ಮುಸ್ಲೀಂ ವೇಷ ಧರಿಸಿ ರೈಲು, ಬಸ್ಸುಗಳಿಗೆ ಬೆಂಕಿ ಹಚ್ಚುತ್ತಿದ್ದ ಬಿಜೆಪಿ ಕಾರ್ಯಕರ್ತನ ಬಂಧನ

0
2188

ಮುರ್ಶಿದಾಬಾದ್ (ಪಶ್ಚಿಮ ಬಂಗಾಳ): ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಮುಸ್ಲೀಮರಂತೆ ಟೋಪಿ ಧರಿಸಿ ಪಾಲ್ಗೊಂಡು ಬಳಿಕ ಹಿಂಸಾತ್ಮಕ ಕೃತ್ಯದಲ್ಲಿ ತೊಡಗುತ್ತಿದ್ದ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಭಿಷೇಕ್ ಸರ್ಕಾರ್ ಈ ಕೃತ್ಯ ಎಸಗುತ್ತಿದ್ದು, ರೈಲು ಹಾಗೂ ಬಸ್ ಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಉಂಟುಮಾಡುತ್ತಿದ್ದ. ಬಳಿಕ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದ ಎನ್ನಲಾಗಿದೆ.

Contact Your\'s Advertisement; 9902492681

ಈತನ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದನ್ನು ಕಂಡ ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಈ ಹಿಂದೆಯೂ ಹಲವಾರು ಪ್ರತಿಭಟನೆಗಳಲ್ಲಿ ಮುಸ್ಲೀಂ ವೇಷ ಧರಿಸಿ ಅಲ್ಲಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿದ್ದ ಎನ್ನಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here