ಕಲಬುರಗಿ: ಜಾಮಿಯಾ ವಿಶ್ವವಿದ್ಯಾಲಯದ ಕ್ಯಾಂಪ್ ಒಳಗೆ ನೂಗ್ಗಿ ಹಲವು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ದೆಹಲಿ ಪೊಲೀಸ್ ಕೌರ್ಯ ಖಂಡಿಸಿ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳಬೇಕೆಂದು ಇಲ್ಲಿನ ಗುಲಬರ್ಗಾ ಯುತ್ ವತಿಯಿಂದ ಇಂದು ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಪೊಲೀಸರ ವಿರೋಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತೀಮ್ಮಾಪುರಿ ಚೌಕ್ ಹತ್ತಿರ ಯುವ ಜನರು ಪ್ರತಿಭಟನೆ ವಿವಾದಸ್ಪದ ಪೌರತ್ವ ಕಾಯ್ದೆ ಹಿಂಪಡೆಯುಂತ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ವಿವಿ ಕ್ಯಾಂಪನ್ ನಲ್ಲಿ ಪೊಲೀಸರು ಆಸು ಗ್ಯಾಸ್ ಹಾರಿಸಿ, ವಿವಿಯ ಕ್ಯಾಂಪಸ್ ನ ಲ್ಯಾಬರೇರಿ ಮತ್ತು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳ ಒಳಗೆ ನೂಗ್ಗಿರುವುದು ಕಾನೂನು ಬಾಹಿರವಾಗಿದ್ದಲ್ಲದೇ ವಿದ್ಯಾರ್ಥಿಗಳಿಗೆ ಅಮಾನವೀಯ ಕೃತ್ಯ ವೆಸಗಿದ್ದಾರೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಹಾಗೂ ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ, ನ್ಯಾಯವಾಗಿ ವಾಹಜ್ ಬಾಬಾ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಜಗರ್ ಚುಲಬುಲ್, ಯುತ್ ಕ್ಲಬ್ ಸದಸ್ಯ ಮೊಹಮ್ಮದ್ ಅಸ್ಲಂ, ಮಹಮ್ಮದ್ ಜಮೀಲ್ ಬಾಬಾ, ಜಾಹೀದ್ ಅಲಂದಾರ, ಮೋಹದ್ದಿನ್ ಶೇಖ, ನಜೀರ್ ಶೇಖ, ಸದ್ದಾಂ ಮದ್ರಾಸಿ, ಅಜೀಮ್, ನಸೀರ್ ಹುಸೈನ್, ಸಾದೀಖ್ ಅಲಿ ದೇಶಮುಖ್ ಸೇರಿದಂತೆ ಮುಂತಾದವರು ಇದ್ದರು.