ಕಲಬುರಗಿ: ಕೇಂದ್ರ ಸರಕಾರವು ಜನವಿರೋಧಿ ನೀತಿ ಅನುಸರಿಸುತ್ತಾ ಪೌರತ್ವ ಕಾಯ್ದೆ ತಿದ್ದಪಡಿ ತಂದು ಈ ದೇಶದ ಜನರಿಗೆ ಅವಮಾನ ಮಾಡಿದೆ. ಈ ದೇಶದ ಹಿಂದು ಧರ್ಮದವರು ಮಾತ್ರ ಇರಬೇಕು ಅನ್ಯ ಧರ್ಮದವರು ಪೌರತ್ವ ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣ ಮಾಡಿದೆ. ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ 19 ರಂದು ಬೃಹತ್ ಮೆರವಣಿಗೆ ಹಮ್ಮಿಕೊಳ್ಳಾಗಿದೆ ಎಂದು ಪೀಪಲ್ಸ್ ಫೋರಂನ ಮುಖಂಡ ಮಾರುತು ಮಾನಪಡೆ ಹೇಳಿದರು.
ಅಂದು ಬೆಳಿಗ್ಗೆ ಎಲ್ಲಾ ಅಂಗಡಿ ಮುಗ್ಗಟಗಳು ಬಂದ್ ಮಾಡಿ ಕೇಂದ್ರದ ನೀತಿಯನ್ನು ವಿರೋಧಿಸಬೇಕು ಹಾಗೂ ಇಲ್ಲಿ ಯಾವುದೇ ಬಲವಂತದಿಂದ ಬಂದ್ ಮಾಡುವದಿಲ್ಲ ಎಂದು ಜಿಲ್ಲೆಯ ಎಲ್ಲಾ ನಾಗರಿಕರು, ವ್ಯಾಪರಸ್ಥರು, ವರ್ತಕರು, ಅಡತ ಮಾಲೀಕರು, ಅಟೋ ಚಾಲಕರು ಸೇರಿದಂತೆ ಎಲ್ಲಾ ಸಾರ್ವಜನಿಕರು ತಮ್ಮ ವ್ಯಾಪರವನ್ನು ಸ್ಥಗಿತಗೊಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಅನೇಕ ಜನವಿರೋಧಿ ನೀತಿಯಿಂದಾಗಿ ಇಂದು ಜಿಡಿಪಿ, ಆರ್ಥಿಕ ಕುಸಿತ, ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಾಲ ಮಾಡಿ ಓಡಿ ಹೋದವರನ್ನು ರಕ್ಷಿಸುವ ಕೆಲಸ ಕೇಂದ್ರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಂಡವಾಳ ಶಾಹಿಗಳ ಕೈಲ್ಲಿ ಸರಕಾರಿ ಸ್ವಾಮ್ಯದ ಎಲ್ಲಾ ಕಂಪನಿಗಳು ಸೇರುತ್ತವೆ ಎಂದು ಮಾರುತಿ ಮಾನ್ಪದೆ ಕಳವಳ ವ್ಯಕ್ತ ಪಡಿಸಿದರು.
ಇಲ್ಲಿ ಒಂದೇ ಕೋಮಿನ ಜನರ ವಿರುದ್ಧ ಈ ಕಾಯ್ದೆ ಅಲ್ಲ ಈ ದೇಶದ ಪ್ರತಿಯೊಬ್ಬ ನಾಗರಿಕರ ವಿರುದ್ಧ ಕಾಯ್ದೆಯಾಗಿದೆ. ಇಲ್ಲಿಯೇ ಹುಟ್ಟಿದ ನಾವು ಈ ದೇಶದ ನಾಗರಿಕರು ಎಂದು ಸಾಭಿತು ಪಡಿಸಲು ದಾಖಲೆ ಒದಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೇಶದಲ್ಲಿ ಜನಸಿದ ನಾವು ಎಲ್ಲಿಂದ ನಮ್ಮ ನಾಗರಿಕತ್ವದ ಪ್ರಮಾಣ ಪತ್ರ ತರಬೇಕು. ಅನೇಕರು ಗುಳೆ ಹೋಗಿ ದೊಡ್ಡ ದೊಡ್ಡ ನಗರಗಳಲ್ಲಿ ರಸ್ತೆಯ ಪಕ್ಕದಲ್ಲಿ ಜೀವನ ನಡೆಸುತ್ತಾರೆ. ಅವರೇಲ್ಲಿಂದ ಪುರಾವೆ ತರಬೇಕು ಎಂದು ದಲಿತ ಮುಖಂಡ ಡಾ. ವಿಠ್ಠಲ ದೊಡ್ಡಮನಿ ಪ್ರಶ್ನಿಸಿದರು. ಇದೆಲ್ಲ ತಮ್ಮ ಓಟಬ್ಯಾಂಕ್ ಭದ್ರ ಪಡಿಸಿಕೊಳ್ಳುವ ನೀತಿ ಹಾಗೂ ತಮ್ಮ ತಪ್ಪು ಮುಚ್ಚಿಕೊಳ್ಳುವ ಉದ್ದೇಶವಾಗಿದೆ ಬೇಸರ ವ್ಯಕ್ತ ಪಡಿಸಿದ ಅವರು ಎಲ್ಲಾ ದಲಿತ ಸಂಘಟನೆಗಳು ಹಾಗೂ ಸಂವಿಧಾನವನ್ನು ಬೆಂಬಲಿಸುವ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಫೋರಂ ಮುಂಖಡರಾದ ಉಸ್ತಾದ ನಾಸೀರ ಹುಸೇನ್, ಬಾಬಾ ಖಾನ್, ಮೌಲಾ ಮುಲ್ಲಾ, ಅಸಗರ್ ಚುಲ್‌ಬುಲ್, ಸೈಯದ್ ಅಜರ್ ಅಲಿ, ವಾಹಬ್ ಬಾಬಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.