಡಿದರು. ತಾ.ಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಗ್ರಾ.ಪಂ ಉಪಾಧ್ಯಕ್ಷ ಶ್ರೀಶೈಲ ಬಂಡೆ, ಪ್ರಕಾಶ ವಾರಿಕ, ಸಿಆರ್‌ಸಿ ವೆಂಕಟ ಚವ್ಹಾಣ, ಮುಖ್ಯ ಗುರು ವಿಜಯಲಕ್ಷ್ಮೀ ವೇದಿಕೆಯ ಮೇಲಿದ್ದರು.

ಖಜೂರಿ ಕ್ಲಸ್ಟರ್‌ನ ಬಬಲೇಶ್ವರ, ಜಮಗಾ (ಆರ್), ಬಂಗರಗಾ, ಖಂಡಾಳ, ಜವಳಗಾ, ಕೋತನ ಹಿಪ್ಪರ್ಗಾ, ರುದ್ರವಾಡಿ, ಖಜೂರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಶಿಕ್ಷಕ ಯೋಗಿರಾಜ ಮಾಡ್ಯಾಳೆ ಸ್ವಾಗತಿಸಿದರು. ಇರ್ಷಾದ್ ಬೇಗಂ ನಿರೂಪಿಸಿದರೆ, ದಶರಥ ಕಠಾರೆ ವಂದಿಸಿದರು.

ಬಾಕ್ಸ್: ಸರಕಾರಿ ಶಾಲೆಯಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಸಮುದಾಯದ ಸಹಭಾಗಿತ್ವದಲ್ಲಿ ನಡೆದ ಹಬ್ಬ ಯಶಸ್ವಿಯಾಗಿದೆ. ಮಕ್ಕಳು ಸ್ವತ ಅನುಭವಿಸಿ ಕಲಿಯುವುದರಿಂದ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ- ಹರ್ಷಾನಂದ ಗುತ್ತೇದಾರ, ಜಿ.ಪಂ ಸದಸ್ಯರು, ಖಜೂರಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here